ಕರ್ನಾಟಕ ರಾಜ್ಯದ ಶಿವಮೊಗ್ಗಾ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ದೇವಿ ಚೌಡೇಶ್ವರಿಯ ಸಿಗಂದೂರು ಕ್ಷೇತ್ರ ಶಕ್ತಿ ದೇವತೆಗಳ ನೆಲೆಯಲ್ಲಿ ಮಹತ್ವದ ಕ್ಷೇತ್ರವಾಗಿದೆ. ಶರಾವತಿಯ ಹಿನ್ನೀರ ತಟದ ಪಕೃತಿಯ ಮಡಿಲಲ್ಲಿ, ಹಚ್ಚ ಹಸುರಿನ ಸುಂದರ ಪ್ರಶಾಂತ ವಾತಾವರಣದಲ್ಲಿ ಸಿಗಂದೂರು ಕ್ಷೇತ್ರವಿದೆ. ಯಾವುದೇ ಜಾತಿ, ಧರ್ಮ ಮೇಲು ಕೀಳು ಎಂಬ ಪಂಕ್ತಿ ಬೇಧವಿಲ್ಲದ, ಬಡವ -ಶ್ರೀಮಂತ ಎಂಬ ದೃಷಿಯಿಂದ ನೋಡದ ಅಪರೂಪದ ಧರ್ಮ ಕ್ಷೇತ್ರವಾಗಿ ಪ್ರಖ್ಯಾತಿ ಹೊಂದಿದೆ.. ಸೋತು ಬಂದವರನ್ನು ಚೌಡಮ್ಮ ಎಂದೂ ಕೈ ಬಿಡುವುದಿಲ್ಲ ಎಂಬ ದೃಢನಂಬಿಕೆಯಿಂದ ಸನ್ನಿಧಿಗೆ ನಿತ್ಯ ಸಹಸ್ರಾರು ಭಕ್ತರು ಬರುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯ, ನೋವುಗಳನ್ನು ದೇವಿಯ ಮಡಿಲಿಗೆ ಹಾಕಿ ದುಗಡ ದುಮ್ಮಾನಗಳಿಂದ ನಿರಾಳವಾಗುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಸಿಗಂದೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ. ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಿಗಂದೂರೇಶ್ವರಿ ಎಂದೂ ಈ ಅಮ್ಮನವರನ್ನು ಕರೆಯುತ್ತಾರೆ. ಮಕರ ಸಂಕ್ರಾಂತಿ ವೇಳೆ ಇಲ್ಲಿ ಜಾತ್ರೆ ನಡೆಯುತ್ತದೆ.
ದೇವಿಯ ಮೂಲ ಸ್ಥಾನ
ಒಂದು ಕಡೆ ಗುಡ್ಡ, ಮತ್ತೊಂದು ಕಡೆ ನದಿ, ಮಧ್ಯ ಭಾಗದಲ್ಲಿ ಕೋವು ಇರುವ ಶೀಗೆ ಕಣಿವೆ ಎನ್ನಲಾಗುವ ದಟ್ಟ ಕಾಡು. ಅದಕ್ಕೆ ದೇವಿಕಾನು ಎಂತಲೇ ಹೆಸರು. ಈ ಕಾನಿನಲ್ಲಿ ವನದೇವತೆಯಾಗಿ ದೇವಿ ಸಂಚರಿಸುತ್ತಾಳೆ ಎಂಬುದು ಪಾರಂಪರಿಕ ನಂಬಿಕೆ. ಈ ಕಾಡಿನಲ್ಲಿ ಬಿದಿರು, ಬೆತ್ತ, ಶೀಗೆ , ವಿವಿಧ ಜಾತಿಯ ಮರ – ಮಟ್ಟಿಗಳಿಂದ ಆವೃತವಾದ ದೇವಿ ಬನ. ಅಲ್ಲಿದ್ದ ಬ್ರಹತ್ ನಾಗ ಸಂಪಿಗೆ ಮರದಡಿ ಇದ್ದ ಆಕಾರ ರಹಿತ ಶಿಲೆಯೇ ಸಿಗಂದೂರು ಚೌಡಮ್ಮನ ಮೂಲಸ್ಥಾನ. ಈ ಶಿಲೆಯನ್ನು ಸಿಗಂದೂರು ದೇವಾಲಯದಲ್ಲಿ 1990ನೇ ಇಸ್ವಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಜಲದೊಡಲು ಸೇರಿದ ಮೂಲ ಸ್ಥಾನ ಜಲಾಶಯದಲ್ಲಿ ನೀರು ಭರ್ತಿಯಾದಾಗ 25-30 ಅಡಿ ಆಳದಲ್ಲಿ ಮುಳುಗಿರುತ್ತದೆ. ಸಾಮಾನ್ಯವಾಗಿ ಎಪ್ರಿಲ್ ಮೇ ತಿಂಗಳಲ್ಲಿ ನೀರು ಇಳಿದಾಗ ದೇವಿಯ ಮೂಲಸ್ಥಾನ ಕಾಣಿಸುತ್ತದೆ.
ದೇವಿಯ ಮೂಲಸ್ಥಾನ
ಸಹಸ್ರ ಸಹಸ್ರಮಾನದಲ್ಲಿ ಎಲ್ಲಿಯೋ ಅಗೋಚರವಾಗಿದ್ದ ಚೌಡಮ್ಮ ಕಳಸವಳ್ಳಿ ಗ್ರಾಮದ ಸಿಗಂದೂರಿನ ದೀವರು ಸಮುದಾಯದ ರೈತ ಕುಟುಂಬದ ಹಿರಿಯರಿಗೆ ಒಲಿದು ಬಂದ ಶಕ್ತಿದೇವತೆ ಎಂಬ ಪ್ರತೀತಿ ಇದೆ.
ಬೌಗೋಳಿಕವಾಗಿ ಕಳಸವಳ್ಳಿ- ಶಿರಗಳ್ಳೆ ಅಕ್ಕಪಕ್ಕದ ಗ್ರಾಮಗಳು. ಇವೆರಡರ ಮಧ್ಯೆ ಶರಾವತಿಯ ಉಪನದಿ ಹರದೂರು ಹೊಳೆಯ ಹರಿವು. ಹೊಳೆಯಾಚೆಯ ಶಿರಗಳ್ಳೆಯಲ್ಲಿ 25 ದೀವರ ಕುಟುಂಬದವರಿದ್ದರು. ಹೆಚ್ಚಿನವರು ಕಳ್ಳುಬಳ್ಳಿಯವರಾಗಿದ್ದರು.
ಈ ಊರಿನ ಹಕ್ಕಲಮನೆಯ ಕೊಲ್ಲನಾಯ್ಕನ ಅವಿಭಕ್ತ ಕುಟುಂಬ ಕಲಸವಳ್ಳಿ ಗ್ರಾಮದ ಸಿಗಂದೂರು, ದೇವಿಕಾನು, ಶಿರಗಳ್ಳೆಯಲ್ಲಿ ಸ್ವಂತ ಭೂ ಹಿಡುವಳಿ ಹೊಂದಿದ ಆಡ್ಯ ಕುಟುಂಬವಾಗಿತ್ತು.
