ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಮುಖ್ಯ ಮಾಹಿತಿ.. ಸೂರ್ಯ ಹಾಗೂ ಚಂದ್ರ ಗ್ರಹಣ ಪರಿಣಾಮ ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಇರುವುದಿಲ್ಲ.

ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುವುದರಿಂದ ಹಾಗೂ ನವೆಂಬರ್ 8ರಂದು ಚಂದ್ರ ಗ್ರಹಣ ಇರುವುದರಿಂದ ತಿರುಮಲದ ವೆಂಕಟೇಶ್ವರ ದೇವಸ್ಥಾನವನ್ನು ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ದೇಶಾದ್ಯಂತ ತಿರುಮಲ ತಿರುಪತಿ ದೇವಸ್ಥಾನಗಳ ಆಡಳಿತದಲ್ಲಿರುವ ಸುಮಾರು 60 ಇತರ ದೇವಾಲಯಗಳು ಈ ಸಮಯದಲ್ಲಿ ಬಂದ್​ ಮಾಡಲಾಗುತ್ತದೆ. ಅಲ್ಲದೇ ಸೂರ್ಯ ಮತ್ತು ಚಂದ್ರಗ್ರಹಣದ ಸಮಯದಲ್ಲಿ ನಿತ್ಯ ಅನ್ನದಾನ ಸಂಕೀರ್ಣದಲ್ಲಿ ಯಾವುದೇ ಆಹಾರ ನೀಡಲಾಗುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಸೂರ್ಯಗ್ರಹಣವು ಅಕ್ಟೋಬರ್ 25ರ ಸಂಜೆ 5.11ರಿಂದ ಪ್ರಾರಂಭವಾಗಿ  6.27  ಸಂಜೆ ವರೆಗೆ ಇರುತ್ತದೆ. ನವೆಂಬರ್ 8ರಂದು ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಪ್ರಾರಂಭವಾಗಿ ಅಂದು ಸಂಜೆ 6.19ಕ್ಕೆ ಕೊನೆಗೊಳ್ಳುತ್ತದೆ ಎಂದು ಮಾಹಿತಿ ನೀಡಿದೆ.

BIG NEWS: ‘ಅರಣ್ಯ ಒತ್ತುವರಿ ದಾವೆ’ಯಿಂದ ಬೆಂಗಳೂರು ಅಲೆಯುತ್ತಿರುವ ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್

ದೀಪಾವಳಿ ಅಮಾವಾಸ್ಯೆ ದಿನ ಖಂಡಗ್ರಾಸ ಸೂರ್ಯಗ್ರಹಣ; ಗೋಚರಿಸುವ ಸಮಯ ಸಂಪೂರ್ಣ ಮಾಹಿತಿ ಇಲ್ಲಿದೆ| Solar eclipse 2022

Share.
Exit mobile version