ಪಂಜಾಬ್: ಭಾರತ್ ಮಾತಾ ಕಿ ಜೈ ಎನ್ನುವುದು ಕೇವ ಉದ್ಘೋಷವಲ್ಲ. ಇದು ಸೈನಿಕರ ಶಪಥವಾಗಿದೆ. ಅಲ್ಲದೇ ಇಡೀ ದೇಶದ ನಾಗರೀಕರ ಧ್ವನಿಯಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ, ಪಾಕಿಸ್ತಾನದೊಂದಿಗಿನ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ವಾಯುಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
ಈ ಬಳಿಕ ಸೈನಿಕರನ್ನು ಉದ್ದೇಶಿಸಿ ಮಾತನಾಡಿದಂತ ಅವರು ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. “ಭಾರತ್ ಮಾತಾ ಕಿ ಜೈ” ಎಂಬುದು ಕೇವಲ ಒಂದು ಘೋಷಣೆಯಲ್ಲ, ಇದು ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಈ ದೇಶದ ಪ್ರತಿಯೊಬ್ಬ ಸೈನಿಕರ ಪ್ರಮಾಣವಚನವಾಗಿದೆ ಎಂದರು.
#WATCH | At the Adampur Air Base, PM Narendra Modi says "'Bharat Mata ki Jai' maidaan mein bhi goonjti hai aur mission mein bhi. Jab Bharat ke sainik Maa Bharati bolte hai toh dushman ke kaleje kaanp jaate hai…"
He says "Bharat Mata ki Jai is the resolve of every soldier who… pic.twitter.com/NbDgG0TKu1
— ANI (@ANI) May 13, 2025