ಮಂತ್ರಾಲಯಕ್ಕೆ ಹೋಗುವ ಯೋಜನೆಯಾಗಲಿ ಯೋಚನೆಯಾಗಲಿ ನನಗಿರಲಿಲ್ಲ.. ನಿಜ ಹೇಳಬೇಕೆಂದರೆ ಮುಂಚೆ ರಾಘವೇಂದ್ರ ಸ್ವಾಮಿಗಳ ಮೇಲೆ ಅಷ್ಟು ಭಕ್ತಿಯೂ ನನಗಿರಲಿಲ್ಲ.. ಕಾರಣ ನಿಜಕ್ಕೂ ನನಗೆ ಗೊತ್ತಿಲ್ಲ.. ಆದರೆ ಏನೋ ತಿಳಿಯದು ಅಷ್ಟು ಭಕ್ತಿ ಬರುತ್ತಿರಲಿಲ್ಲ..
ಕೆಲ ತಿಂಗಳ ಹಿಂದೆ ಉಡುಗೊರೆಯಾಗಿ ಕೊಟ್ಟ ರಾಘವೇಂದ್ರ ಸ್ವಾಮಿಗಳ ಮೂರ್ತಿಯೊಂದು ಮನೆಗೆ ಬಂತು.. ದೇವರ ಮನೆಯಲ್ಲಿ ಇಟ್ಟು ಪೂಜಿಸಲು ಶುರು ಮಾಡಿದೆ.. ಪೂಜೆ ಮಾಡುವ ಸಮಯದಲ್ಲಿ ಏನಾದರು ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಪ್ಪ ತಂದೆ ಎಂದು ಭಕ್ತಿಯಿಂದ ಒಮ್ಮೆ ಕೇಳಿಕೊಂಡೆ ಅಷ್ಟೇ ನೋಡಿ..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನಂತರ ಸಾಕಷ್ಟು ಕಷ್ಟದ ಸಮಯದಲ್ಲಿ ಗುರುಗಳನ್ನ ಬೇಡಿಕೊಂಡು ನಂತರ ನನ್ನ ಪ್ರಯತ್ನಗಳನ್ನು ಮಾಡಿದಾಗ ಆ ಪ್ರಯತ್ನಗಳಿಗೆ ಫಲ ದೊರಕಲು ಆರಂಭವಾಯಿತು.. ಮಂತ್ರಾಲಯಕ್ಕೆ ಹೋಗುವ ಮನಸ್ಸಾಯಿತು.. ಮೈಸೂರಿನ ರೈಲ್ವೇ ಡಿಪಾರ್ಟ್ಮೆಂಟ್ ನಲ್ಲಿ ಇರುವ ಆತ್ಮೀಯರೊಬ್ಬರ ಬಳಿ ರೈಲ್ವೇ ಟಿಕೆಟ್ ಬುಕ್ ಮಾಡಿಸಿದೆ.. ಆದರೆ ಮರುದಿನಕ್ಕೆ ರಿಟರ್ನ್ ಟಿಕೆಟ್ ಸಿಗಲಿಲ್ಲ.. ಎರಡು ದಿನ ಬಿಟ್ಟು ಆ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿಸಿದೆ..
ಕಳೆದ ಎರಡು ತಿಂಗಳಿಂದ ಸರಿಯಾದ ನಿದ್ರೆ ಇರಲಿಲ್ಲ.. ನೆಮ್ಮದಿಯೂ ಇರಲಿಲ್ಲ.. ಏನಾದರೂ ಆಗಲಿ ಮಂತ್ರಾಲಯಕ್ಕೆ ಹೋಗಲೇಬೇಕೆಂದು ತೀರ್ಮಾನಿಸಿ ಕಾರಿನಲ್ಲೇ ಹೋಗುವ ನಿರ್ಧಾರ ಮಾಡಿದೆನು..