ಇವರ ದೇವಿಕಾನು ಜಮೀನಿನ ಮೇಲ್ಭಾಗದ ದಿಗರೆಯಲ್ಲಿ ಬ್ರಹತ್ ಸಂಪಿಗೆ ಮರದಡಿಯಲ್ಲಿ ಚೌಡಿ ಬನವಿತ್ತು. ಹಕ್ಕಲು ಮನೆಯ ಕುಟುಂಬದವರು ಹಲವು ತಲೆಮಾರಿನಿಂದ ಚೌಡಮ್ಮನನ್ನು ತಮ್ಮ ಮನೆ ದೇವರು ಎಂದು ನಂಬಿ ಆರಾಧಿಸುತ್ತಿದ್ದರು.
ಕಾಲಾಂತರದಲ್ಲಿ ಚೌಡಮ್ಮನ ಶಕ್ತಿ ಸುತ್ತಮುತ್ತಲಿನ ಎಲ್ಲ ಜನಾಂಗದವರಿಗೂ ಅರಿವಾಗಿ ಭಯ ಭಕ್ತಿಯಿಂದ ನಡೆದುಕೊಳ್ಳಲಾರಂಭಿಸಿದರು.
ತಮ್ಮ ಕಷ್ಟ- ಕಾರ್ಪಣ್ಯಗಳ ನಿವಾರಣೆಗೆ ಚೌಡಮ್ಮನಲ್ಲಿ ಹರಕೆ ಮಾಡಿಕೊಳ್ಳುವ, ಪ್ರಸಾದ ಕೇಳುವ ಪದ್ದತಿ ರೂಢಿಯಲ್ಲಿತ್ತು. ಹಳ್ಳಿಗರು ಜಾನುವಾರು ಕಳೆದು ಹೋದರೆ, ವಸ್ತು ಕಳವಾದರೆ, ಕೊಟ್ಟಿಗೆಯಲ್ಲಿ ತೊಂದರೆ ಆದರೆ , ಫಸಲುಗಳಿಗೆ ಪ್ರಾಣಿ ಉಪಟಳ ಆಗದಂತೆ ಚೌಡಮ್ಮನಿಗೆ ಹಣ್ಣುಕಾಯಿ, ಹಾಲು ಸಮರ್ಪಣೆ, ಹೊಸಫಸಲು ಅರ್ಪಿಸುವುದು ಮೊದಲಾದ ಹರಕೆ ಮಾಡಿಕೊಂಡು , ಹುಣ್ಣಿಮೆ, ಅಮವಾಸ್ಯೆಯಲ್ಲಿ ತೀರಿಸುತ್ತಿದ್ದರು. ಸಿಗಂದೂರು ಚೌಡಮ್ಮ ಒಲಿದರೆ ತಾಯಿ, ಮುನಿದರೆ ಮೃತ್ಯು ಎಂಬ ಮಾತು ವಾಡಿಕೆಯಲ್ಲಿತ್ತು. ಮಲೆನಾಡಿನಲ್ಲಿ ಈ ದೇವತೆಯ ಬಗ್ಗೆ ಭಕ್ತಿಗಿಂತ ಭಯವೇ ಹೆಚ್ಚಿತ್ತು. ಕಳ್ಳತನದ ಪ್ರಕರಣಗಳಲ್ಲಿ ಸಿಗಂದೂರಿಗೆ ಹರಕೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿಯೇ ಕದ್ದ ಮಾಲನ್ನು ಕಳ್ಳರು ಮನೆ ಬಾಗಿಲಿಗೆ ತಂದಿಟ್ಟು ಹೋದ ನಿದರ್ಶನಗಳಿದ್ದವು. ಹರಕೆ ಮಾಡಿದ್ದು ಗೊತ್ತಾದರೂ ನಿರ್ಲಕ್ಷಿದವರು ಹಲವು ಸಂಕಷ್ಠಗಳಿಗೆ ಗುರಿಯಾದ ಸಂಗತಿ ಎಲ್ಲ ಕಡೆ ಕೇಳಿ ಬರುತಿತ್ತು. ವರ್ಷದಲ್ಲಿ ಆರಿದ್ರಾ ಮಳೆ ಸುರಿಯುವ ಕಾಲ ಹಾಗೂ ಮಕರ ಸಂಕ್ರಾAತಿ ಕಾಲದಲ್ಲಿ ಕೊಲ್ಲನಾಯ್ಕ ಕುಟುಂಬದವರಿAದ ಚೌಡಿ ಬನದಲ್ಲಿ ವಿಶೇಷ ಪೂಜೆ , ಅನ್ನ ಸಂತರ್ಪಣೆ ನಡೆಯುತ್ತಿತ್ತು. ಸಿಗಂದೂರು, ಶಿರಗಳ್ಳೆ, ಕಲಸವಳ್ಳಿ, ಲಿಂಗನಮನೆ ಮೊದಲಾದ ಸ್ಥಳೀಯ ಗ್ರಾಮಸ್ಥರಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರು ನೆಂಟರಿಷ್ಟರು, ಭಾಗವಹಿಸುತ್ತಿದ್ದರು. ಮಕ್ಕಳಿಲ್ಲದವರು ,ಅನ್ಯಾಯ, ಮೋಸ, ಕಳವು, ಫಸಲು ರಕ್ಷಣೆ ಮೊದಲಾದ ತೊಂದರೆ ತಾಪತ್ರಯದಲ್ಲಿ ಸಿಲುಕಿದವರು ತಾವು ಕಟ್ಟಿಕೊಂಡ ಹರಕೆ ತೀರಿಸಲು ಬರುತ್ತಿದ್ದರು.
ಹಕ್ಕಲು ಮನೆ ಕುಟುಂಬ.ಹತ್ತೆAಟು ತಲೆಮಾರಿನಿಂದ ಸಿಗಂದೂರಿನಲ್ಲಿ ಕೊಲ್ಲನಾಯ್ಕರ ಕುಟುಂಬ ವಾಸವಿತ್ತು. ಅವಿಭಕ್ತವಾಗಿದ್ದ ಈ ಕುಟುಂಬದಲ್ಲಿ 28-30 ಜನರು ಅನ್ಯೋನ್ಯವಾಗಿ ಬಾಳುತ್ತಿದ್ದರು. ಸಿಗಂದೂರು ಮತ್ತು ಸುಲಗಳಲೆಯಲ್ಲಿ ಈ ಕುಟುಂಬ ಸುಮಾರು 25-28 ಎಕರೆ ಸ್ವಂತ ಖಾತೆಯ ಜಮೀನು ಹೊಂದಿತ್ತು.
