Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗೆ ‘ತುಳಸಿ ಟೀ’ ಅತ್ಯುತ್ತಮ ಔಷಧ.! ಯಾವಾಗ, ಹೇಗೆ ಕುಡಿಯಬೇಕು ಗೊತ್ತಾ?

26/06/2025 10:06 PM

ಮೋದಿ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

26/06/2025 9:51 PM

BREAKING : ಮಧ್ಯ ಆಫ್ರಿಕಾ ಗಣರಾಜ್ಯದ ಶಾಲೆಯಲ್ಲಿ ಸ್ಫೋಟ, ಕಾಲ್ತುಳಿತ ; 29 ಮಕ್ಕಳ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ

26/06/2025 9:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News: ಇನ್ಮುಂದೆ ಈ ಕೋರ್ಸ್ ಮುಗಿಸಿದವರಿಗೆ ‘ರಾಜ್ಯ ಸರ್ಕಾರ’ದಿಂದಲೇ ವಿದೇಶದಲ್ಲಿ ‘ಉದ್ಯೋಗ ಭಾಗ್ಯ’
KARNATAKA

Good News: ಇನ್ಮುಂದೆ ಈ ಕೋರ್ಸ್ ಮುಗಿಸಿದವರಿಗೆ ‘ರಾಜ್ಯ ಸರ್ಕಾರ’ದಿಂದಲೇ ವಿದೇಶದಲ್ಲಿ ‘ಉದ್ಯೋಗ ಭಾಗ್ಯ’

By kannadanewsnow0923/06/2024 8:23 AM

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ರಾಜ್ಯದ ಯುವಕರಿಗೆ ಹೊರದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರ ಭಾಗವಾಗಿ ಸ್ಲೋವಾಕಿಯಾ ರಾಷ್ಟ್ರದಲ್ಲಿ ಬಿಇ, ಡಿಪ್ಲೊಮೊ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ 94 ಯುವಕರಿಗೆ ಉದ್ಯೋಗ ನೀಡುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಯಶಸ್ವಿಯಾಗಿದೆ.

ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ತೆಗೆದುಕೊಂಡ ದಿಟ್ಟನಿರ್ಧಾರದಿಂದಾಗಿ ಉದ್ಯೋಗವಿಲ್ಲದೆ ಕೆಲಸ ಹರಸುತ್ತಿದ್ದ ಯುವಕರು ಇದೀಗ ವಿದೇಶದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದು, ತಮ್ಮ ಭವಿಷ್ಯವ ರೂಪಿಸಿಕೊಂಡಿದ್ದಾರೆ.

ಯುವಕರ ಕೌಶಲ್ಯಾ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನುನೀಡಲಾಗುತ್ತಿದೆ. ಅವರಿಗೆ ಇಲ್ಲಿಯೇ ತರಬೇತಿ, ವೀಸಾ ವ್ಯವಸ್ಥೆ, ಗೃಹ ಇಲಾಖೆಯಲ್ಲಿ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮಾತ್ರವಲ್ಲದೆ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿವ್ಯವಸ್ಥೆ, ಸಂಬಂಧಪಟ್ಟವರ ಭೇಟಿಗೆ ಬೇಕಾದ ಇನ್ನಿತರಸೌಲಭ್ಯಗಳನ್ನು ಸಹ ಇಲಾಖೆಯ ಅಧಿಕಾರಿಗಳೇ ನಿಗಾವಹಿಸುತ್ತಾರೆ.

ಐಟಿಬಿಟಿ, ವಿಜ್ಞಾನ, ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚೂಣಿಯಲ್ಲಿದೆ. ಇದನ್ನು ಮನಗಂಡ ಸ್ಲೋವಾಕಿಯಾ ರಾಷ್ಟ್ರವು ಎರಡೂವರೆ ಸಾವಿರ ಅಸೆಂಬ್ಲಿ ಲೈನ್ ಆಪರೇಟರ್ ಗಳನ್ನು ನೇಮಕಮಾಡಿಕೊಳ್ಳಲು ಮುಂದೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ತಮ್ಮ ಅಧಿಕಾರಿಗಳ ತಂಡವನ್ನು ಸಿದ್ದವಿರಿಸಿ ವಿದೇಶಾಂಗ ವ್ಯವಹಾರಗಳ ಇಲಾಖೆ ಜೊತೆ ಒಡಂಬಡಿಕೆ ಮಾಡಿಕೊಂಡರು.

