ಬ್ರಾಹ್ಮ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರದಾಯವಾಗಿದೆ.
ವಶಿಷ್ಠ (Mizar) ಹಾಗೂ #ಅರುಂಧತಿ (Alcor) ಅವಳಿ ನಕ್ಷತ್ರಗಳು. ಸಪ್ತರ್ಷಿ ಮಂಡಲದ (Ursa Major) ತುದಿಯಿಂದ ಮರೀಚಿಯ (Alkaid) ನಂತರದ ಎರಡನೆಯ ಸ್ಥಾನ ವಶಿಷ್ಠ ಹಾಗೂ ಅದಕ್ಕೆ ಅಂಟಿಕೊಂಡಂತೆ ಪಕ್ಕದಲ್ಲಿರುವುದೇ ಅರುಂಧತಿ ನಕ್ಷತ್ರ. ಇವೆರಡೂ ಅವಳಿ ನಕ್ಷತ್ರಗಳು.
ಖಗೋಳಶಾಸ್ತ್ರದಲ್ಲಿ ಅವಳಿ ನಕ್ಷತ್ರಗಳೆಂದರೆ ಒಂದು ನಕ್ಷತ್ರವನ್ನು ಇನ್ನೊಂದು ನಕ್ಷತ್ರವು ಸುತ್ತುವುದು. ಆದರೆ ವಶಿಷ್ಠ-ಅರುಂಧತಿಯ ವಿಷಯದಲ್ಲಿ ಈ ನಿಯಮ ಬೇರೆ ಆಯಾಮ ಹೊಂದಿದೆ.
ವಶಿಷ್ಠ-ಅರುಂಧತಿಗಳು ಪರಸ್ಪರ ಒಂದರ ಸುತ್ತು ಇನ್ನೊಂದು ಸುತ್ತುತ್ತವೆ. ಇದು ಖಗೋಳ ಸೋಜಿಗ. ಮತ್ತೆಲ್ಲಿಯೂ ಇಂಥ ಉದಾಹರಣೆಗಳಿಲ್ಲ. ವಶಿಷ್ಠ-ಅರುಂಧತಿ ನಕ್ಷತ್ರಗಳು ಪರಸ್ಪರ ಒಂದರ ಸುತ್ತ ಇನ್ನೊಂದು ಸದಾ ಸುತ್ತುತ್ತಿರುತ್ತವೆಯೆಂಬ ವಿಷಯವನ್ನು ಆಧುನಿಕ ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
ಪೌರಾಣಿಕವಾಗಿ ವಶಿಷ್ಠ-ಅರುಂಧತಿಯರದು ಆದರ್ಶ ಜೋಡಿ. ಅವರು ಪರಸ್ಪರ ಗೌರವ ಕೊಟ್ಟು ಆದರ್ಶ ಬದುಕು ನಡೆಸುತ್ತಾರೆ. ಎಂಥ ಕಠಿಣ ಸಮಯದಲ್ಲಿಯೂ ಲೋಕಕಲ್ಯಾಣಕ್ಕಾಗಿ ಕಂಕಣಬದ್ಧರಾಗಿರುತ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇವರು ಬಾಳುವ ರೀತಿ ನೂತನ ವಧು-ವೃರಿಗೆ ಆದರ್ಶವಾಗಲಿ ಎಂಬುದೇ ಪ್ರಾಚೀನರ ಆಶಯ. ಹಳೆಯ ಕಾಲದಲ್ಲಿ ಅರುಂಧತಿ ದರ್ಶನವನ್ನು ಸಂಧ್ಯಾ ಕಾಲದ ನಂತರ ಮಾಡಿಸಲಾಗುತ್ತಿತ್ತು. ಅದು ಸರಿಯಾದ ಸಮಯ. ಆದರೆ ಈಗ ಸಂಜೆ ಯ ಒಳಗೆ ಗಂಡಿನ ಕಡೆಯವರು ಹೊರಟುಬಿಡುವುದರಿಂದ ಸಂಪ್ರದಾಯವು ಮಾತ್ರ ಉಳಿದಿದೆ …
ಆದರೂ ವೈದಿಕ ಮದುವೆಗಳು ಅರುಂಧತಿ ದರ್ಶನವಿಲ್ಲದೇ ಪೂರ್ಣಗೊಳ್ಳುವುದಿಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿ_ಮುನಿಗಳು ಇಂಥ ಗಹನ ವಿಷಯಗಳನ್ನು ಬರಿಗಣ್ಣಿನಿಂದಲೇ ಗುರುತಿಸಿ, ಅದಕ್ಕೊಂದು ಧಾರ್ಮಿಕ, ಕೌಟುಂಬಿಕ ಆಚರಣೆಯನ್ನು ನೀಡಿ ಸಂಪ್ರದಾಯಗಳನ್ನು ಸಶಕ್ತವಾಗಿ ಕಟ್ಟಿರುವುದು ಸೋಜಿಗವೇ ಸರಿ.
