ಬೆಂಗಳೂರು: ಕೇಂದ್ರ ಮಧ್ಯಂತ ಬಜೆಟ್ ಬಗ್ಗೆ ಮಾತಾಡೋದಂತದ್ದು ಏನೂ ಇಲ್ಲ. ಇದೊಂದು ನಿರಾಶಾದಾಯಕ, ಎಲೆಕ್ಷನ್ ಬಜೆಟ್ ಆಗಿದೆ. ಅದರ ಹೊರತಾಗಿ ಬೇರೇನೂ ಇಲ್ಲ ಅಂತ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಕೇಂದ್ರ ಬಜೆಟ್ ಕುರಿತಂತೆ ಸುದ್ಧಿಗಾರರೊಂದಿಗೆ ಮಾತನಾಡಿದಂತ ಅವರು, ಇದೊಂದು ಬಹಳ ಚರ್ಚೆ ಮಾಡುವ ಬಜೆಟ್ ಅಲ್ಲ. ಒಟ್ಟಾರೆ ಕೇಂದ್ರ ಬಜೆಟ್ ನಿರಾಶಾದಾಯಕ ಬಜೆಟ್. ಎಲೆಕ್ಷನ್ ಬಜೆಟ್ ಎಂಬುದಾಗಿ ಹೇಳಿದರು.
2024-25ನೇ ವರ್ಷದ ಮಧ್ಯಂತರ ಬಜೆಟ್ ಮುಗಿಸಿದ್ದಾರೆ. ಚುನಾವಣೆ ಇರೋದರಿಂದ ಪೂರ್ಣ ಬಜೆಟ್ ಘೋಷಣೆ ಆಗದಿರಬಹುದು. ಇಂದು 4765768 ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದರು.
“ಸ್ವೀಟ್ ಸ್ಪಾಟ್ , ಅನೇಕ ಉದ್ಯೋಗಾವಕಾಶಗಳು” : ‘ಮಧ್ಯಂತರ ಬಜೆಟ್’ಗೆ ‘ಪ್ರಧಾನಿ ಮೋದಿ’ ಫುಲ್ ಮಾರ್ಕ್ಸ್