ಕುಟುಂಬದ ಯಜಮಾನ ಕೊಲ್ಲನಾಯ್ಕರು ಇಡೀ ಕರೂರು ಸೀಮೆಯ ದೀವರು ಜನಾಂಗದಲ್ಲಿ ವಜನು ಹೊಂದಿದ್ದರು. ಇತರ ಸಮುದಾಯದವರಿಗೂ ಆ ಕುಟುಂಬದ ಬಗ್ಗೆ ಗೌರವವಿತ್ತು. ಶ್ರೀಮಂತಿಕೆಯ ಹಮ್ಮು, ಬಿಗುಮಾನವಿಲ್ಲದೆ ಜನರ ಕಷ್ಟ ಸುಖದಲ್ಲಿ ಭಾಗಿಯಾಗುವ ಹೃದಯವಂತಿಕೆ ಅವರಿಗಿತ್ತು. ಆ ಕಾಲದಲ್ಲಿ ಸೀಮೆಯ ಆರ್ಥಿಕ ಬಲಾಢ್ಯ ಕೃಷಿಕರಿಗೆ ಕೈ ಸೋತವರಿಗೆ ಬಡ್ಡಿ ಸಾಲ, ಹುಲಿ ಬತ್ತ ಕೊಡುವ , ಸಾಲ ನೀಡಿದ ಗತ್ತಿನಲ್ಲಿ ಬಿಟ್ಟಿ ಗೆಯ್ಸಿಕೊಳ್ಳುವ ಪ್ರವೃತ್ತಿ ಸಾಮಾನ್ಯವಾಗಿದ್ದರೂ ಕೊಲ್ಲನಾಯ್ಕನ ಕುಟುಂಬ ಅದು ಒಳ್ಳೆಯ ಸಂಸ್ಕಾರವಲ್ಲ ಎಂದು ಭಾವಿಸಿತ್ತು. ಹಣಕಾಸು ನೆರವು ನೀಡಿದರೂ ಬಲವಂತವಾಗಿ ವಸೂಲಿ ಮಾಡದೆ ಕೊಟ್ಟಾಗ ಬಡ್ಡಿ ರಹಿತವಾಗಿ ಪಡೆದುಕೊಳ್ಳುತ್ತಿತ್ತು. ಇವರಿಗೆ ಶತ್ರುಗಳು ಇರಲಿಲ್ಲ. ಈ ಕುಟುಂಬದ ಹಿರಿಯರನ್ನು ಕಂಡರೆ ಸುತ್ತಮುತ್ತಲಿನ ಕಿರಿಯರು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದು ಸಾಮಾನ್ಯವಾಗಿತ್ತು.
ಶೇಷಪ್ಪ ನಾಯಕ
ಕೊಲ್ಲನಾಯಕರಿಗೆ ವಯಸ್ಸಾದಾಗ ಅಂದಿನ ಕೌಟುಂಬಿಕ ವ್ಯವಸ್ಥೆಯಂತೆ ಅವರ ಮಗ ಶೇಷಪ್ಪನಾಯಕರಿಗೆ ಯಜಮಾನಿಕೆ ಹೆಗಲಿಗೇರಿತು. ಅವರು ಭಾವುಕ ವ್ಯಕ್ತಿ. ಬಡವರು, ಕಷ್ಟದಲ್ಲಿದ್ದವರನ್ನು ಕಂಡು ಮರುಗುತ್ತಿದ್ದರು. ತಮ್ಮ ಕುಟುಂಬ ರಕ್ಷಣೆಯ ಚೌಡಮ್ಮನಲ್ಲಿ ಅವರಿಗೆ ಅಚಲ ನಿಷ್ಠೆ. ನಿತ್ಯ ಅವಳ ಸ್ಮರಣೆ ಮಾಡದೆ ಹನಿ ನೀರನ್ನೂ ಮುಟ್ಟುತ್ತಿರಲಿಲ್ಲ. ಧನ್ಯತಾ ಭಾವದಿಂದ ಭಕ್ತಿ ಪರವಶರಾಗಿ ದೇವಿಯನ್ನು ಪ್ರಾರ್ಥಿಸುವಾಗ ಅವರ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಶೇಷಪ್ಪನಾಯಕರಿಗೆ ದೇವಿ ದರ್ಶನ ನೀಡಿದ್ದಳು ಎಂಬ ಮಾತು ಮಲೆನಾಡಿನ ಈ ಭಾಗದಲ್ಲಿ ಜನಜನಿತವಾಗಿದೆ. ಸತ್ಯಾಸತ್ಯತೆಯ ನಿಖರತೆ ಇಲ್ಲದಿದ್ದರೂ ಇಂದಿಗೂ ಜನರ ಬಾಯಿಂದ ಬಾಯಿಗೆ ಹರಿದು ಬರುತ್ತಿದೆ.
ಅಂದಿನ ಶೀಗೆ ಕಣಿವೆ ದಟ್ಟಕಾಡು. ಅದರಲ್ಲಿ ಕಡವೆ, ಕಾಡುಕುರಿ, ಬರ್ಕ, ಮೊಲ , ಹಂದಿ ಕಾಡುಕೋಣಗಳಲ್ಲದೆ ಹುಲಿ ಚಿರತೆಯಂತಹ ಪ್ರಾಣಿಗಳೂ ಇದ್ದವು. ಮಲೆನಾಡ ಭಾಗದಲ್ಲಿ ಹಬ್ಬದ ಮರುದಿನ ಇಲಾಡಿ ಎಂಬ ಆಚರಣೆ ಇದೆ. ಅಂದು ರೈತಾಪಿ ಕುಟುಂಬದ ಗಂಡಸರು ಸೋ ಬೇಟೆಯಾಡುವ ಪದ್ದತಿ ಇತ್ತೀಚಿನವರೆಗೂ ಇತ್ತು. ಅಲ್ಲದೆ ಹುಕೀ ಬಂದ ದಿವಸ ನಾಲ್ಕೆöÊದು ಜನರ ತಂಡ, ತಲೆಗೆ ಬ್ಯಾಟರಿ ಕಟ್ಟಿಕೊಂಡು ಬಂದೂಕು ಹಿಡಿದು ಒಂದೆರಡು ಪ್ರಾಣಿಗಳನ್ನು ಹೊಡೆದು ತರುತ್ತಿದ್ದರು. ಶೇಷನಾಯಕರಿಗೆ ಬೇಟೆಯಾಡುವ ಹವ್ಯಾಸವಿತ್ತು.
