ಬೆಂಗಳೂರು: ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಅದರೊಟ್ಟಿಗೆ ಖಾಲಿಯಾಗಿರುವಂತ ಗ್ರಾಮ ಪಂಚಾಯ್ತಿ ಸ್ಥಾನಗಳಿಗೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾದ್ರೇ ಗ್ರಾಮ ಪಂಚಾಯ್ತಿ ಸಾರ್ವತ್ರಿಕ ಚುನಾವಣೆಗೆ ನಾಮ ಪತ್ರದೊಂದಿಗೆ ಸಲ್ಲಿಸಬೇಕಾದಂತ ಅಗತ್ಯ ದಾಖಲೆಗಳು ಯಾವುವು ಎನ್ನುವ ಬಗ್ಗೆ ಮುಂದಿವೆ ಓದಿ.
ಸಾಮಾನ್ಯ ಕ್ಷೇತ್ರಕ್ಕೆ
1. ಉಮೇದುವಾರನಿಗೆ 21 ವರ್ಷ ಮೇಲ್ಪಟ್ಟು ವಯಸ್ಥಾಗಿರಬೇಕು.
2. ನಾಮಪತ್ರ ನಮೂನೆ –5ರಲ್ಲಿ ನೀಡಬೇಕು.
3. ಠೇವಣಿ ಹಣ 200/-ರೂಗಳನ್ನು ನೀಡಿ ಚುನಾವಣಾಧಿಕಾರಿಯಿಂದ ರಶೀದಿ ಪಡೆಯುವುದು, ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರೆ ಠೇವಣಿ ಹಣ 100/- ರೂಗಳನ್ನು ನೀಡುವುದು.
4. ಇಸ್ತಿ ಬಿವಧಣಿ ಘೋಷಣಾ ಪತ್ರ ವನ್ನು 3 ಪ್ರತಿಯಲ್ಲಿ ಲಗತ್ತಿಸುವುದು.
5. ಅಭ್ಯರ್ಥಿಯಿಂದ ಘೋಷಣೆ ಪತ್ರ
6. ಗ್ರಾಮ ಪಂಚಾಯಿತಿಗೆ ಯಾವುದೇ ರೀತಿಯ ಬಾಕಿ ಇಲ್ಲದಿರುವ ಬಗ್ಗೆ ‘ಬೇ-ಬಾಕಿಪತ್ರ’
ಅನುಸೂಚಿತ ಜಾತಿ/ಅ.ಪಂಗಡ ಮೀಸಲು ಕ್ಷೇತ್ರಕ್ಕೆ
1. ಉಮೇದುವಾರನಿಗೆ 21 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು.
2. ತಹಶಿಲ್ದಾರವರಿಂದ ಜಾತಿ ಪ್ರಮಾಣ ಪತ್ರ ಪಡೆದು ಮೂಲ ಪ್ರತಿ ಲಗತ್ತಿಸುವುದು.
3. ನಾಮಪತ್ರ ನಮೂನೆ –5ರಲ್ಲಿ ನೀಡಬೇಕು.
4. ಠೇವಣಿ ಹಣ 100/-ರೂಗಳನ್ನು ನೀಡಿ ಚುನಾವಣಾಧಿಕಾರಿಯಿಂದ ರಶೀದಿ ಪಡೆಯುವುದು.
5. ಆಸ್ತಿ ಬಿವರಣಿ ಘೋಷಣಾ ಪತ್ರ ವನ್ನು 3 ಪ್ರತಿಯಲ್ಲಿ ಲಗತ್ತಿಸುವುದು.
6, ಅಭ್ಯರ್ಥಿಯಿಂದ ಘೋಷಣೆ ಪತ್ರ
7. ಗ್ರಾಮ ಪಂಚಾಯಿತಿಗೆ ಯಾವುದೇ ರೀಶಿಯ ಬಾಕಿ ಇಲ್ಲದಿರುವ ಬಗ್ಗೆ “ಬೇ-ಬಾಹಿಪಾ”.
ಹಿಂದುಳಿದ ವರ್ಗ ಅ/ಲ ಮೀಸಲು ಕ್ಷೇತ್ರಕ್ಕೆ
1. ಉಮೇದುವಾರನಿಗೆ 21 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು.
2. ತಹಶಿಲ್ದಾರ್ ರವರಿಂದ ಜಾತಿ ಬಿ.ಸಿ.ಎಂ.-A/ ಟಿ.ಸಿ.ಎಂ.–B ಪ್ರಮಾಣ ಪತ್ರ ಪಡೆದು ಮೂಲ ಪ್ರತಿ ಲಗತ್ತಿಸುವುದು.
3. ನಾಮಪತ್ರ ನಮೂನೆ -5ರಲ್ಲಿ ನೀಡಬೇಕು.
4. ಠೇವಣಿ ಹಣ 100/-ರೂಗಳನ್ನು ನೀಡಿ ಚುನಾವಣಾಧಿಕಾರಿಯಿಂದ ರಶೀದಿ ಪಡೆಯುವುದು.
5. ಆಸ್ತಿ ವಿವರಣೆ ಘೋಷಣಾ ಪತ್ರ ವನ್ನು 3 ಪ್ರತಿಯಲ್ಲಿ ಲಗತ್ತಿಸುವುದು.
6. ಅಭ್ಯರ್ಥಿಯಿಂದ ಘೋಷಣೆ ಪತ್ರ
7. ಗ್ರಾಮ ಪಂಚಾಯಿತಿಗೆ ಯಾವುದೇ ರೀತಿಯ ಬಾಕಿ ಇಲ್ಲದಿರುವ ಬಗ್ಗೆ “ಬೇ-ಬಾಕಿಪತ್ರ’.
BREAKING: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ
 
		



 




