ಮಂಡ್ಯ : ವಿಳಾಸ ಕೇಳುವ ನೆಪದಲ್ಲಿ ವೃದ್ದೆಯೊಬ್ಬರ ಕರಿಮಣಿ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಕಳ್ಳ ಪರಾರಿಯಾಗಿರುವ ಘಟನೆ ಸೋಮವಾರ ಜರುಗಿದೆ.
ಮದ್ದೂರು ತಾಲೂಕಿನ ಕೊಪ್ಪ ಪೋಲೀಸ್ ಠಾಣಾ ವ್ಯಾಪ್ತಿಯ ತರೀಕೆರೆ ಗ್ರಾಮದ ವರಲಕ್ಷ್ಮಿ ಎಂಬ ಮಹಿಳೆಯಾಗಿದ್ದಾರೆ.
ಮನೆ ಮುಂದೆ ಕುಳಿತಿದ್ದ ವರಲಕ್ಷ್ಮಿ ಎಂಬ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಸ್ಕೂಟಿ ಗಾಡಿಯಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಕರಿಮಣಿ ಸರದಲ್ಲಿ 1 ತಾಳಿ, 2 ಚಿನ್ನದ ಕಾಸು ಹಾಗೂ 7 ಗ್ರಾ ತೂಕದ ಚಿನ್ನದ ಗುಂಡುಗಳು ಇದ್ದವು. ಕರಿಮಣಿ ಅಪಹರಣದ ವೇಳೆ 3 ಗ್ರಾಂ ತೂಕದ ಚಿನ್ನದ ಗುಂಡುಗಳನ್ನು ಮಾತ್ರ ಅಪಹರಿಸಲಾಗಿದೆ.
ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಎಎಸ್ಪಿ ಗಂಗಾಧರ ಸ್ವಾಮಿ, ಮದ್ದೂರು ಗ್ರಾಮಾಂತರ ಇನ್ಸ್ಪೆಕ್ಟರ್ ವೆಂಕಟೇಗೌಡ, ಕೊಪ್ಪ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಿಳೆಗೆ ಸಾಂತ್ವನ ಹೇಳಿದರು.
ಗ್ರಾಮಾಂತರ ಪ್ರದೇಶದ ಮಹಿಳೆಯರು ಜಮೀನುಗಳ ಕಡೆ ಹಾಗೂ ಒಬ್ಬಂಟಿಗಳಾಗಿ ಹೋಗುವಾಗ ಚಿನ್ನಾಭರಣಗಳ ಮೇಲೆ ಎಚ್ಚರಿಕೆಯಿಂದ ಇರುವಂತೆ ಎಎಸ್ಪಿ ಗಂಗಾಧರ ಸ್ವಾಮಿ ಅವರು ಮನವಿ ಮಾಡಿದರು.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
KRS ದೀಪಾಲಂಕಾರ ಉದ್ಘಾಟಿಸಿದ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ
ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