ಮೈಸೂರು: ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮಾನ್ ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಆದರೇ ಇಂದು ಬಹಳ ನಿರಾಶಾದಾಯಕ, ದೂರದೃಷ್ಠಿಯಿಲ್ಲದ ಬಜೆಟ್ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನೀರಾವರಿ ಯೋಜನಗೆಳಇಗೆ ಅನುದಾನ ನೀಡಿಲ್ಲ. ರಾಜ್ಯದ ನೀರಾವರಿ ಯೋಜನಗೆಳ ಬಗ್ಗೆ ಪ್ರಸ್ತಾಪಿಸಿಲ್ಲ. ರಾಯಚೂರು ಏಮ್ಸ್ ಘೋಷಿಸೋ ನಿರೀಕ್ಷೆ ಇತ್ತು. ಕೇಂದ್ರ ಸಚಿವ ನಡ್ಡಾ ಕೂಡ ಭರವಸೆ ನೀಡಿದ್ದರು. ಬಜೆಟ್ ನಲ್ಲಿ ಏಮ್ಸ್ ಬಗ್ಗೆ ಯಾವ ಪ್ರಸ್ತಾಪವಿಲ್ಲ ಎಂದರು.
ಬೆಂಗಳಊರು ರಾಜಕಾಲುವೆ ನಿರ್ವಹಣೆಗೆ ಬ್ಯುಸಿನೆಸ್ ಕಾರಿಡಾರ್ ಗೆ ನಾವು ಹಣ ಕೇಳಿದ್ದವು. ನಮಗೆ ಕೇಂದ್ರ ಸರ್ಕಾರ ಖಾಲಿ ಚೆಂಬು ಕೊಟ್ಟಿದೆ. ಇಂದಿನ ಕೇಂದ್ರ ಬಜೆಟ್ ದೂರದೃಷ್ಠಿಯಿಲ್ಲದ, ನಿರಾಶಾದಾಯಕ ಬಜೆಟ್ ಆಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಪ್ರಣಾಳಿಕೆಯಲ್ಲಿ ಹೇಳಿದಂತೆ ‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗೌರವಧನ ಹೆಚ್ಚಿಸಿ: ಆರ್.ಅಶೋಕ್ ಆಗ್ರಹ
ಕೇಂದ್ರ ಬಜೆಟ್ 2025: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ | New Income Tax Slab