ಪ್ಯಾರೀಸ್: ಇಂದು 10 ಮೀಟರ್ ಮಹಿಳೆಯರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕದ ಬೇಟೆ ಒಲಂಪಿಕ್ಸ್ ನಲ್ಲಿ ಆರಂಭಗೊಂಡಂತೆ ಆಗಿದೆ. ಹಾಗಾದ್ರೇ ಕಳೆದ 5 ಆವೃತ್ತಿಗಳಲ್ಲಿ ಒಲಂಪಿಕ್ಸ್ ನಲ್ಲಿ ಪದಕ ಗೆದ್ದಂತ ಭಾರತದ ಮೊದಲ ಪದಕ ವಿಜೇತರ ಯಾರು ಅಂತ ಮುಂದೆ ಓದಿ.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಮನು ಭಾಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾನುವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು.
ಪ್ರಧಾನಿ ಮೋದಿ ಅವರ ಗೆಲುವನ್ನು “ನಂಬಲಾಗದ ಸಾಧನೆ” ಎಂದು ಕರೆದರು. ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ನಲ್ಲಿ, ಪ್ರಧಾನಿ ಮೋದಿ, “ಐತಿಹಾಸಿಕ ಪದಕ! 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು ಭಾಕರ್ಗೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಅಭಿನಂದನೆಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದಿದ್ದಾರೆ.
ಇವರೇ ನೋಡಿ 2008ರಿಂದ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಪದಕ
2008ರಲ್ಲಿ ಬೀಜಿಂಗ್ ನಲ್ಲಿ ನಡೆದಂತ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತದ ಅಭಿನವ್ ಬಿಂದ್ರ ಅವರು ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು. 2012ರಲ್ಲಿ ಲಂಡನ್ ನಲ್ಲಿ ನಡೆದಂತ ಒಲಂಪಿಕ್ಸ್ ನಲ್ಲಿ ಗಗನ್ ನಾರಂಗ್ ಅವರು ಮೊದಲ ಕಂಚಿನ ಪದಕವನ್ನು ಗೆದ್ದಿದ್ದರು.
ಇನ್ನೂ 2016ರಲ್ಲಿ ರಿಯೋದಲ್ಲಿ ನಡೆದಂತ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಸಾಕ್ಷಿ ಮಲ್ಲಿಕ್ ಅವರು ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದರು. 2020ರಲ್ಲಿ ಟೋಕಿಯೋದಲ್ಲಿ ನಡೆದಂತ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಮೀರಾಭಾಯಿ ಚನು ಅವರು ಬೆಳ್ಳಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.
ಇದೀಗ 2024ರಲ್ಲಿ ಪ್ಯಾರೀಸ್ ನಲ್ಲಿ ನಡೆಯುತ್ತಿರುವಂತ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಮನು ಭಾಕರ್ ಅವರು ಕಂಚಿನ ಪದಕವನ್ನು ಮೊದಲಿಗೆ ಗೆದ್ದ ಭಾರತೀಯ ಕ್ರೀಡಾಪಟುವಾಗಿದ್ದಾರೆ.
🇮🇳🔥 𝗜𝗻𝗱𝗶𝗮'𝘀 𝗵𝗶𝘀𝘁𝗼𝗿𝗶𝗰 𝗳𝗶𝗿𝘀𝘁𝘀! A historic achievement for Manu Bhaker as she brings home India's first medal at #Paris2024.
🧐 Here's a look at India's first medallists over the years in the Olympics.
👉 𝗙𝗼𝗹𝗹𝗼𝘄 @sportwalkmedia 𝗳𝗼𝗿 𝗲𝘅𝘁𝗲𝗻𝘀𝗶𝘃𝗲… pic.twitter.com/m0GHyPzNeb
— India at Paris 2024 Olympics (@sportwalkmedia) July 28, 2024
ITR Filling: ಜುಲೈ 31 ರೊಳಗೆ ತೆರಿಗೆ ಆಡಳಿತ ಬದಲಾಗಬಹುದೇ? ಆದಾಯ ತೆರಿಗೆ ಇಲಾಖೆ ನಿಯಮಗಳು ಏನು ಹೇಳುತ್ತವೆ?
ಪ್ರಯಾಣಿಕರ ಗಮನಕ್ಕೆ: ಜು.29ರ ನಾಳೆಯಿಂದ ಜು.4ರವರೆಗೆ ಈ ರೈಲುಗಳ ಸಂಚಾರ ರದ್ದು | Train Cancelled