ಅದೊಂದು ರಾತ್ರಿ ಮೂರು – 4 ಜನರಿದ್ದ ಶೇಷಪ್ಪ ನಾಯ್ಕರ ತಂಡ ಬೇಟೆಯಾಡಲು ಶೀಗೆ ಕಣಿವೆ ಕಾಡಿಗೆ ನುಗ್ಗಿತ್ತು. ಪ್ರಾಣಿಗಳನ್ನು ಅರಸುತ್ತಾ ಮುಂದೆ ಸಾಗಿದಂತೆ ತಂಡದ ಇತರರಿಗೂ ಅಂತರ ಹೆಚ್ಚಾಗಿ ಅವರು ಒಂಟಿಯಾದರು. ದಟ್ಟಡವಿ, ಕರಿಗತ್ತಲು, ಪ್ರಾಣಿಗಳ ಘರ್ಜನೆ, ಎಂದೂ ಹೆದರದಿದ್ದ ಶೇಷಪ್ಪ ನಾಯಕರ ಕೈಕಾಲು ನಡುಗತೊಡಗಿತು. ಮೈ ಬೆವರಿ, ಕೂಗಿಕೊಳ್ಳಬೇಕೆನಿಸಿದರೂ ಕೂಗಲಾಗದ ಸ್ಥಿತಿಯಾಯಿತು. ತಕ್ಷಣ ತಾವು ನಂಬಿದ ತಮ್ಮ ನಂಬಿದ ದೈವಕ್ಕೆ ನೀನೇ ಕಾಯಬೇಕು ಎಂದು ಪ್ರಾರ್ಥಿಸಿದರು. ಮಂಪರು ಕವಿದಂತಾಗಿ ಒಂದು ಮರದ ಬುಡಕ್ಕೆ ಒರಗಿ ಕೂತರು. ಅವರಿಗೆ ಗುಡುಗು ಸಿಡಲಿನ ಅನುಭವವಾಗಿ ಕೋಲ್ಮಿಂಚು ಸುಳಿದಂತೆ ಭಾಸವಾಗತೊಡಗಿತು. ನಿಶ್ಶಬ್ದ ವಾತಾವರಣದಲ್ಲಿ ಘಂಟಾನಾದ ಕೇಳಿಸಿ, ಕತ್ತಲು ಸೀಳಿದ ದಿವ್ಯ ಪ್ರಭೆಯೊಂದು ಗೋಚರಿಸಿತು. ಅದರಲ್ಲಿ ಶಂಕ ಚಕ್ರ ಗಧಾದಾರಿಯಾದ ದೇವಿ ರೂಪ ಕಾಣಿಸಿಕೊಂಡಿತು. ಭಯ ಬೀತರಾಗಿ ನಡುಗುತ್ತಿದ್ದ ಶೇಷಪ್ಪನವರನ್ನು ದೃಷ್ಟಿಸಿ, ಮಗು ಹೆದರಬೇಡ, ಕಾಪಾಡುವ ತಾಯಿ ನಾನಿರುವಾಗ ಭಯ ಪಡುವುದ್ಯಾಕೆ ಎಂಬ ಅಭಯ ನೀಡಿದಂತಾಯಿತು. ದಿಗಿಲಾದ ನಾಯ್ಕರು ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು. ವಿದ್ಯಾ ಬುಧ್ಧಿ ತಿಳಿಯದ ವ್ಯಕ್ತಿ ನಾನು. ನಿನ್ನನ್ನೇ ನಂಬಿದ್ದೇನೆ ಎಂದು ಬೇಡಿಕೊಂಡರು.. ಈ ಕಾಡಿನಲ್ಲಿ ಸಂಚರಿಸುತ್ತಿರುವ ವನದೇವತೆಯಾದ ನಾನು ಈಗ ಒಂದೆಡೆ ನೆಲೆಯಾಗಿ ನಂಬಿದವರ ಇಷ್ಠಾರ್ಥ ಕರುಣಿಸುವ ಇಚ್ಛೆ ಹೊಂದಿದ್ದೇನೆ. ನಿನ್ನೆದುರಿನ ಶಿಲೆಯಲ್ಲಿ ನಾನಿರುತ್ತೇನೆ. ಪೂಜೆ ಸಲ್ಲಿಸುವುದು ನಿನ್ನ ಕರ್ತವ್ಯ. ಈ ಸ್ಥಳ ಶಕ್ತಿ ಸ್ಥಳವಾಗಿ, ಭಕ್ತಿಯಿಂದ ನಂಬಿ ಬಂದವರನ್ನು ಸಂರಕ್ಷಿಸುವ ಅಭಯ ಸ್ಥಾನವಾಗುತ್ತದೆ ಎಂದAತಾಯಿತು. ಮಂಪರು ಹರಿದಾಗ ಸುತ್ತ ಬರೀ ಕತ್ತಲು. ಆದರೆ ದೇವಿಯ ರೂಪು, ಹರಸಿದ ಮಾತು ಅಚ್ಚೊತ್ತಿತ್ತು. ಹೆದರಿಕೆ ಮಾಯವಾಗಿ ನಡೆದಿದ್ದು, ಮನೆಯ ದಾರಿಯಾಗಿತ್ತು.
ತಮ್ಮ ಈ ಅನುಭವವನ್ನು ಪೂಜ್ಯರು ಎಂದು ಗೌರವಿಸುತ್ತಿದ್ದ ಹಿರಿಯ ಬ್ರಾಹ್ಮಣರೊಬ್ಬರಲ್ಲಿ ಹೇಳಿಕೊಂಡರು. ಅವರು ನಿಮ್ಮ ಪೂರ್ವಜರಿಗೊಲಿದ ದೇವಿಯ ದರ್ಶನ ನಿನ್ನ ಪುಣ್ಯ ವಿಶೇಷದಿಂದ ನಿನಗೆ ಲಭಿಸಿದೆ. ದೇವಿಯ ಅಪ್ಪಣೆಯಂತೆ ನಡೆದುಕೊಳ್ಳುವುದು ಕ್ಷೇಮಕರ ಎಂದು ಸೂಚಿಸಿದರು.1938ರ ಸುಮಾರಿಗೆ ಶೇಷಪ್ಪನವರು ದೇವಿಗೆ ಬೆಳ್ಳಿ ಮುಖವಾಡ ಮಾಡಿಸಿ, ಅದರ ಸಮರ್ಪಣೆಯ ಕಾಲದಲ್ಲಿ ಚೌಡಿ ಬನದಲ್ಲಿ ಶತ ಚಂಡಿಯಾಗ ನಡೆಸಿದ್ದರು.
ದೇವಿ ಬನದಲ್ಲಿ ಗುಡಿಕಟ್ಟಿ ನಿತ್ಯ ಪೂಜೆಗೆ ವ್ಯವಸ್ಥೆಗೊಳಿಸಬೇಕು ಎಂಬ ಆಸೆ ಹೊತ್ತಿದ್ದರು. ಆದರೆ ಅವರ ಇಚ್ಛೆಗೆ ಮುಳುಗಡೆ ಅಡ್ಡಿಯಾಯಿತು. 1946ರ ಸುಮಾರಿನಲ್ಲಿ ನಿರ್ಮಾಣಗೊಂಡ ಹಿರೇಭಾಸ್ಕರ ಜಲಾಶಯದಲ್ಲಿ ಶಿರಗಳ್ಳೆ ಊರು ಮುಳುಗಿತು. ದೇವಿ ಬನ ಮುಳುಗದಿದ್ದರೂ ಕುಟುಂಬದ ಸಿಗಂದೂರು, ದೇವಿಕಾನು , ಶಿರಗಳಲೆಯ ಜಮೀನು ಜಲದೊಡಲು ಸೇರಿತು. ಸಂತ್ರಸ್ತ ಕುಟುಂಬಗಳಿಗೆ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಸ್ಥಳ ತೋರಿಸಲಾಯಿತು. ಶೇಷನಾಯ್ಕನ ಕುಟುಂಬ ಆಣೆಕಟ್ಟಿನ ಕೆಳಭಾಗದ ಸುಳಗಳ್ಳೆಯಲ್ಲಿ ಜೀವನಕ್ಕೆ ಸಾಕಾಗುವಷ್ಟು ಜಮೀನು ಉಳಿದಿದ್ದರಿಂದ ಅಲ್ಲಿಗೆ ವಾಸ್ತವ್ಯ ಬದಲಿಸಿದರು. ಅಲ್ಲಿಂದ ದೇವಿ ಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ನಂತರದ ಲಿಂಗನಮಕ್ಕಿ ಜಲಾಶಯದಲ್ಲಿ ಸುಳಗಳ್ಳೆಯೂ ಮುಳುಗಿತು.
ಸರಕಾರ ಹಕ್ಕಲುಮನೆಯ ಶೇಷಪ್ಪನಾಯ್ಕ ಕುಟುಂಬದ 10-12 ಮನೆಯವರಿಗೆ ಸೊರಬಾ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಭೂಮಿ ನೀಡಿತು. ಅವರು ಕಾಡು ಕಡಿದು ಊರು ಕಟ್ಟಿದರು. sಇಂದು ಆ ಊರಿಗೆ ಹೊಳೆಕೊಪ್ಪ ಎಂಬ ಹೆಸರಿದೆ.