ಸ್ಲೊವೆನಿಯಾ ರಾಷ್ಟ್ರವು 2500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಇಲಾಖೆ ವತಿಯಿಂದ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಯಿತು. ಇದರ ಮೊದಲ ಭಾಗವಾಗಿ 94 ಅಭ್ಯರ್ಥಿಗಳಿಗೆ — 54 ಮಂದಿ ಐಟಿಐ, 31 ಮಂದಿ ಡಿಪ್ಲೊಮೊ – ಆ ದೇಶಕ್ಕೆ ಬೀಳ್ಕೊಡಲಾಗಿದೆ.

ಉಚಿತ ತರಬೇತಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿಡದಿ ಸಮೀಪ ಇರುವಟೊಯೋಟಾ ಕೀರ್ಲೋಸ್ಕರ್‍ನಲ್ಲಿ ತರಬೇತಿ ನೀಡಲಾಯಿತು. ಈಮೊದಲು ಇಲ್ಲಿ ತರಬೇತಿ ಪಡೆಯಲು 35,000 ರೂ. ಖರ್ಚುವೆಚ್ಚವಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳೇ ಇಲ್ಲಿತರಬೇತಿ ಪಡೆಯುತ್ತಾರೆ ಎಂಬುದನ್ನು ಮನಗಂಡ ಸಚಿವ ಪಾಟೀಲ್ಅವರು, ಯಾವುದೇ ಒಬ್ಬ ಅಭ್ಯರ್ಥಿಯು ಒಂದೇ ಒಂದು ಪೈಸಾಕಟ್ಟುವುದು ಬೇಡ. ಎಲ್ಲ ಹಣವನ್ನು ಇಲಾಖೆ ವತಿಯಿಂದಲೇಭರಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿಮಾನವೀಯತೆ ಮೆರೆದರು.

ತರಬೇತಿ ಪಡೆದ ನಂತರ ಸ್ಲೋವಾಕಿಯಾದಲ್ಲಿ ಇವರಿಗೆ ತಿಂಗಳಿಗೆ970 ಯೂರೋ (86 ಸಾವಿರ ರೂ.) ವೇತನ ನೀಡಲಾಗುತ್ತಿದೆ. ಜೂನ್ 5ರಂದು ಮೊದಲ ತಂಡ ಹಾಗೂ ಜೂ.20ರಂದು 2ನೇತಂಡವನ್ನು ಬೀಳ್ಕೊಡಲಾಗಿದೆ. ಜೂ.24 ಮತ್ತು ಜು.1ರಂದುಉಳಿದ ತಂಡಗಳು ಸ್ಲೋವಾಕಿಯಾಕ್ಕೆ ತೆರಳಲಿದೆ ಎಂದುಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕೆಎಸ್‍ಡಿಸಿ ಇದೀಗ 37 ಚಾಲಕರನ್ನು ಹಂಗೇರಿಗೆ ದೇಶಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲದೆ ಮಾರಿಷಸ್‍ಗೆ ವೆಲ್ಡರ್‍ಗಳು, ಬಾಯ್ಲರ್ತಯಾರಕರು ಮತ್ತು ಇತರ ಬ್ಲೂ ಕಾಲರ್ ಕೆಲಸಗಳಿಗಾಗಿ ಪ್ರಕ್ರಿಯೆಗೆಚಾಲನೆ ನೀಡಿದ್ದಾರೆ.

ಆಸ್ಟ್ರೇಲಿಯಾ, ಜಪಾನ್, ಫಿನ್ಲ್ಯಾಂಡ್, ಜರ್ಮನಿ, ನಾರ್ವೆಯಿಂದದಾದಿಯರ ಬೇಡಿಕೆಯನ್ನು ಪೂರೈಸಲು ಮುಂದಾಗಿದೆ. ಅಲ್ಲದೆಸ್ಲೊವೇನಿಯಾ ಕೂಡ ಹೆಚ್ಚುವರಿಯಾಗಿ
ದೊಡ್ಡ ಸಂಖ್ಯೆಯ ಆಪರೇಟರ್‍ಗಳನ್ನು ಕೇಳಿಕೊಂಡಿದೆ. ಜೊತೆಗೆ ಗಲ್ಫ್ಮತ್ತು ಯುರೋಪ್ ರಾಷ್ಟ್ರಗಳಿಂದಲೂ ಬೇಡಿಕೆಗಳು ಬಂದಿದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದೇವೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕನಿರ್ದೇಶಕಿ ಎಂ.ಕನಗವಲ್ಲಿ ಹೇಳಿದ್ದಾರೆ.

