ಮಡಿಕೇರಿ: ಸಂಚಾರಿ ಪೊಲೀಸರ ಕೆಲಸ ಅಂತ್ರೆ ಕೇವಲ ಟ್ರಾಫಿಕ್ ನಿಯಂತ್ರಣ ಮಾಡೋದಲ್ಲ. ಬದಲಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡೋರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಆಗಿರುತ್ತದೆ. ಇದಲ್ಲದೇ ಅನೇಕ ಕಡೆ ರಸ್ತೆಯಲ್ಲಿ ಗುಂಡಿ ಬಿದ್ದಾಗ ಅವುಗಳನ್ನು ತಾವೇ ಸ್ವತಹ ಮುಚ್ಚಿದ್ದು ನಡೆದಿದೆ. ಇದರ ನಡುವೆ ಈ ಸಂಚಾರಿ ಮಹಿಳಾ ಹೆಡ್ ಕಾನ್ಸ್ ಸ್ಟೇಬಲ್ ಕೆಲಸ ಮಾತ್ರ ಎಲ್ಲರೂ ಮೆಚ್ಚುವಂತದ್ದು. ಜೊತೆಗೆ ಮೇಡಂ ಹ್ಯಾಟ್ಸ್ ಆಫ್ ಅನ್ನದೇ ಇರೋಕಾಗಲ್ಲ. ಅನೇನು ಅಂತ ಮುಂದೆ ಓದಿ.
ಕಾನೂನು ಪಾಲನೆ ಒಂದೆಡೆಯಾದ್ರೇ, ಮಾತೃ ಮಮತೆ ಇನ್ನೊಂದು ಕಡೆ ಎಂಬುದಕ್ಕೆ ಕುಶಾಲನಗರದ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಆಶಾ ಸಾಕ್ಷಿಯಾಗಿದ್ದಾರೆ. ಶಾಲಾ ಮಕ್ಕಳ ಬಗ್ಗೆ ಇವರು ತೋರಿದಂತ ಕಾಳಜಿ, ಕಾನೂನು ಪಾಲನೆಯ ಜೊತೆಗೆ ಮಕ್ಕಳ ಜೀವ ರಕ್ಷಣೆಯ ಮಹತ್ವದ ಕೆಲಸವನ್ನೇ ಮಾಡಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಅವರು ಮಾಡಿದಂತ ಕೆಲಸದ ವೀಡಿಯೋ ನೋಡಿದಂತ ಪ್ರತಿಯೊಬ್ಬರು ಹೇಳೋ ಮಾತಾಗಿದೆ.
ಈ ಬಗ್ಗೆ Coorg the kashmir of karnataka ಎಂಬುವರು ಎಕ್ಸ್ ಮಾಡಿದ್ದು, ಅದರಲ್ಲಿ ಕುಶಾಲನಗರದಲ್ಲಿ ಕಾಲೇಜುಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಇಳಿಸಿ ಅವರನ್ನು ದಾರಿಯಲ್ಲಿ ಹೋಗುತ್ತಿದ್ದ ಖಾಸಗಿ ವಾಹನಗಳಲ್ಲಿ ಕಳಿಸಿಕೊಟ್ಟು ಅಪಾಯದ ಬಗ್ಗೆ ತಿಳಿ ಹೇಳಿ ಮಾದರಿಯಾದ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಆಶಾ ಮೇಡಂ ಎಂದು ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಕಾಲೇಜುಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಇಳಿಸಿ ಅವರನ್ನು ದಾರಿಯಲ್ಲಿ ಹೋಗುತ್ತಿದ್ದ ಖಾಸಗಿ ವಾಹನಗಳಲ್ಲಿ ಕಳಿಸಿಕೊಟ್ಟು ಅಪಾಯದ ಬಗ್ಗೆ ತಿಳಿ ಹೇಳಿ ಮಾದರಿಯಾದ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಆಶಾ ಮೇಡಂ. @KSRTC_Journeys pic.twitter.com/SrIPNGPo3e
— Coorgthekashmirofkarnataka (@Coorgthekashmir) March 24, 2024
ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ವೀಡಿಯೋ ನೋಡಿದಂತ ಪ್ರತಿಯೊಬ್ಬರೂ ಹೆಡ್ ಕಾನ್ಸ್ ಸ್ಟೇಬಲ್ ಆಶಾ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನೂ ಈ ವೀಡಿಯೋ ವೈರಲ್ ಆಗಿರೋದನ್ನು ಗಮನಿಸಿದಂತ ಸಂಚಾರ ವಿಭಾಗದ ADGP ಅಲೋಕ್ ಕುಮಾರ್ ಅವರು, ಆಶಾ ಅವರ ಕಾರ್ಯಕ್ಕೆ ನಾನು ಮೆಚ್ಚುಗೆಯನ್ನು ತಿಳಿಸುತ್ತೇನೆ. ಪುಟ್ ಬೋರ್ಡ್ ನಲ್ಲಿ ಪ್ರಯಾಣಿಸುವುದು ಮಾರಣಾಂತಿಕವೆಂದು ಸಾಭೀತುಪಡಿಸಬಹುದು. ನಿನ್ನೆ ತುಮಕೂರು ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿಸಿ ಬಸ್ಸಿನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Will convey appreciation
Travelling on footboard may prove to be fatal
Yesterday one person died in Tumkur district due to fall from a KSRTC bus#RoadSafety https://t.co/p3aPAL6s2y
— alok kumar (@alokkumar6994) March 24, 2024
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್
BREAKING: ನಾಳೆ ಬೆಳಗ್ಗೆ ಬಿಜೆಪಿಯೊಂದಿಗೆ ‘KRPP ಪಕ್ಷ’ ವಿಲೀನ: ಜನಾರ್ಧನ ರೆಡ್ಡಿ ‘BJP ಪಕ್ಷ’ ಸೇರ್ಪಡೆ