ಜಲದೊಡಲಿನಿಂದ ಮೇಲೆದ್ದು ಬಂದ ದೇವಿ
ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಸಿಗಂದೂರಿನ ಚೌಡಮ್ಮನ ಮೂಲ ನೆಲೆ ಜಲದೊಡಲು ಸೇರಿತು
ಹಿನ್ನೀರಲ್ಲಿ ಮುಳುಗಿ ಹೊಕ್ಳುಬಳ್ಳಿ ಕಡಿದುಕೊಂಡ ಶೇಷನಾಯ್ಕ ತಾವು ಮರು ಜೀವನ ರೂಪಿಸಿಕೊಂಡ ಹೊಳೆಕೊಪ್ಪದಲ್ಲಿ ದೇವಾಲಯ ಕಟ್ಟಿ ಚೌಡಮ್ಮನನ್ನು ತಂದು ಪ್ರತಿಷ್ಠಾಪಿಸುವ ಪ್ರಯತ್ನ ನಡೆಸಿದರು. ಆದರೆ ದೇವಸ್ಥಾನ ಕಟ್ಟಲು ಎಷ್ಟೆಲ್ಲಾ ಪ್ರಯತ್ನಪಟ್ಟರೂ ಒಂದಲ್ಲಾ ಒಂದು ವಿಘ್ನ ಎದುರಾಗುತ್ತಿತ್ತು. ದೈವ ಸಾನ್ನಿಧ್ಯದಲ್ಲಿ, ಜ್ಯೋತಿಷಿಗಳಲ್ಲಿ ಪ್ರಶ್ನೆ ಕೇಳಿದರು. ಆದರೆ ಚೌಡಮ್ಮ ಹೊಳೆಯಾಚೆ ಬರಲೊಪ್ಪುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿತ್ತು. ಜ್ಯೋತಿಷಿಗಳು, ದೈವ ಸಾನ್ನಿಧ್ಯದವರ ಮಾತಿನಲ್ಲಿ ನಂಬಿಕೆ ಇಟ್ಟು, ಹೊಳೆ ದಡದಲ್ಲಿಯೇ ವಾರ್ಷಿಕ ಆಚರಣೆಯ ಆರ್ಧ್ರಾ ಮಳೆ ಹಬ್ಬ, ಮಕರ ಸಂಕ್ರಮಣದ ಪೂಜೆಯನ್ನು ನೆರವೇರಿಸುತ್ತಿದ್ದರು. ೧೯೮೦ರಲ್ಲಿ ಅವರು ತೀರಿಕೊಂಡರು. ನಂತರ ಅವರ ಮಗ ರಾಮಪ್ಪ ಪೂಜೆ ನೆರವೇರಿಸಲು ಬಂದಾಗಲೆಲ್ಲಾ ಮನೆ ದೇವರನ್ನು ನಡು ನೀರಿನಲ್ಲಿ ಕೈ ಬಿಟ್ಟಂತಾಗಿದೆ ಎಂದು ಕೊರಗುತ್ತಿದ್ದರು. ನೀನೇ ಮಾರ್ಗ ತೋರು ಎಂದು ಪ್ರಾರ್ಥಿಸುತ್ತಿದ್ದರು. ೧೯೮೫ರ ಆಸುಪಾಸಿನಲ್ಲಿ ,ಶರಾವತಿ ಹಿನ್ನೀರ ಪ್ರದೇಶದ ಕೋವಿನಲ್ಲಿ ಚೌಡಿಯ ಕಲ್ಲಿಟ್ಟು ಪೂಜಿಸಿದಂತೆ ಪದೇ ಪದೇ ಕನಸು ಬೀಳತೊಡಗಿತು. ಮತ್ತೊಂದು ವರ್ಷ ಪೂಜೆಗೆ ಬಂದಾಗ ಕನಸಿನಲ್ಲಿ ಕಂಡ ಸ್ಥಳದಲ್ಲಿ ಗುಡಿಕಟ್ಟು ಎಂದAತಾಯಿತು. ಈ ವಿಚಾರವನ್ನು ತಮ್ಮ ಆಪ್ತರಲ್ಲಿ ಹೇಳಿಕೊಂಡರು. ಅವರು ಚೌಡಿ ಗುಡಿ ಕಟ್ಟಲು ಪ್ರೇರೇಪಿಸಿ ಸ್ಥಳ ತೋರಿಸಿದ್ದಾಳೆ. ಮುಳುಗಡೆ ಪ್ರದೇಶದಲ್ಲಿ ಓಡಾಡಿ ಕನಸ್ಸಿನಲ್ಲಿ ಕಂಡAತಹ ಸ್ಥಳ ಇದೆಯೋ ನೋಡು ಎಂದರು. ಹುಡುಕಿದಾಗ ಕಳಸವಳ್ಳಿ ಗ್ರಾಮದ ಸಿಗಂದೂರು ಮಜಿರೆಯಲ್ಲಿ ,ಹಿಂದಿನ ಜನವಸತಿ ಪ್ರದೇಶದ ಮೇಲ್ಭಾಗದಲ್ಲಿ, ಮೂಲಸ್ಥಾನದ 2 ಕಿಮಿ ಅಂತರದಲ್ಲಿ ಕನಸಿನಲ್ಲಿ ಕಂಡ ಸ್ಥಳ ಹೋಲುವ ಜಾಗ ಕಂಡಿತು., ಗ್ರಾಮಸ್ಥರು ಹಾಗೂ ದೇವಿ ಭಕ್ತರೊಡನೆ ಸಮಾಲೋಚಿಸಿ ಅಲ್ಲಿ ಗುಡಿ ಕಟ್ಟಲು ಸಂಕಲ್ಪಿಸಿ,. 1987 ಕಾರ್ಯಾರಂಭ ಮಾಡಿದರು. ದೇವಾಲಯ ನಿರ್ಮಾಣ ಸ್ಥಳಕ್ಕೆ ರಸ್ತೆ ಇರಲಿಲ್ಲ. ಗುಡ್ಡದ ಕೆಳಭಾಗದಲ್ಲಿ ಸಿಮೆಂಟು, ಕಲ್ಲು ಮರಳುಗಳನ್ನು ಸಂಗ್ರಹಿಸಿಕೊAಡು ತಲೆ ಹೊರೆಯಲ್ಲಿ ಹೊರಬೇಕಿತ್ತು. ರಾಮಪ್ಪ ,ಹಾಗೂ ಗ್ರಾಮದ ಕೆಲವರು ಕೂಲಿಯವರಂತೆ ಪಾಯ ತೋಡಿದರು. ಕಲ್ಲು ಮರಳನ್ನು ಹೊತ್ತರು. ದೇವಾಲಯದ ಗರ್ಭಗುಡಿ , ಹಾಗೂ ಪಕ್ಕದಲ್ಲಿ ಜಗುಲಿಯನ್ನು ಕಟ್ಟಲಾಯಿತು.
