ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮಾಡಿರುವ ಈ ಕೆಲಸ ಚಿತ್ರರಂಗಕ್ಕೆ ಶೋಭೆ ತರುವಂತದಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಈ ಘಟನೆ ಚಿತ್ರರಂಗಕ್ಕೆ ಶೋಭೆ ತರುವಂತದಲ್ಲ. ರಾಜ್ ಕುಮಾರ್, ವಿಷ್ಣವರ್ಧನ್, ಅಂಬರೀಶ್ ಅಂತಹವರನ್ನು ನೋಡಿ ದರ್ಶನ್ ಕಲಿಯಬೇಕು. ತಪ್ಪು ಮಾಡಿದ್ರೆ ಕರೆದು ಬುದ್ದಿ ಹೇಳಬೇಕಿತ್ತು ಎಂದರು.
ಕೊಲೆಯಾದ ರೇಣುಕಾಸ್ವಾಮಿ ತಂದೆ ತಾಯಿಗೆ ನಾವು ಧೈರ್ಯ ಹೇಳಬೇಕು. ಯಾರದ್ದೂ ತಪ್ಪು, ಯಾರು ಸರಿ ಅನ್ನೋದನ್ನು ಪೊಲೀಸರು ನೋಡಬೇಕಾಗುತ್ತದೆ ಎಂದು ಹೇಳಿದ್ದಾರೆ.