ಮೈಸೂರು: ಉಕ್ಕಡಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯಾ ಹಬ್ಬದ ಪ್ರಯುಕ್ತ ಯಾತ್ರಿಕರ ಸುಗಮ ಪ್ರಯಾಣಕ್ಕಾಗಿ, ಕೆಳಕಂಡ ರೈಲುಗಳಿಗೆ ಪಾಂಡವಪುರ ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ನೀಡಲು ತೀರ್ಮಾನಿಸಲಾಗಿದೆ. ಈ ತಾತ್ಕಾಲಿಕ ನಿಲುಗಡೆ ಜುಲೈ 24, 2025 ರಂದು ಒಂದು ದಿನ ಜಾರಿಗೆ ಇರಲಿದೆ.
ಪಾಂಡವಪುರದಲ್ಲಿ ತಾತ್ಕಾಲಿಕ ನಿಲುಗಡೆ ನೀಡುವ ರೈಲುಗಳ ವಿವರಗಳು ಇಂತಿವೆ:
ರೈಲು ಸಂಖ್ಯೆ 12613 ಮೈಸೂರು–ಕೆಎಸ್‌ಆರ್ ಬೆಂಗಳೂರು ಒಡೆಯರ್ ಎಕ್ಸ್‌ಪ್ರೆಸ್, ಬೆಳಿಗ್ಗೆ 11:48 ಕ್ಕೆ ಆಗಮಿಸಿ 11:49 ಕ್ಕೆ ನಿರ್ಗಮಿಸುತ್ತದೆ
ರೈಲು ಸಂಖ್ಯೆ 20659 ಮೈಸೂರು–ಕೆಎಸ್‌ಆರ್ ಬೆಂಗಳೂರು ರಾಜ್ಯರಾಣಿ ಎಕ್ಸ್‌ಪ್ರೆಸ್, ಮಧ್ಯಾಹ್ನ 15:08 ಕ್ಕೆ ಆಗಮಿಸಿ 15:09 ಕ್ಕೆ ನಿರ್ಗಮಿಸುತ್ತದೆ
ರೈಲು ಸಂಖ್ಯೆ 16232 ಮೈಸೂರು–ಕಡಲೂರ ಪೋರ್ಟ್ ಎಕ್ಸ್‌ಪ್ರೆಸ್, ಸಂಜೆ 16:32 ಕ್ಕೆ ಆಗಮಿಸಿ 16:33 ಕ್ಕೆ ನಿರ್ಗಮಿಸುತ್ತದೆ
ರೈಲು ಸಂಖ್ಯೆ 20660 ಕೆಎಸ್‌ಆರ್ ಬೆಂಗಳೂರು–ಮೈಸೂರು ರಾಜ್ಯರಾಣಿ ಎಕ್ಸ್‌ಪ್ರೆಸ್, ಮಧ್ಯಾಹ್ನ 13:20 ಕ್ಕೆ ಆಗಮಿಸಿ 13:21 ಕ್ಕೆ ನಿರ್ಗಮಿಸುತ್ತದೆ
ರೈಲು ಸಂಖ್ಯೆ 12614 ಕೆಎಸ್‌ಆರ್ ಬೆಂಗಳೂರು–ಮೈಸೂರು ಒಡೆಯರ್ ಎಕ್ಸ್‌ಪ್ರೆಸ್, ಸಂಜೆ 17:14 ಕ್ಕೆ ಆಗಮಿಸಿ 17:15 ಕ್ಕೆ ನಿರ್ಗಮಿಸುತ್ತದೆ.
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