ಹಲವು ದಶಕಗಳ ಹಿಂದೆ ಸ್ವತಃ ಐಕ್ಯವಾದ ದೇವಿಯ ಶಿಲೆಯನ್ನು ಮೇಲೆತ್ತುವುದು ದೇವಾಲಯ ಕಟ್ಟಿದಷ್ಟು ಸುಲಭವಾಗಿರಲಿಲ್ಲ, ದೇವಿಯ ಮೂಲ ಶಿಲೆಯನ್ನು ತರುವ ಪ್ರಯತ್ನ ಮೊದಲಾಗಿ ವೇದ, ಆಗಮ ಪಾರಂಗತರಾದ ಬ್ರಾಹ್ಮಣ ಪುರೋಹಿತರಿಂದ ಪ್ರಾರಂಬವಾಗಿ ಈ ಮೊದಲು ಪೂಜೆ ಮಾಡುತ್ತಿದ್ದ ಅರ್ಚಕರು, ದೈವಿ ಸಾನಿಧ್ಯದಲ್ಲಿ ನಿತ್ಯ ಪಾರಾಯಾಣ ಜಪ-ತಪ ಮಾಡುವಂತವರು ಎಷ್ಟೆ ಪ್ರಯತ್ನಸಿದರು ದೇವಿಯ ಮೂಲಶಿಲೆಯು ಮೇಲೆತ್ತಲು ಸಾದ್ಯವಾಗಲೇ ಇಲ್ಲಾ. ಮತ್ತೆ ಪ್ರಶ್ನೆ ಹಾಕಿದಾಗ ರಾಮಪ್ಪನವರನ್ನು ಕರೆಸುವಂತೆ ಉತ್ತರ ಬಂತು. ದೇವಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಪೂಜೆಗೆ ಕುಳಿತಿದ್ದ ರಾಮಪ್ಪನವರನ್ನು ಕರೆತರಲಾಯಿತು. ರಾಮಪ್ಪನವರು ದೇವಿಯ ಎದುರು ನಿಂತು ಪ್ರಾರ್ಥಿಸಿದ ನಂತರ ಅರ್ಚಕ ವೃಂದ ದೇವಿಯ ಮೂಲ ಶಿಲೆಯನ್ನು ಪುನಃ ಮೇಲೆತ್ತಲು ಪ್ರಯತ್ನಿಸಿದರು ಸಾದ್ಯವಾಗಲಿಲ್ಲ, ಪುನಃ ಪ್ರಶ್ನೆಯಲ್ಲಿ ಕೇಳಿದಾಗ, ದೇವಿಯು ರಾಮಪ್ಪನವರಲ್ಲಿ ವಾಕ್ದಾನ ಕೇಳುತ್ತಿದೆ ಹಾಗೂ ರಾಮಪ್ಪನವರೇ ಶಿಲೆಯನ್ನು ಮೇಲೆತ್ತಬೇಕು ಎನ್ನುವ ಉತ್ತರ. ಅದರಂತೆ ಈ ಮೊದಲು ಎಂದು ದೇವಿಯನ್ನು ಮುಟ್ಟದ ರಾಮಪ್ಪನವರು ಅಂದು ತಾಯಿಯ ಮುಂದೆ ಮಂಡಿ ಊರಿ ಕುಳಿತು ಭಾವಪರವಷರಾಗಿ ದೇವಿಯ ಮೂಲಶಿಲೆಯನ್ನು ತಮ್ಮ ಕೈಗಳಿಂದ ಸ್ರ‍್ಶಿಸಿ “ತಾಯಿ ಪ್ರತಿನಿತ್ಯ ನಿನ್ನಪೂಜೆ ನನ್ನ ಜವಾಬ್ದಾರಿ ನಾನೇ ಸ್ವತಃ ಮುಂದೆ ನಿಂತು ನಿನ್ನ ಪೂಜಾ ಕರ‍್ಯಗಳನ್ನು ಮಾಡಿಸಿಕೋಂಡು ಬರುತ್ತೇನೆ ನಿನಗೆ ಯಾವುದೇ ರೀತಿಯ ಚುತಿ ಬರದಂತೆ ಕಾಪಾಡಿಕೊಂಡು ಬರುತ್ತೇನೆ” ದಯಮಾಡಿ ನಮ್ಮೊಂದಿಗೆ ಬಾ ತಾಯಿ, ನಮಗೆ ನಿತ್ಯ ನಿನ್ನ ಸೇವೆಯ ಅವಕಾಶ ಮಾಡಿಕೊಡು ತಾಯಿ ಎಂದು ಪ್ರರ‍್ಥಿಸಿದರು, ದೇವಿಯ ಶಿಲೆ ಅಲುಗಾಡಿತು ಅಲ್ಲಿ ನೆರೆದಿದ್ದವರು ಆಶ್ರ‍್ಯಚಕಿತರಾದರು, ನಂತರ ಪಕ್ಕದಲ್ಲೆ ಇದ್ದ ಅರ್ಚಕರ ಸಹಾಯದ ಮೇರೆಗೆ ತಾಯಿಯ ಮೂಲಶಿಲೆಯನ್ನು ಹೂವಿನಂತೆ ಮೇಲಕ್ಕೆ ಎತ್ತಲಾಯಿತು. 1990ರ ಫೆಭ್ರುವರಿ 12, 13. 14 ರಂದು, ಸಿಗಂದೂರಿನಲ್ಲಿ ಪ್ರತಿಷ್ಠಾಪಿಸಿ , ಬ್ರಾಹ್ಮಣ ಅರ್ಚಕರೊಬ್ಬರನ್ನು ನೇಮಿಸಿ, ನಿತ್ಯ ಪೂಜೆಗೆ ವ್ಯವಸ್ಥೆಗೊಳಿಸಿದರು.
ದೇವಾಲಯಕ್ಕೆ ಬರಲು ಸಮರ್ಪಕ ಮಾರ್ಗವಿರಲಿಲ್ಲ. ಲಿಂಗನಮನೆ, ಕಳಸವಳ್ಳಿ ಮಾರ್ಗವನ್ನೇ ವಿಸ್ತರಿಸಿದ ರಸ್ತೆ ದೇವಾಲಯಕ್ಕೆ ಮಾರ್ಗವಾಗಿತ್ತು. ಇಲ್ಲಿಗೆ ಬರುವವರು ಸಿಗಂದೂರು ಖತ್ರಿಯಲ್ಲಿ ಬಸ್ ಇಳಿದು ಸುಮಾರು 2 ಕಿ ಮಿ ದೂರ ಕಾಲ್ನೆಡಿಗೆಯಲ್ಲಿ ಬರಬೇಕಿತ್ತು, ಭಕ್ತರಿಗೆ ಯಾವ ಮೂಲ ಸೌಕರ್ಯವೂ ಇರಲಿಲ್ಲ.
1993 ರಲ್ಲಿ ರಾಮಪ್ಪನವರು ಹೊಳೆಕೊಪ್ಪದಲ್ಲಿ ಸಂಸಾರ ಬಿಟ್ಟು ಒಂಟಿಯಾಗಿ ಸಿಗಂದೂರಿನಲ್ಲಿ ನೆಲೆ ನಿಂತರು. ಕೇತ್ರ ಅಭಿವೃದ್ಧಿಯನ್ನು ಬಿಟ್ಟರೆ ಅವರಿಗೆ ಬರ‍್ಯಾವ ಯೋಚನೆಯೂ ಇರಲಿಲ್ಲ.
