ಬೆಂಗಳೂರು: ಯಾರಿಗೆ ಜಾತಿ ಗೊತ್ತಿಲ್ವೋ ಅವರೇ ಜಾತ್ಯಾತೀತರು ಎಂಬುದಾಗಿ ಹೇಳುವ ಮೂಲಕ, ಸಿಎಂ ಸಿದ್ಧರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಅಪ್ಪ ಯಾರು ಗೊತ್ತಿಲ್ವೋ ಅವರ ಜಾತಿ ಗೊತ್ತಿರಲ್ಲ. ಯಾರಿಗೆ ಜಾತಿ ಗೊತ್ತಿಲ್ಲವೋ ಅವರೇ ಜಾತ್ಯಾತೀತರು ಎಂಬುದಾಗಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ಧಾಳಿ ನಡೆಸಿದರು.
ಸಿದ್ದರಾಮುಲ್ಲಾ ಸರ್ಕಾರಕ್ಕೆ ನಿಯತ್ತೇ ಇಲ್ಲ. ಕಾಂಗ್ರೆಸ್ ಜನರನ್ನು ಹುಚ್ಚರನ್ನಾಗಿ ಮಾಡುತ್ತಿದೆ. ಜಾತ್ಯಾತೀತ ಭೂತ ತಲೆಗೆ ಬಿಟ್ಟದ್ದು ಇಂದಿರಾಗಾಂಧಿ. ಕಾಂಗ್ರೆಸ್ ನಿಂದ ಸಂವಿಧಾನದ ಮೇಲೆ ನಿರಂತರ ಅತ್ಯಾಚಾರವಾಗುತ್ತಿದೆ. ಸಂವಿಧಾನದ ಮೂಲಕ ಧರ್ಮ ಒಡೆದರು ಎಂಬುದಾಗಿ ಕಾಂಗ್ರೆಸ್ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿಕಾರಿದರು.
ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ಶಂಕಿತ ನಾಲ್ವರನ್ನು ವಶಕ್ಕೆ ಪಡೆದು ‘NIA ವಿಚಾರಣೆ’
‘ಚುನಾವಣಾ ಬಾಂಡ್’ : ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ‘SBI’ ವಿರುದ್ಧ ‘ನ್ಯಾಯಾಂಗ ನಿಂದನೆ’ ಕೇಸ್