ಕೆಎನ್‌ಎನ್‌ಡಿಜಿಟಲ್‌ಡೆಸ್ಕ್; ಎಲ್ಲರ ದಾಂಪತ್ಯ ಜೀವನದ ಕಥೆಯೇ ಅಷ್ಟು. ದಾಂಪತ್ಯದಲ್ಲಿ ಜಗಳ ಇಲ್ಲ ಎಂದರೆ ಅದು ನಂಬಲಾಗದು. ಪ್ರತಿಯೊಬ್ಬರ ದಾಂಪತ್ಯದಲ್ಲಿ ಜಗಳ ಇದ್ದೇ ಇರುತ್ತದೆ. ಕೆಲ ಸಣ್ಣಪುಟ್ಟ ವಿಷಯಕ್ಕೆ ಆರಂಭವಾದ ಜಗಳಗಳು ಮುಂದೆ ಬೇರೆ ಸ್ವರೂಪವನ್ನೇ ಪಡೆದುಕೊಳ್ಳುತ್ತವೆ. ಭಾರತೀಯ ಮಾನಸಿಕ ತಜ್ಞರ ಪ್ರಕಾರ ಸಾಮಾನ್ಯವಾಗಿ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲರ ದಾಂಪತ್ಯದಲ್ಲಿ ಜಗಳ ಆಗೋಕೆ ಕೆಲ ಸಾಮಾನ್ಯ ಕಾರಣಗಳಿವೆ. ಇವೇ ಕೆಲವು ಕಾರಣಗಳು ಎಲ್ಲರ ದಾಂಪತ್ಯದಲ್ಲಿ ಜಗಳವಾಗಲು ಕಾರಣವಾಗುತ್ತವೆ ಅಂತೆ. ಆದಷ್ಟು ಆ ಸಂಗತಿಗಳನ್ನು ಅವೈಡ್ ಮಾಡಿದರೆ ಗಂಡ ಹೆಂಡತಿ ನಡುವೆ ಜಗಳ ಆಗುವ ಸಂಭವ ತೀರಾ ಕಡಿಯಾಗಿಬಿಡುತ್ತದೆ.
ಹಣ: ಹಣವೊಂದೇ ಜೀವನಕ್ಕೆ ಮುಖ್ಯ ಅಂದುಕೊಂಡ ಕುಟುಂಬದಲ್ಲಿ ಜಗಳ ಕಾಮನ್. ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಅಲ್ಲಿ ಭಿನ್ನಾಭಿಪ್ರಾಯ ಪ್ರಾರಂಭವಾಗುತ್ತದೆ. ಹಣದ ವಿಷಯವಾಗಿ ಗಂಡ ಹೆಂಡತಿ ನಡುವೆ ತುಂಬಾ ಪಾರದರ್ಷಕತೆ ಇರಬೇಕು. ಖರ್ಚಿನ ಲೆಕ್ಕವನ್ನು ಒಬ್ಬರಿಗೊಬ್ಬರು ಒಪ್ಪಿಸಿಕೊಳ್ಳಿ. ಆಗ ಹಣದ ವಿಷಯವಾಗಿ ಜಗಳ ಆಗೋದಿಲ್ಲ.
ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯೋದು: ಗಂಡಸರು ಹೆಚ್ಚು ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟ ಪಡುತ್ತಾರೆ. ಲೇಟ್‌ನೈಟ್ ವರೆಗೂ ಫ್ರೆಂಡ್ಸ್ ಜೊತೆ ಕಾಲ ಕಳೆಯೋದು. ಅಥವಾ ತಡರಾತ್ರಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಮನೆಗೆ ಲೇಟ್ ಆಗಿ ಬಂದರೆ ಯಾವ ಗೃಹಣಿ ಕೂಡ ಸಹಿಸುವುದಿಲ್ಲ. ಗಂಡಸರೇ ಆದಷ್ಟು ಈ ಅಭ್ಯಾಸ ಕಡಿಮೆ ಮಾಡಿಕೊಳ್ಳಿ. ಒಂದೊಮ್ಮೆ ಸ್ನೇಹಿತರೊಂದಿಗೆ ಲೇಟ್ ನೈಟ್ ವರೆಗೂ ಹೋಗಬೇಕೆಂದರೆ ನಿಮ್ಮ ಶ್ರೀಮತಿಯರವ ಅಪ್ಪಣೆ ಮೇರೆಗೆ ಹೋದರೆ ಪುನಃ ಮನೆಗೆ ಬಂದಾಗ ನಗು ಮುಖದಿಂದಲೇ ಆಕೆ ನಿಮ್ಮನು ಸ್ವಾಗತಿಸುತ್ತಾಳೆ.