1995 ರಿಂದ ಮೊದಲು ನಿರ್ಮಿಸಿದ ಗರ್ಭಗುಡಿಯನ್ನು ಸುತ್ತುವರೆದಂತೆ ವಿಶಾಲವಾದ ದರ್ಶನ ಸ್ಥಳ, ಪ್ರದರ್ಶನ ಪ್ರಾಕಾರ , ಪಾರಾಯಣ ಸ್ಥಳ, ಯಾಗ ಶಾಲೆ, ಮೊದಲಾದವುಗಳನ್ನು ನಿರ್ಮಾಣ ಮಾಡಲಾಗಿದೆ. ನಂತರದ ದಿನಗಳಲ್ಲಿ ಕಛೇರಿಗಳು, ಧರ್ಮದರ್ಶಿಗಳಿಗೆ ಪ್ರತ್ಯೇಕ ಕಾರ್ಯ ಕೊಠಡಿ, ಸೇವಾ ಕೌಂಟರ್‌ಗಳು, ಹಣ್ಣುಕಾಯಿ ಅಂಗಡಿ, ಪ್ರವಾಸಿಗರಿಗಾಗಿ ಹೋಟೆಲ್ ಪ್ರಾರಂಭಿಸಲಾಯಿತು. ಭಕ್ತಾದಿಗಳ ಸಂಖ್ಯೆ ಹೆಚ್ಚದಂತೆ ಸರತಿ ಸಾಲಿನ ಗರ್ಡ ನಿರ್ಮಿಸಲಾಯಿತು. ಕಲ್ಯಾಣ ಮಂಟಪ, ಯಾತ್ರಿಕರ ತಂಗುದಾಣ , ಅನ್ನದಾಸೋಹಕ್ಕೆ ಸುಸಜ್ಜಿತ ಅಡಿಗೆ ಮನೆ, ಬೋಜನ ಶಾಲೆ ಮೊದಲಾದವುಗಳು ನಿರ್ಮಾಣಗೊಂಡವು. ಅಂಗಡಿ ಮುಂಗಟ್ಟುಗಳು ಪ್ರಾರಂಭಗೊAಡವು,.
2005 ನೇ ಇಸ್ವಿಯವರೆಗೂ ಸ್ಥಳೀಯರಿಗಷ್ಟೇ ಗೊತಿದ್ದ ಸಿಗಂದೂರು ಪವಾಡ ಸದೃಶವಾಗಿ ಕ್ಷೇತ್ರವಾಗಿ ಬೆಳೆದು ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಹಲವು ತಲ್ಲಣಗಳಿಗೆ ಸಾಕ್ಷಿಯಾಗಿದ್ದ ಕರೂರು ಹೋಬಳಿಯ ಕುಗ್ರಾಮವೊಂದು ಜಾಗತಿಕ ನಕಾಶೆಯಲ್ಲಿ ಕಾಣಿಸಿಕೊಂಡಿದೆ. ರಾಷ್ಟçದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ತಮ್ಮ ಭಾಷಣದಲ್ಲಿ ಸಿಗಂದೂರು ಕ್ಷೇತ್ರದ ಚೌಡೇಶ್ವರಿ ದೇವಿಯ ಹೆಸರನ್ನು ಹಲವಯ ಬಾರಿ ಪ್ರಸ್ತಾಪಿಸಿದ್ದಾರೆ.
ಭೂತರಾಯ
ಸಾಮಾನ್ಯವಾಗಿ ಕೆಳವರ್ಗದವರಿಗೆ ಚೌಡಿ, ಭೂತ, ಜಟಕ ಮೊದಲಾದ ದೇವತೆಗಳು ಆರಾಧ್ಯವಾಗಿದ್ದು, ಕುರಿ , ಕೋಳಿ ಹರಕೆಯನ್ನು ಕಟ್ಟಿಕೊಳ್ಳುವುದು ರೂಢಿಗತವಾಗಿದೆ.
ಸಿಗಂದೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಭಕ್ತರಲ್ಲಿಯೂ ಚೌಡಮ್ಮನಿಗೆ ರಕ್ತಾಹಾರವಾಗಿ ಕೋಳಿ, ಕುರಿ, ಹರಕೆ ಕಟ್ಟಿಕೊಳ್ಳುವ ಪದ್ದತಿಯಿದೆ. ಮುಳುಗಡೆ ಪೂರ್ವದಲ್ಲಿ ಚೌಡಿ ಬನದ ಸಮೀಪದಲ್ಲಿ ಬೃಹತ್ ಮರದಡಿ ಭೂತಪ್ಪನ ಕಟ್ಟೆ ಇತ್ತು. ರಕ್ತಾಹಾರದ ಹರಕೆಯಿದ್ದರೆ ಅರ್ಚಕರಿಂದ ಸಿಂಗಾರದ ಪ್ರಸಾದ ಪಡೆದು, ಭೂತನಕಟ್ಟೆಯಲ್ಲಿ ಪ್ರಾಣಿಬಲಿ ನೀಡುತ್ತಿದ್ದರು. ಈ ಪರಂಪರೆ ಈಗಲೂ ಮುಂದುವರೆದಿದೆ.
ಚೌಡಮ್ಮನ ದೇವಾಲಯದ ಆವರಣದ ಹೊರಗೆ ಹಲಸಿನ ಮರದಡಿಯಲ್ಲಿ ಸಿಗಂದೂರು ಭೂತಪ್ಪನನ್ನು ಪ್ರತಿಷ್ಠಾಪಿಸಲಾಗಿದೆ. ಚೌಡಮ್ಮನ ಭಂಟ ಎಂದೇ ನಂಬಲಾದ ಭೂತಪ್ಪ ಭೂತಪ್ಪ ದೇವಿ ಚೌಡೇಶ್ವರಿಯ ಅನುಜ್ಞೆಯಂತೆ ಕಷ್ಟ ಪರಿಹರಿಸುವ, ಭಕ್ತರನ್ನು ಕಾಯುವ ಕಾರ್ಯ ನಡೆಸುತ್ತಾನೆ ,ತಪ್ಪು ಮಾಡಿದವರನ್ನು ಶಿಕ್ಷಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
ಸಿಗಂದೂರಿಗೆ ಆಗಮಿಸುವ ಭಕ್ತರು ದೇವಿಯ ದರ್ಶನದ ನಂತರ ಭೂತರಾಯನ ಕಟ್ಟೆಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಿಯ ಅರ್ಚಕರಿಂದ ನಿತ್ಯ ಭೂತರಾಯನಿಗೆ ಸಾಂಪ್ರಾದಯಿಕ ಪೂಜೆ ನಡೆಯುತ್ತದೆ. ನಂತರ ಭೂತಪ್ಪನ ಪೂಜಾರಿ ದೇವಿಯ ಪ್ರಸಾದ ಪಡೆದು ಬಲಿ ಪೂಜೆ ನೆರವೇರಿಸುತ್ತಾನೆ. ಪೂಜಾರಿಯಿಂದಲೇ ಪ್ರಾಣಿಯ ಬಲಿ ನೀಡಲಾಗುತ್ತದೆ. ದೇವಾಲಯದ ಸುತ್ತಮುತ್ತ ಬಲಿ ನೀಡಿದ ಪ್ರಾಣಿಯ ಅಡುಗೆ ಮಾಡಿ ಉಣ್ಣುವ ಪದ್ದತಿ ಇಲ್ಲ. ಬಹುತೇಕ ಭಕ್ತರು ಬಲಿ ನೀಡಿದ ಪ್ರಾಣಿಯನ್ನು ಮನೆಗೆ ಒಯ್ದು ಬಳಸುತ್ತಾರೆ. ಕೆಲವು ದೂರದೂರಿನ ಭಕ್ತರು ಹಿನ್ನೀರ ತಟದಲ್ಲಿ ಅಡುಗೆ ಮಾಡಿ ಉಣ್ಣುತ್ತಾರೆ.