ಕಳೆದ ಮಂಗಳವಾರ ಡಿಸೆಂಬರ್ 2ನೇ ತಾರೀಕಿನಂದು ಸಂಜೆ ನಾಲ್ಕು ಗಂಟೆಗೆ ಮೈಸೂರು ಬಿಟ್ಟ ನಾವು ಮಧ್ಯರಾತ್ರಿ 2 ಗಂಟೆಗೆ ಮಂತ್ರಾಲಯ ತಲುಪಿದೆವು.. ಅಲ್ಲಿ ರೂಮ್ ಸಿಕ್ಕದ್ದು ಮತ್ತೊಂದು ಕತೆ.. ಅದನ್ನು ಮತ್ತೊಮ್ಮೆ ತಿಳಿಸುವೆ.. ಸಧ್ಯಕ್ಕೆ ಅಲ್ಲಿಯೇ ರೂಮ್ ಮಾಡಿ ಬೆಳಗ್ಗೆ ಎದ್ದು ಸ್ನಾನ ಮುಗಿಸಿ ರಾಯರ ದರ್ಶನಕ್ಕೆ ತೆರಳಿದೆವು.. ಭಗವಂತನ ಅನುಗ್ರಹದಿಂದ ನೆಮ್ಮದಿಯ ದರ್ಶನವಾಯಿತು.. ನಂತರ ಅಲ್ಲಿಂದ ಶೇರ್ ಆಟೋದಲ್ಲಿಯೇ ಪಂಚಮುಖಿ ಆಂಜನೇಯ.. ಬಿಚ್ಚಾಲೆ.. ಹೀಗೆ ಐದು ದೇವಸ್ಥಾಗಳಿಗೂ ತೆರಳಿ ದರ್ಶನ ಮುಗಿಸಿ ಮರಳಿ ಬಂದು ಮತ್ತೊಮ್ಮೆ ಫ್ರೆಶ್ ಆಗಿ ಸಂಜೆಯ ರಾಯರ ದರ್ಶನ ಮಾಡಲು ಹೋದೆವು.. ಆಗಲೂ ಮತ್ತೊಮ್ಮೆ ರಾಯರನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಿತು.. ಅಲ್ಲಿಯೇ ರಾತ್ರಿ ಪ್ರಸಾದವೂ ದೊರೆಯಿತು.. ಆ ದಿನ ರಾತ್ರಿ ಅಥವಾ ಬೆಳಗಿನ ಜಾವ ಅಲ್ಲಿಂದ ಹೊರಡುವ ಪ್ಲಾನ್ ನಮ್ಮದಿತ್ತು.. ಆದರೆ ಅದ್ಯಾಕೋ ಮನಸ್ಸು ಅಲ್ಲಿಂದ ಹೋಗುವ ಮನಸ್ಸು ಮಾಡಲಿಲ್ಲ..
ಅಲ್ಲಿಯೇ ರಾಯರ ಸನ್ನಿಧಿಯಲ್ಲಿ ಮಲಗಬೇಕೆನಿಸಿತು.. ಸಾಮಾನ್ಯ ಹೊರ ಊರಿಗೆ ಹೋದರೆ ಒಂದು ಬೆಡ್ ಶೀಟ್ ಅನ್ನು ತೆಗೆದುಕೊಂಡು ಹೋಗುವ ಅಭ್ಯಾಸ.. ಮಗನಿಗೆ ಹಾಗೂ ನನಗೆ ಕೊಂಚ ocd ಸಮಸ್ಯೆ ಇದೆ.. ಆ ಕಾರಣಕ್ಕೆ ಮಲಗಲು ಒಂದು ಬೆಡ್ ಶೀಟ್ ಹಾಗೂ ಕಾರಿನಲ್ಲಿ ಹಿಂಬದಿಯ ಸೀಟ್ ನಲ್ಲಿ ಮಗ ಮಲಗಲು ತೆಗೆದುಕೊಂಡು ಹೋಗಿದ್ದ ದಿಂಬನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ರಾಯರ ಸನ್ನಿಧಿಯಲ್ಲಿ ಹಾಸಿಕೊಂಡು ಮಲಗುವ ನಿರ್ಧಾರವಾಯಿತು.. ಅಲ್ಲಿಯೇ ಮಾರುತ್ತಿದ್ದ ಆಕಾಶಕ್ಕೆ ಹಾರಿಸುವ ಲೈಟ್ ರೀತಿಯ ಒಂದು ಆಟಿಕೆಯನ್ನು ತೆಗೆದುಕೊಂಡು ಮಗ ಸಂತೋಷದಿಂದ ಆಡುತ್ತಿದ್ದ.. ನಾನು ಕಣ್ಮುಚ್ಚಿ ಮಲಗಿದವಳೆ ಇನ್ನು ಎಚ್ಚರವಾದದ್ದು ಮಾತ್ರ ಬೆಳಗಿನ ಜಾವ ನಾಲ್ಕಕ್ಕೆ.. ಆಹಾ ಎಂತಹ ನೆಮ್ಮದಿಯ ನಿದ್ರೆ ಎಂದರೆ ವರ್ಣಿಸಲು ಅಸಾಧ್ಯ..
