ಮೈಸೂರು: ಮೈಸೂರಿನ ನೈರುತ್ಯ ರೈಲ್ವೆಯ ಈ ರೈಲುಗಳ ರದ್ದತಿ, ಭಾಗಶಃ ರದ್ದತಿ, ನಿಯಂತ್ರಣ ಹಾಗೂ ಮರುನಿಗಡಿಪಡಿಸಲಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ (ವಿಜೆಎನ್ಎಲ್) ವತಿಯಿಂದ ಹಬ್ಬನಘಟ್ಟ – ಅರಸೀಕೆರೆ ಸೆಕ್ಷನ್ ನಡುವೆ ದಿನಾಂಕ 30.06.2025 (ಸೋಮವಾರ) ದಂದು ನಡೆಯಲಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ, ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ, ಭಾಗಶಃ ರದ್ದುಪಡಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರುನಿಗದಿ ಮಾಡಲಾಗಿದೆ:
ರದ್ದುಪಡಿಸಲಾದ ರೈಲುಗಳು:
ರೈಲು ಸಂ. 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.
ರೈಲು ಸಂ. 16206 ಮೈಸೂರು – ತಾಳಗುಪ್ಪ ಎಕ್ಸಪ್ರೆಸ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.
ರೈಲು ಸಂ. 16205 ತಾಳಗುಪ್ಪ – ಮೈಸೂರು ಎಕ್ಸಪ್ರೆಸ್, ದಿನಾಂಕ 30.06.2025ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.
ಭಾಗಶಃ ರದ್ದುಪಡಿಸಲಾದ ರೈಲು:
ರೈಲು ಸಂ. 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸಪ್ರೆಸ್, ದಿನಾಂಕ 30.06.2025 ರ ಪ್ರಯಾಣವನ್ನು ಮೈಸೂರು – ಅರಸೀಕೆರೆ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗಿದ್ದು, ಈ ರೈಲು ಅರಸೀಕೆರೆ ಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.
ನಿಯಂತ್ರಿಸಲಾದ ರೈಲು:
ರೈಲು ಸಂ. 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣದಲ್ಲಿ 60 ನಿಮಿಷಗಳವರೆಗೆ ಮಾರ್ಗ ಮಧ್ಯೆ ನಿಯಂತ್ರಿಸಲಾಗುವುದು.
ಮರುನಿಗದಿ (ರಿಶೆಡ್ಯೂಲ್) ಮಾಡಲಾದ ರೈಲುಗಳು:
ರೈಲು ಸಂ. 56265 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣವನ್ನು ಅರಸೀಕೆರೆ ನಿಂದ 60 ನಿಮಿಷಗಳವರೆಗೆ ಮರುನಿಗದಿ ಮಾಡಲಾಗಿದೆ.
ರೈಲು ಸಂ. 06269 ಮೈಸೂರು – ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ, ದಿನಾಂಕ 30.06.2025ರ ಪ್ರಯಾಣವನ್ನು ಮೈಸೂರು ನಿಂದ 60 ನಿಮಿಷಗಳವರೆಗೆ ಮರುನಿಗದಿಪಡಿಸಿಲಾಗಿದೆ.
ಮೈಸೂರಿನ ನೈರುತ್ಯ ರೈಲ್ವೆಯಿಂದ ಅಕ್ರಮವಾಗಿ ರೈಲಿನಲ್ಲಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