ಹಾವೇರಿ: ಬಿಗ್ ಬಾಸ್ ಸೀಸನ್-12ರಲ್ಲಿ ಗಿಲ್ಲಿ ನಟ ಗೆಲ್ಲೋದು ಖಾಯಂ. ಗಿಲ್ಲಿ ಅಣ್ಣ ನನ್ನ ಫೇವರಿಟ್. ಅವರೇ ವಿನ್ನರ್ ಆಗೋದಾಗಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭವಿಷ್ಯ ನುಡಿದಿದ್ದಾರೆ.
ಹಾವೇರಿಯ ಸವಣೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾರನ್ನು ವಿನ್ನರ್ ಎಂಬುದಾಗಿ ಘೋಷಣೆ ಮಾಡುತ್ತಾರೆ ಅಂತ ಎದೆಯಲ್ಲಿ ಢವಢವ ಶುರುವಾಗಿದೆ. ಈ ಬಾರಿ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದಭಾವ ಇರೋದಿಲ್ಲ. ಈ ಬಾರಿ ಅತೀ ಹೆಚ್ಚು ವೋಟಿಂಗ್ ಆಗಿದೆ. ಅತೀ ಹೆಚ್ಚು ವೋಟ್ ಗಿಲ್ಲಿ ನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟಿಂಗ್ ಮಾಡಿರೋದಾಗಿ ತಿಳಿಸಿದರು.
ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಅಣ್ಣ ಗೆಲ್ಲುತ್ತಾನೆ. ನಾನು ಮತ್ತು ಗಿಲ್ಲಿ ಭರ್ಜರಿ ಬ್ಯಾಚುಲರ್, ಕಾಮಿಡಿ ಕಿಲಾಡಿ ಶೋ ಮಾಡಿದ್ದೀವಿ. ಗಿಲ್ಲಿ ಅಣ್ಣನಿಗೆ ಹೆಚ್ಚು ವೋಟ್ ಬಂದಿರೋದು. ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್ ಅಂತ ಹೇಳಿದರು.
BREAKING: ‘R ಕನ್ನಡ’ ವಾಹಿನಿಯ ಸಂಪಾದಕರ ಹುದ್ದೆಗೆ ‘ಶೋಭಾ ಮಳವಳ್ಳಿ’ ರಾಜೀನಾಮೆ
ಏಪ್ರಿಲ್ ನಿಂದ ಪ್ಲಾಸ್ಟಿಕ್ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ








