ಧಾರವಾಡ: ಆ ಇಬ್ಬರು ದಂಪತಿಗಳು ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದಾರೆ. ಬೆಳಿಗ್ಗೆಯಾದರೂ ಏಳದೇ ಇದ್ದಾಗ ಕುಟುಂಬಸ್ಥರು ಎದ್ದೇಳಿಸೋದಕ್ಕೆ ನೋಡಿದ್ದಾರೆ. ಆದರೇ ಎದ್ದಿಲ್ಲ. ಆ ಮೂಲಕ ಸಾವಿನಲ್ಲೂ ರೈತ ದಂಪತಿಗಳು ಒಂದಾಗಿರುವಂತ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲೇ ಇಂತಹ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬುವರೇ ಸಾವಿನಲ್ಲೂ ಒಂದಾದಂತ ರೈತ ದಂಪತಿಗಳಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿದಂತ ದಂಪತಿಗಳು ಮಲಗಿದ್ದಾರೆ. ಆದರೇ ಬೆಳಿಗ್ಗೆ ಎಬ್ಬಿಸಲು ಹೋದಾಗ ಎದ್ದಿಲ್ಲ. ಹೀಗೆ ರೈತ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.
ಅಂದಹಾಗೇ ಈಶ್ವರ್ ಹಾಗೂ ಪಾರ್ವತಿ ದಂಪತಿಗಳಿಗೆ ನಾಲ್ವರು ಪುತ್ರಿಯರು. 12 ಮಂದಿ ಮೊಮ್ಮಕ್ಕಳಿದ್ದಾರೆ. ಇಂತಹ ರೈತ ದಂಪತಿಗಳು ನಿನ್ನೆ ಮಲಗಿ, ಇಂದು ಬೆಳಿಗ್ಗೆ ಇನ್ನಿಲ್ಲವಾಗಿ ಸಾವಿನಲ್ಲೂ ಒಟ್ಟಾಗಿ ಪಯಣಿಸಿದ್ದಾರೆ.
Supplements for Heart Health: ಹೃದಯವನ್ನು ಆರೋಗ್ಯಕರವಾಗಿಡಲು ಸೇವಿಸಬೇಕಾದ ಟಾಪ್ 3 ಪೂರಕಗಳು