ಅನುಪಮ ಸಾಧ್ವಿ ಅರುಂಧತಿ
ಕರ್ದಮ ದೇವಹೂತಿಯರ ಎಂಟನೆಯ ಕನ್ಯೆ ಅರುಂಧತಿ. ಸಪ್ತರ್ಷಿಗಳಲ್ಲಿ ಅಗ್ರಗಣ್ಯನಾದ ವಸಿಷ್ಠನ ಧರ್ಮಪತ್ನಿ.
ವಿದ್ಯಾ ವಿವೇಕಗಳಿಂದ ಋಷಿ ಮಂಡಲದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿದ್ದಳು.
ಸಾವಿತ್ರೀದೇವಿ ಹಾಗೂ ಬಹುಲಾದೇವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅರುಂಧತಿ ಸಕಲಜ್ಞಾನ ಸಂಪನ್ನೆಯಾಗಿದ್ದಳು.
ತನ್ನ ನೂರು ಮಕ್ಕಳನ್ನು ವಿಶ್ವಾಮಿತ್ರ ಶಾಪದಿಂದ ಕೊಂದಾಗಲೂ ಸಹನೆ ಮೀರದೆ ಅವನನ್ನು ಕ್ಷಮಿಸಿದ ಸಾಧ್ವಿ. ಮುಂದೆ ಹುಟ್ಟಿದ ಶಕ್ತಿ ಎಂಬ ಮಗ ವಿಶ್ವಾಮಿತ್ರನ ತಂತ್ರಕ್ಕೆ ಬಲಿಯಾದಾಗಲೂ ಸಹಿಸಿಕೊಂಡಿದ್ದಳು. ಇವಳ ಕೊನೆಯ ಮಗ ಸುಯಜ್ಞ ರಾಮನ ಸಹಪಾಠಿ.
ರಾಮಾಯಣದಲ್ಲಿ ಅರುಂಧತಿ ಸೀತೆಗೆ ದಾಂಪತ್ಯ ಜೀವನದ ಬಗ್ಗೆ ಉಪದೇಶವನ್ನು ನೀಡುತ್ತಾಳೆ. ಇಲ್ಲಿ ಇವಳ ಹಿರಿಮೆಯನ್ನು ಕಾಣಬಹುದು.
ಅಗ್ನಿ ಪತ್ನಿ ಸ್ವಾಹಾಳು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಳೆಯುತ್ತಿದ್ದಳು. ಆದರೆ ಅರುಂಧತಿಯ ರೂಪವನ್ನು ಮಾತ್ರ ತಳೆಯಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅರುಂಧತಿಯ ವಿಶಿಷ್ಟ ವ್ಯಕ್ತಿತ್ವ ಹಾಗೂ ಅಗಾಧ ಪಾಂಡಿತ್ಯ. ಇಂದ್ರಾದಿ ದೇವತೆಗಳಿಗೂ ಅರುಂಧತಿ ಗೃಹಸ್ಥಧರ್ಮದ ಬಗ್ಗೆ ಉಪದೇಶ ನೀಡಿದ್ದಳು.
ವಸಿಷ್ಠ-ಅರುಂಧತಿಯರ ದಾಂಪತ್ಯ ಸಾರ್ವಕಾಲಿಕ ಆದರ್ಶವಾಗಿ ನಿಂತಿದೆ. ವಿವಾಹದಲ್ಲಿ ಅರುಂಧತೀಪೂಜೆ ಹಾಗೂ ಅರುಂಧತೀ ನಕ್ಷತ್ರ ದರ್ಶನ ದಾಂಪತ್ಯಜೀವನದಲ್ಲಿ ಶುಭವನ್ನುಂಟುಮಾಡುತ್ತವೆ.
ಸೃಷ್ಟಿಗೆ ಪ್ರತಿಸೃಷ್ಠಿ ಸೃಷ್ಟಿಯನ್ನೇ ಸೃಷ್ಟಿಸಬಲ್ಲವರಾಗಿದ್ದ ವಿಶ್ವಾಮಿತ್ರ ಮಹರ್ಷಿಯು, ತನ್ನನ್ನು ಬ್ರಹ್ಮರ್ಷಿ ಎನ್ನಲು ಒಪ್ಪದ ವಸಿಷ್ಠರನ್ನು ಬಹಳವಾಗಿ ದ್ವೇಷಿಸುತ್ತಿರುತ್ತಾರೆ.
