ಬೆಂಗಳೂರು: ಶಿವರಾಜ್ ಕುಮಾರ್ ರೀತಿಯಲ್ಲಿ ಇನ್ಯಾರು ನಟ ಕಮಲ್ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂಬುದಾಗಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ತಮಿಳು ನಟನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಟ ಶಿವರಾಜ್ ಕುಮಾರ್ ವಿರುದ್ಧವೂ ಗರಂ ಆದಂತ ಅವರು, ಶಿವಣ್ಣ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದರೂ ಅವರೆಲ್ಲ ನಾಡದ್ರೋಹಿಗಳು ಅಂತ ಕೆಂಡಕಾರಿದ್ದಾರೆ.
ನಟ ಕಮಲ್ ಹಾಸನ್ ಹೇಳಿಕೆ ನಮ್ಮ ನಾಡಿಗೆ ಅವಮಾನ. ಈ ಘಟನೆಗೆ ಸಾಕ್ಷಿಯಾದಂತ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟಿದ್ದಾರೆ. ಅವರು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಬೇಕಿತ್ತು ಎಂದರು.
ನಾಡು ನುಡಿಗೆ ಧಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೇ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂಬುದಾಗಿ ಬೇಸರ ಹೊರ ಹಾಕಿದರು.
ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ. ಹಾಗಿದ್ದರೇ ಕನ್ನಡ ವಿಚಾರಕ್ಕೆ ಬಂದಾಗ ನೀವೇನು ಮಾಡ್ತಿದ್ರಿ ಎಂದು ಪ್ರಶ್ನಿಸಿದಂತ ಅವರು, ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿ ತನ ಎಂದರಲ್ಲದೇ ಶಿವಣ್ಣ ರೀತಿಯಲ್ಲಿ ಇನ್ನೂ ಯಾರು ಅವರ (ಕಮಲ್ ಹಾಸನ್) ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಅಂತ ಮಾರ್ಮಿಕವಾಗಿ ನುಡಿದು, ವಾಗ್ಧಾಳಿ ನಡೆಸಿದರು.
ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!