ಬೆಂಗಳೂರು: ಈವರೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನು ಮಾತ್ರವೇ ನೇಮಕ ಮಾಡಲಾಗುತ್ತಿತ್ತು. ಹೊಸ ಸಂಪ್ರದಾಯ ಎನ್ನುವಂತೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿ ಕಾಂಗ್ರೆಸ್ ಸರ್ಕಾರ ಮುನ್ನುಡಿ ಬರೆದಿತ್ತು. ಈಗ ಡಿಸಿಎಂ ಡಿಕೆ ಶಿವಕುಮಾರ್ ಗೂ ರಾಜಕೀಯ ಸಲಹೆಗಾರರನ್ನು ನೇಮಕ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ನಡವಳಿಯನ್ನು ಹೊರಡಿಸಿದ್ದಾರೆ. 34 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರೋದಲ್ಲದೇ, ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಗಳಿಗೂ ರಾಜಕೀಯ ಸಲಹೆಗಾರರನ್ನ ನೇಮಕ ಮಾಡಿ ಆದೇಶಿಸಿದ್ದಾರೆ.
ಸಿಎಂ ಹೊರಡಿಸಿರುವಂತ ನಡವಳಿಯಲ್ಲಿ ಹಾನಗಲ್ ಶಾಸಕರಾಗಿರುವಂತ ಶ್ರೀನಿವಾಸ ಮಾನೆ ಅವರನ್ನು ಉಪ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಿಸಿಎಂಗೂ ರಾಜಕೀಯ ಸಲಹೆಗಾರರನ್ನ ನೇಮಕ ಮಾಡಲಾಗಿದೆ.
BIG UPDATE: ’34 ಶಾಸಕ’ರಿಗೆ ‘ನಿಗಮ-ಮಂಡಳಿ ಅಧ್ಯಕ್ಷ’ ಸ್ಥಾನ: ರಾಜ್ಯ ಸರ್ಕಾರದಿಂದ ‘ಅಧಿಕೃತ ಅಧಿಸೂಚನೆ’ ಆದೇಶ ಪ್ರಕಟ
ಸೆಲೆಬ್ರಿಟಿಗಳ 1,000 ಕ್ಕೂ ಹೆಚ್ಚು ‘ಡೀಪ್‌ಫೇಕ್’ ಹಗರಣ ಜಾಹೀರಾತು ವೀಡಿಯೊಗಳನ್ನು ಅಳಿಸಿದ YouTube