ಧಾರವಾಡ: ಜಿಲ್ಲೆಯ ನಾಗಲಾವಿಯ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಅಕ್ಟೋಬರ್ 3 ರಿಂದ 5, 2025ರವರೆಗೆ ನಡೆಯಲಿದೆ, ಭಕ್ತಾದಿಗಳ ಅನುಕೂಲಕ್ಕಾಗಿ ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ ಈ ಕೆಳಗಿನ ರೈಲುಗಳಿಗೆ ಎರಡು ನಿಮಿಷಗಳ ತಾತ್ಕಾಲಿಕ ನಿಲುಗಡೆಗಳನ್ನು ಒದಗಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
1. ರೈಲು ಸಂಖ್ಯೆ 17332 ಎಸ್ಎಸ್ಎಸ್ ಹುಬ್ಬಳ್ಳಿ-ಮಿರಜ್ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಿಗ್ಗೆ 11:33ಕ್ಕೆ ಆಗಮಿಸಿ, 11:35ಕ್ಕೆ ಹೊರಡಲಿದೆ.
2. ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 7:58ಕ್ಕೆ ಬಂದು, 08:00ಕ್ಕೆ ಹೊರಡಲಿದೆ.
3. ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 6:33ಕ್ಕೆ ಆಗಮಿಸಿ, 06:35ಕ್ಕೆ ಹೊರಡಲಿದೆ.
4. ರೈಲು ಸಂಖ್ಯೆ 17331 ಮಿರಜ್-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಮಧ್ಯಾಹ್ನ 12:25ಕ್ಕೆ ಆಗಮಿಸಿ, 12:27ಕ್ಕೆ ಹೊರಡಲಿದೆ.
ಈ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ ಪ್ರಾರಂಭಿಸುವ ಪ್ರಯಾಣದಿಂದ (ಅಕ್ಟೋಬರ್ 3 ರಿಂದ 5, 2025 ರವರೆಗೆ) ಈ ತಾತ್ಕಾಲಿಕ ನಿಲುಗಡೆಯು ಜಾರಿಯಲ್ಲಿರುತ್ತದೆ.
ಮದ್ದೂರು ಪಟ್ಟಣದ 100 ಅಡಿ ರಸ್ತೆಗೆ 175 ಕೋಟಿ ರೂ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್
ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