ಮನೆಯಲ್ಲಿ ಮೆತ್ತಗಿನ ಹಾಸಿಗೆಯ ಮೇಲೆ ಮಲಗಿದರೂ ಒಂದೆರೆಡು ತಿಂಗಳಿನಿಂದ ಸರಿಯಾದ ನಿದ್ರೆ ಇರಲಿಲ್ಲ.. ಮನಸ್ಸಿಗೆ ನೆಮ್ಮದಿ ಇರಲಿಲ್ಲ.. ಆದರೆ ಆ ದಿನ ರಾತ್ರಿ ನಾನು ಯಾವುದೇ ಕನಸಿಲ್ಲದೆ ಕನವರಿಕೆ ಇಲ್ಲದೆ ನಿದ್ರಿಸಿದ್ದು ಮಾತ್ರ ತಂದೆಯ ತೋಳಿನಲ್ಲಿ ಮಗಳೊಬ್ಬಳು ಯಾವುದೇ ಚಿಂತೆಯೇ ಇಲ್ಲದೇ ನೆಮ್ಮದಿಯಿಂದ ಮಲಗಿದಂತೆ ಅನುಭವವಾಯಿತು..
ಬೆಳಗ್ಗೆ ಮಂತ್ರಾಲಯದವರೇ ಒಬ್ಬರು ಪರಿಚಯವಾಗಿ ಮತ್ತೊಮ್ಮೆ ವಿಶೇಷ ದರ್ಶನ ಮಾಡಿಸಿ ರಾಯರ ಫೋಟೋವನ್ನೂ ಸಹ ಉಡುಗೊರೆಯಾಗಿ ಕೊಟ್ಟರು.. ರಾಯರು ನಮ್ಮ ಬದುಕಿಗೆ ಬರಬೇಕು ಎಂದು ತೀರ್ಮಾನಿಸಿದರೆ ಖಂಡಿತ ಬಂದೇ ಬರುವರು..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಭಕ್ತಿಯೇ ಇಲ್ಲದ ನನ್ನನ್ನು ತನ್ನ ಸನ್ನಿಧಿಗೇ ಕರೆಸಿಕೊಂಡು.. ಮೂರು ಮೂರು ಬಾರಿ ದರ್ಶನ ಕೊಟ್ಟು.. ನಾನಿದ್ದೇನೆ ಎನ್ನುವ ಧೈರ್ಯ ಕೊಟ್ಟು.. ತನ್ನ ಅಂಗಳದಲ್ಲೇ ನೆಮ್ಮದಿಯ ನಿದ್ರೆ ಕೊಟ್ಟು.. ನಂಬದ ನನ್ನೊಳಗೇ ಸಂಪೂರ್ಣವಾಗಿ ಆವರಿಸಿಕೊಂಡು.. ಬದುಕಿನಲ್ಲಿ ಎದುರಾಗಿರುವ ಕೆಲ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ಕೊಟ್ಟು ಕಳುಹಿಸಿದ ರಾಘವೇಂದ್ರ ಸ್ವಾಮಿಗಳ ಈ ಆಟವನ್ನು ಏನೆನ್ನಬೇಕೋ ತಿಳಿಯದು..
ಬದುಕೇ ಹೀಗೆ ನಮಗೆ ಯಾವುದು ಬೇಕು ಯಾವುದು ಬೇಡ ಅಂತ ನಾವು ನಿರ್ಧಾರ ಮಾಡುವುದಲ್ಲ.. ಅದನ್ನು ಭಗವಂತ ತೀರ್ಮಾನಿಸುವನು ಎನ್ನುವುದು ಮಾತ್ರ ಸತ್ಯ..
ಬದುಕಿನಲ್ಲಿ ಭಗವಂತ ಕಲಿಸಿದ ಪಾಠವಿದು..