ಒಮ್ಮೆ ಊಟದ ಸಮಯದಲ್ಲಿ ವಸಿಷ್ಠರನ್ನು ಅವರ ಪತ್ನಿ ಕೇಳುತ್ತಾರೆ; ಸ್ವಾಮಿ ಬ್ರಹ್ಮರ್ಷಿ ಆಗುವ ಅರ್ಹತೆಗಳು ವಿಶ್ವಾಮಿತ್ರರಲ್ಲಿ ಇಲ್ಲವೇ? ನೀವೇಕೆ ಅವರನ್ನು ಬ್ರಹ್ಮರ್ಷಿ ಎಂದು ಒಪ್ಪುತ್ತಿಲ್ಲ!? ಆಗ ವಸಿಷ್ಠ’ರು ಹೇಳುತ್ತಾರೆ;
…..”ನಾನು”… ಬದುಕಿರುವ ತನಕ ವಿಶ್ವಾಮಿತ್ರ ಬ್ರಹ್ಮರ್ಷಿ ಆಗಲು ಸಾಧ್ಯವೇ ಇಲ್ಲ ಎಂದುಬಿಡುತ್ತಾರೆ. ಇದೇ ವಿಚಾರವನ್ನು ವಸಿಷ್ಠರಲ್ಲಿ ಕೆದಕಲು ಬಂದಿದ್ದ ವಿಶ್ವಾಮಿತ್ರ ಮಹರ್ಷಿಗೆ ಇದನ್ನು ಕೇಳಿ ಕೋಪ ಉಕ್ಕುತ್ತದೆ. ಹಾಗೋ! ಏ ವಸಿಷ್ಠ, ನಿನ್ನನ್ನು ಕೊಂದಾದರೂ ನಾನು ಬ್ರಹ್ಮರ್ಷಿ ಆಗೇ ತೀರುತ್ತೇನೆ ಎಂದುಕೊಳ್ಳುವ ಹೊತ್ತಿಗೆ ಮುಂದುವರೆದು ಅರುಂಧತಿ ಕೇಳುತ್ತಾರೆ; ಹಾಗೆಂದರೇನು ಸ್ವಾಮಿ? ಆಗ ವಸಿಷ್ಠರು; ಹೌದು ದೇವಿ, ವಿಶ್ವಾಮಿತ್ರ ಮಹರ್ಷಿಗಳು ಎಂದೋ ಬ್ರಹ್ಮರ್ಷಿಯಾಗಿದ್ದಾರೆ. ಆದರೆ ಅವರಲ್ಲಿರುವ ನಾನು ಅವರನ್ನು ಬ್ರಹ್ಮರ್ಷಿ ಘೋಷಣೆಗೆ ಅಡ್ಡಿಯಾಗಿ ನಿಂತಿದೆ. ನಿಜ ಹೇಳಬೇಕೆಂದೇ ಅವರು ನನಗಿಂತ ಶ್ರೇಷ್ಠರು…
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಇದನ್ನು ಕೇಳಿಸಿಕೊಂಡ ವಿಶ್ವಾಮಿತ್ರ ಮಹರ್ಷಿಗಳು ವಸಿಷ್ಠರ ಮುಂದೆ ಕೈಮುಗಿದು ಹೇಳುತ್ತಾರೆ; ವಸಿಷ್ಠ ಮುನಿಗಳೇ ನಿಮ್ಮನ್ನು ಗೆಲ್ಲಲು ಹೊರಟು ನಾನು, ನನ್ನಲ್ಲಿದ್ದ ಅಹಂಕಾರವನ್ನು ಗೆಲ್ಲವುದ ಮರೆತೆ. ಸುಖಾಸುಮ್ಮನೆ ನಿಮ್ಮನ್ನು ಸದಾ ಕಾಡುತ್ತಲೇ ಬಂದೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎನ್ನುತ್ತಾ ಕಾಲಿಗೆರಗಲು ಬಂದಾಗ! ವಸಿಷ್ಠರು ಅವರನ್ನು ತಡೆದು ತಬ್ಬಿಕೊಳ್ಳುತ್ತಾರೆ. ಮುಂದೆ ವಸಿಷ್ಠರ ಮೇಲಿನ ವೈರತ್ವಕ್ಕೆ ಅಂತ್ಯವಾಗುತ್ತದೆ.