ಕಳ್ಳತನದ ಪ್ರಕರಣಗಳಲ್ಲಿ ಕದ್ದ ಮಾಲನ್ನು ಮರಳಿಸದಿದ್ದರೆ ಭೂತರಾಯ ರಕ್ತ ಹೀರುತ್ತಾನೆ ಎಂಬ ಭಯ ಸಾರ್ವತ್ರಿಕವಾಗಿದೆ. ಕಳ್ಳರು ಸಿಗಂದೂರಿಗೆ ಹರಕೆ ಕಟ್ಟಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು , ಕದ್ದ ಮಾಲನ್ನು, ಮಾಲಕನ ಮನೆ ಸಮೀಪ ಒಯ್ದು ಇಟ್ಟು , ದೇವಿಗೆ ಶರಣಾಗುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ.
ಸಿಗಂದೂರಿನ ವಿಶೇಷತೆಗಳು
ಸಿಗಂದೂರು ಚೌಡೇಶ್ವರಿಯ ಸನ್ನಿಧಿಯಲ್ಲಿ ಜಾತಿ ಭೇಧವಿಲ್ಲ. ಪೂಜೆ ಪುನಸ್ಕಾರಕ್ಕೆ ನಿಬಂಧನೆಗಳಿಲ್ಲ. ಕಾಣಿಕೆ ಸಲ್ಲಿಸುವುದಕ್ಕೆ ಮಾನದಂಡವಿಲ್ಲ. ಭಕ್ತಿಯಿಂದ ಸಲ್ಲಿಸುವ ಪ್ರಾರ್ಥನೆ, ನಿವೇದಿಸಿಕೊಂಡು, ಯಥಾನುಶಕ್ತಿಯಾಗಿ ಕಟ್ಟಿಕೊಳ್ಳುವ ಹರಕೆ ಇಲ್ಲಿನ ಪದ್ದತಿ.
ಸಂತತಿ, ಆರೋಗ್ಯ, ದಾರಿದ್ರ ನಿವಾರಣೆ. ಕಂಕಣಬಲ, ಮೊದಲಾದ ಅಭಿಲಾಷೆಯುಳ್ಳವರು ಸನ್ನಧಿಗೆ ಬಂದು ಚೌಡಮ್ಮನಲ್ಲಿ ಹರಕೆ ಹೊರುತ್ತಾರೆ. ತಿಂಗಳೊಪ್ಪತ್ತಿನಲ್ಲಿಯೇ ಇಷ್ಠಾರ್ಥ ಫಲಿಸಿ ಮತ್ತೆ ಬಂದು ಹರಕೆ ತೀರಿಸುತ್ತಾರೆ. ಸಂತತಿ ಭಾಗ್ಯಕ್ಕೆ ತೊಟ್ಟಲು ಪೂಜೆ, ತುಲಾಭಾರ ಮುಂತಾದ ಹರಕೆಗಳನ್ನೂ ಭಕ್ತರು ಮಾಡಿಕೊಳ್ಳುತ್ತಾರೆ. ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದವರು ಇಲ್ಲಿ ಹರಕೆ ಕಟ್ಟಿಕೊಂಡು ಸಂತತಿ ಪಡೆದ ಸಾವಿರಾರು ನಿದರ್ಶನಗಳಿವೆ. ವೈದ್ಯರು ಕೈಚೆಲ್ಲಿದ ಸಾವಿಗೆ ಸಮೀಪವಾದ ಕೆಲ ರೋಗಿಗಳು ಇಲ್ಲಿ ಹರಕೆ ಮಾಡಿಕೊಂಡು , ಬದುಕಿ ಇಂದಿಗೂ ಗಟ್ಟಿ ಮುಟ್ಟಾಗಿ ಬಾಳುತ್ತಿರುವವರು ಇದ್ದಾರೆ.
ಸಿಗಂದೂರು ಕ್ಷೇತ್ರದಲ್ಲಿ ನಿತ್ಯ ತ್ರಿಕಾಲ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸೂರ್ಯೋದಯಕ್ಕೆ ಮುನ್ನವೇ ಚೌಡಮ್ಮನ ಮೂಲ ಶಿಲೆಗೆ ಮಂತ್ರೋಕ್ತವಾಗಿ ಅಬಿಷೇಕ ಮಾಡಿ. ಸೀರೆ ಉಡಿಸಿ, ಬೆಳ್ಳಿಯ/ಬಂ ಗಾರದ ಮುಖವಾಡ. ಬಂಗಾರದ ದಾಗಿನೆ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ, ವಿಧಿವತ್ತಾಗಿ ಪೂಜಿಸುತ್ತಾರೆ.
ಪ್ರತಿ ದಿನ ಚಂಡಿಕಾಯಾಗ ನಡೆಯುತ್ತದೆ. ಮಧ್ಯಾನ್ಹ ನೈವೇದ್ಯ ಮಹಾಮಂಗಳಾರತಿ ನಡೆಯುತ್ತದೆ. ಪುಷ್ಪಾರ್ಚನೆ , ಕುಂಕುಮಾರ್ಚನೆ, ಸಪ್ತಶಿತಿ ಪಾರಾಯಣದಿಂದ ಪೂಜೆ ಸಲ್ಲಿಸುವ ಅವಕಾಶ ಭಕ್ತರಿಗಿದೆ. ಮುಖ್ಯ ಅರ್ಚಕರಲ್ಲದೆ ೩೦ಕ್ಕೂ ಹೆಚ್ಚು ವೇದಪಾರಂಗತರ ತಂಡ ನಿತ್ಯ ದೇವಿಯ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿರುತ್ತಾರೆ.
ಬಹಳ ಕಾಲದಿಂದ ಮಲೆನಾಡ ಭಾಗದ ಬಹುತೇಕ ಕೃಷಿ ಕುಟುಂಬಗಳಲ್ಲಿ ಚೌಡಮ್ಮನ ಸನ್ನಿಧಿಗೆ ಮೀಸಲಿಡುವ ಪದ್ದತಿ ರೂಢಿಯಲ್ಲಿ ಬಂದಿದೆ. ಹೊಸದಾಗಿ ತೋಟ ಪಸಲಿಗೆ ಬಂದಾಗ, ವರ್ಷದ ಬೆಳೆ ಕೈ ಸೇರಿದಾಗ ಅದನ್ನು ದೇವಿಗೆ ಸಮರ್ಪಿಸುತ್ತಾರೆ. ಆಕಳು ಕರು ಹಾಕಿದಾಗ ಹಾಲನ್ನು ತಂದು ಒಪ್ಪಿಸುವುದು, ಮನೆ ಕಟ್ಟುವಾಗ , ಮದುವೆ ಮತ್ತಿತರ ಶುಭ ಸಮಾರಂಭ ನಡೆಸುವ ಮುನ್ನ ದೇವಿಯ ಹೆಸರಲ್ಲಿ ಕಾಣಿಕೆ ತೆಗೆದಿಡುವುದು , ಮದುಮಕ್ಕಳ ಜೋಡಿ ಸನ್ನಿಧಾನಕ್ಕೆ ಬಂದು ಉಡಿ ಸಮರ್ಪಿಸುವುದು ಸೇವೆಯಾಗಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564