ಸಂಬಂಧಿಕರ ವಿಷಯವಾಗಿ: ಇಂದಿನ ದಂಪತಿಗಳು ಹೆಚ್ಚಾಗಿ ಸಪರೇಟ್ ಆಗಿರಲು ಇಷ್ಟ ಪಡುತ್ತಾರೆ. ಸಂಬಂಧಿಕರು ಅಥವಾ ಅತ್ತೆ ಮಾವಂದಿರ ಜೊತೆ ಇರಲು ಇಷ್ಟಪಡುವುದಿಲ್ಲ. ಹಾಗಂತ ಎಲ್ಲರೂ ಹಾಗೇ ಅಂತನೇನು ಅಲ್ಲ .ಇಂತಹ ಜನರ ಅಂಖ್ಯೆ ಹೆಚ್ಚಿದೆ. ಸಂಶೋಧನೆಯೊಂದರ ಪ್ರಕಾರ ಭಾರತೀಯ ದಂಪತಿಗಳ ನಡುವೆ ಅತ್ತೆ ಮಾವಂದಿರ ವಿಚಾರವಾಗಿಹೇ ಹೆಚ್ಚು ಮನಸ್ಥಾಪಗಳು ಆಗುತ್ತವೆ ಎಂದು. ಅತ್ತೆ ಮಾಂವದಿರ ಆಸೆ ಅಥವಾ ನಿರೀಕ್ಷೆಯಂತೆ ಸೊಸೆ ಇಲ್ಲದೇ ಇದ್ದಾಗ ಮನೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿಕರು ಅತ್ತೆ ಮಾವಂದಿರ ವಿಷಯವಾಗಿ ಗಂಡ ಹೆಂಡತಿ ನಡುವೆ ಜಗಳ ಆಗೋದು ನಮ್ಮಲಿ ತುಂಬಾ ಕಾಮನ್ ಆಗಿದೆ. ಹಾಗು ಇದು ಎಷ್ಟೋ ಕುಟುಂಬಗಳಲ್ಲಿ ಬಗೆಹರಿಯಲಾರದ ಸಮಸ್ಯೆ ಕೂಡ ಹೌದು.
ಆಚರಣೆ, ಸಂಪ್ರದಾಯದ ವಿಷಯವಾಗಿ: ಈಗಿನ ದಿನಗಳಲ್ಲಿ ಹೆಚ್ಚಾನು ಹೆಚ್ಚು ಇಂಟರ್ ರಿಲೀಜಿಯನ್ ಕಂ ಲವ್ ಮ್ಯಾರೇಜ್‌ಗಳೇ ಜಾಸ್ತಿ. ಮದುವೆಗೂ ಮುಂಚೆ ಎಲ್ಲವೂ ಚೆಂದವಾಗಿದ್ದು. ಭಾತೀಯ ಕುಟುಂಬಗಳಲ್ಲಿ ಮದುವೆಯಾಗಿ ಒಟ್ಟಿಗೆ ಬಾಳುತ್ತಿರುವಾಗ ಬೇರೆ ಬೇರೆ ಸಮುದಾಯದ ಗಂಡ ಹೆಂಡತಿ ನಡುವೆ ಅವರವರ ಧರ್ಮ, ಆಚಾರ, ವಿಚಾರ. ಅಥವಾ ಸಂಪ್ರದಾಯ ಪಾಲಿಸುವಲ್ಲಿ ಭಿನ್ನಾಭಿಪ್ರಾಯ ಮೂಡಲು ಶುರುವಾಗುತ್ತವೆ. ಇಂತಹ ವಿಷಯದಲ್ಲಿ ಗಂಡ ಹೆಂಡತಿ ಇಬ್ಬರಿಗೂ ವೈಯಕ್ತಿಕ ಸ್ವಾಂತಂತ್ರ್ಯ ತುಂಬಾ ಮುಖ್ಯ. ಈ ವಿಷಯವಾಗಿ ಇಬ್ಬರಿಗೂ ವಿಶಾಲ ಹೃದಯ ಇದ್ದರೆ ಮಾತ್ರ ಈ ವಿಷಯವಾಗಿ ಜಗಳ ಆಗೋದನ್ನು ತಡೆಯಬಹುದು.
ನಿಮ್ಮ ನಿಮ್ಮ ಸಂಗಾತಿಯನ್ನು ಕಡೆಗಣಿಸುವುದು, ಅಥವಾ ಅವರು ಯಾವ ಕೆಲಸಕ್ಕೂ ಪ್ರಯೋಜನ ಇಲ್ಲದವರೆಂದು ಬಿಂಬಿಸುವುದು ಅಥವಾ ಒಬ್ಬರಿಗೊಬ್ಬರು ಕೆಟ್ಟ ಪದಗಳಿಂದ ಬಯ್ಯುವುದು ಇವೆಲ್ಲಾ ದಾಂಪತ್ಯದಲ್ಲಿ ಜಗಳ, ಕಲಹ ಉಂಟಾಗುವುದಕ್ಕೆ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಸತಿಪತಿಗಳೇ ಆದಷ್ಟು ನಿಮ್ಮ ಜೀವನದಲ್ಲಿ ಈ ಸಂಗತಿಗಳನ್ನು ದೂರ ಮಾಡಿ, ಸುಖವಾಗಿರಿ.