ಬೆಂಗಳೂರು: ನಗರದಲ್ಲಿ ಹೋಟೆಲ್ ಮತ್ತು ಪಿ.ಜಿಗಳಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 14 ಮೊಬೈಲ್ ಫೋನ್ ಮತ್ತು 4 ಲ್ಯಾಪ್‌ಗಳ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 76 ಲಕ್ಷ ಆಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದು, ತಲಘಟ್ಟಪುರ ಪೊಲೀಸ್ ಠಾಣಾ ಸರಹದ್ದಿನ ಮೆಟ್ರೋ ನಿಲ್ದಾಣದ ಹತ್ತಿರದ ಪಿ.ಜಿವೊಂದರಲ್ಲಿ ವಾಸವಾಗಿರುವ ಪಿರಾದುದಾರರು, ದಿನಾಂಕ:16/07/2025 ರಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:15/07/2025 ರಂದು ರಾತ್ರಿ ಪಿರಾದುದಾರರು ತಂಗಿದ್ದ ಪಿ.ಜಿ ಯ ಕೊಠಡಿಗೆ ಮತ್ತೋರ್ವ ವ್ಯಕ್ತಿಯು ತಂಗಲು ಬಂದಿದ್ದು, ಆತನು ಪಿರಾದುದಾರರ 01 ಐ-ಫೋನ್ ಮತ್ತು 01 ಲ್ಯಾಪ್‌ಟಾಪ್ ಹಾಗೂ ಇತರೆ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ದಿನಾಂಕ:14/08/2025 ರಂದು ತಮಿಳುನಾಡು ರಾಜ್ಯದ ಪುಝಲ್ ನಲ್ಲಿರುವ ಕೇಂದ್ರ ಕಾರಾಗೃಹ-2 ರಲ್ಲಿ ನ್ಯಾಯಾಂಗ ಬಂಧನಲ್ಲಿದ್ದ ಓರ್ವ ಆರೋಪಿಯನ್ನು 6 ದಿನಗಳ ಕಾಲ ನ್ಯಾಯಾಲಯದ ಅನುಮತಿಯೊಂದಿಗೆ, ಪೊಲೀಸ್ ಅಭಿರಕ್ಷಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷಗೆ ಪಡೆದ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿ, ಆತನು ಹೋಟೆಲ್ ಮತ್ತು ಪಿ.ಜಿ ಗಳಲ್ಲಿ 3 ರಿಂದ 4 ದಿನಗಳ ಕಾಲ ತಂಗುವುದಾಗಿ ರೂಂ ಬುಕ್ ಮಾಡಿಕೊಂಡು, ಅಲ್ಲಿ ಉಳಿದುಕೊಂಡು, ರಾತ್ರಿ ವೇಳೆಯಲ್ಲಿ ಎಲ್ಲರೂ ಮಲಗಿದ ನಂತರ, ರೂಂನಲ್ಲಿದ್ದವರಿಗೆ ಸಂಬಂಧಿಸಿದ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳು ಹಾಗೂ ಇತರೆ ದಾಖಲಾತಿಗಳನ್ನು ಕಳವು ಮಾಡುತ್ತಿದ್ದುದ್ದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ಆರೋಪಿಯು ತಲಘಟ್ಟಪುರ, ಕಬ್ಬನ್‌ಪಾರ್ಕ್, ನಂದಿನಿ ಲೇಔಟ್, ವೈಯ್ಯಾಲಿ ಕಾವಲ್, ಕೋಣನಕುಂಟೆ, ಶೇಷಾದ್ರಿಪುರಂ, ತಿಪಟೂರು ಟೌನ್, ಯಲಹಂಕ, ಗೋವಿಂದಪುರ ಮತ್ತು ದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳು ಹಾಗೂ ಇತರೆ ದಾಖಲಾತಿಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಕಳವು ಮಾಡಿದ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳನ್ನು ಆತನ ಸ್ನೇಹಿತರುಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ತನಿಖೆಯನ್ನು ಮುಂದುವರೆಸಿ, ದಿನಾಂಕ:16/08/2025 ರಿಂದ 18/08/2025 ರ ಅವಧಿಯಲ್ಲಿ 14 ಮೊಬೈಲ್ ಫೋನ್‌ಗಳು ಮತ್ತು 4 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು * 6,00,000/-(ಆರು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ, 1) ಕೋಣನಕುಂಟೆ ಮೊ.ಠಾಣೆಯ-01 ಮೊಬೈಲ್ ಫೋನ್ ಕಳವು ಪ್ರಕರಣ, 2) ವೈಯಾಲಿಕಾವಲ್ ಪೊ.ಠಾಣೆಯ-02 ಮೊಬೈಲ್ ಫೋನ್ ಕಳವು ಪ್ರಕರಣಗಳು, 3) ತಿಪಟೂರು ಪ್ರೊ.ಠಾಣೆಯ-03 ಮೊಬೈಲ್ ಫೋನ್ ಕಳವು ಪ್ರಕರಣಗಳು, 4) ಕಬ್ಬನ್‌ಪಾರ್ಕ್ ಪೊ.ಠಾಣೆಯ-01 ಲ್ಯಾಪ್‌ಟಾಪ್ ಕಳವು ಪ್ರಕರಣ, 5) ನಂದಿನಿಲೇಔಟ್ ಪೊ.ಠಾಣೆಯ-01 ಮೊಬೈಲ್ ಫೋನ್ ಹಾಗೂ 01 ಲ್ಯಾಪ್‌ಟಾಪ್ ಕಳವು ಪ್ರಕರಣ, 6) ತಲಘಟ್ಟಪುರ ಪೊ.ಠಾಣೆಯ-01 ಮೊಬೈಲ್ ಫೋನ್ ಹಾಗೂ 01 ಲ್ಯಾಪ್‌ಟಾಪ್ ಕಳವು ಪ್ರಕರಣ ಸೇರಿದಂತೆ ಒಟ್ಟು 8 ಮೊಬೈಲ್ ಫೋನ್ ಕಳವು ಪ್ರಕರಣಗಳು ಹಾಗೂ 3 ಲ್ಯಾಪ್‌ಟಾಪ್ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 6 ಮೊಬೈಲ್ ಫೋನ್‌ಗಳು ಹಾಗೂ 1 ಲ್ಯಾಪ್‌ಟಾಪ್‌ನ ವಾರಸುದಾರರ ಪತ್ತೆ ಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ದಿನಾಂಕ:20/08/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯದ ಅದೇಶದಂತೆ, ತಮಿಳುನಾಡು ರಾಜ್ಯದ ಪುಝಲ್ ನಲ್ಲಿರುವ ಕೇಂದ್ರ ಕಾರಾಗೃಹ-2 ವಾಪಸ್ ಬಿಡಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನೈರುತ್ಯ ವಿಭಾಗದ ಉಪ ಪೊಲೀಸ್ ಕಮೀಷನರ್ ಅನಿತಾ ಬಿ ಹದ್ದಣ್ಣವರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಗಿರೀಶ್ ಎಸ್.ಬಿ ರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆರ್.ಎಸ್ ಚೌಧರಿ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಬೆಂಗಳೂರಲ್ಲಿ ಮೂವರು ಸರಗಳ್ಳರು ಅರೆಸ್ಟ್, 15.70 ಲಕ್ಷ ಮೌಲ್ಯದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