ಇಂಗ್ಲೀಷ್ ತರಬೇತಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆ ಅಗತ್ಯಇರುವುದನ್ನು ಮನಗಂಡಿರುವ ಕೌಶಲ್ಯಾಭಿವೃದ್ಧಿ ನಿಗಮಆಯ್ಕೆಯಾಗುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ಇಂಗ್ಲೀಷ್ಭಾಷೆ ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿಯೇ ಇಂಗ್ಲೀಷ್ಭಾಷೆಯಲ್ಲಿ ಪರಿಣಿತಿ ಹೊಂದಿರುವವರನ್ನು ಆಯ್ಕೆ ಮಾಡಿಕೊಂಡುತರಬೇತಿ ನೀಡಲಿದೆ.

ಜೂ.24ರಿಂದ ‘ದ್ವಿತೀಯ PUC’ ಪರೀಕ್ಷೆ-3 ಆರಂಭ: ‘75,995 ವಿದ್ಯಾರ್ಥಿ’ಗಳು ನೋಂದಣಿ | Karnataka 2nd PUC Exam

‘ದ್ವಿತೀಯ PU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಪರೀಕ್ಷೆ-3ಕ್ಕೆ ಉಚಿತವಾಗಿ ‘BMTC’ ಬಸ್’ನಲ್ಲಿ ತೆರಳಲು ಅವಕಾಶ

Share. Facebook Twitter LinkedIn WhatsApp Email

Related Posts

ಮೋದಿ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

26/06/2025 9:51 PM1 Min Read

BIG NEWS: ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ತಪ್ಪಿದ್ರೆ ನಿಮ್ಮನ್ನೇ ಬದಲು: ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಎಚ್ಚರಿಕೆ

26/06/2025 9:22 PM2 Mins Read

ಕಾನೂನು ಪದವೀಧರರ ಗಮನಕ್ಕೆ: ನ್ಯಾಯಾಂಗ ಆಡಳಿತದಲ್ಲಿ ತರಬೇತಿಗೆ ಅರ್ಜಿ ಆಹ್ವಾನ

26/06/2025 8:46 PM1 Min Read
Recent News

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗೆ ‘ತುಳಸಿ ಟೀ’ ಅತ್ಯುತ್ತಮ ಔಷಧ.! ಯಾವಾಗ, ಹೇಗೆ ಕುಡಿಯಬೇಕು ಗೊತ್ತಾ?

26/06/2025 10:06 PM

ಮೋದಿ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

26/06/2025 9:51 PM

BREAKING : ಮಧ್ಯ ಆಫ್ರಿಕಾ ಗಣರಾಜ್ಯದ ಶಾಲೆಯಲ್ಲಿ ಸ್ಫೋಟ, ಕಾಲ್ತುಳಿತ ; 29 ಮಕ್ಕಳ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ

26/06/2025 9:50 PM

ಅಡುಗೆಮನೆಯಲ್ಲಿ ‘ಗ್ಯಾಸ್ ಸ್ಟೌವ್’ ಪಕ್ಕ ಈ ‘ವಸ್ತು’ಗಳನ್ನ ಇಡುತ್ತೀರಾ.? ಎಷ್ಟು ಅಪಾಯಕಾರಿ ಗೊತ್ತಾ?

26/06/2025 9:45 PM
State News
KARNATAKA

ಮೋದಿ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

By kannadanewsnow0926/06/2025 9:51 PM KARNATAKA 1 Min Read

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪರಿಸರ ಪೂರಕ ಚಟುವಟಿಕೆ ಹಾಗೂ ಕೈಗಾರಿಕೆ, ಉಕ್ಕು ಕ್ಷೇತ್ರಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಲು ಕೇಂದ್ರ…

BIG NEWS: ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ತಪ್ಪಿದ್ರೆ ನಿಮ್ಮನ್ನೇ ಬದಲು: ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಎಚ್ಚರಿಕೆ

26/06/2025 9:22 PM

ಕಾನೂನು ಪದವೀಧರರ ಗಮನಕ್ಕೆ: ನ್ಯಾಯಾಂಗ ಆಡಳಿತದಲ್ಲಿ ತರಬೇತಿಗೆ ಅರ್ಜಿ ಆಹ್ವಾನ

26/06/2025 8:46 PM

JOB ALERT: ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

26/06/2025 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.