ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತಲೆ ಕೂದಲಿನ ಸಮಸ್ಯೆ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ. ಗಂಡಸರಿಗೂ ತಲೆ ಕೂದಲಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಅಂದರೆ ಕೂದಲು ಉದುರುವುದು, ತಲೆಯಲ್ಲಿ ಹೊಟ್ಟು ತುರಿಕೆ, ಕೂದಲು ತುಂಡಾಗುವುದು, ಬಿಳಿ ಕೂದಲು ಹೀಗೆ ಅನೇಕ ತೊಂದರೆಗಳು. ಹೊರಗಿನ ಕಾರ್ಬನ್ ಹೊಗೆ, ಗಡಸು ನೀರು, ಅಥವಾ ಅನಿಯಮಿತವಾದ ಜೀವನ ಶೈಲಿ, ಒತ್ತಡದಿಂದ ಈ ತೊಂದರೆಗಳು ಉಂಟಾಗಬಹುದು. ಆದರೆ ಹೆಂಗಸರಷ್ಟು ಗಂಡು ಮಕ್ಕಳು ತಮ್ಮ ತಲೆ ಕೂದಲು ಅಥವಾ ಚರ್ಮದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲ ಗಂಡಸರಿಗೆ ತಮ್ಮ ತಲೆ ಕೂದಲಿನ ಆರೈಕೆ ಮಾಡಿಕೊಳ್ಳುವ ಇಚ್ಛೆ ಇರುತ್ತದೆ. ಅಂತವರಿಗೆ ಕೆಲ ಟಿಪ್ಸ್ ಇಲ್ಲಿವೆ. ನಾವಿಂದು ಹೇಳುವ ತಲೆ ಕೂದಲಿನ ಆರೈಕೆಯ ಆರ್ಯುವೇದ ಟಿಪ್ಸ್ ಹೆಣ್ಣು ಮಕ್ಕಳು ಸೇರಿದಂತೆ ಗಂಡಸರೂ ಫಾಲೋ ಮಾಡಬಹುದು. ಇದರಿಂದ ಯಾವುದೇ ಸೈಡ್ ಎಪೆಕ್ಟ್ ಇಲ್ಲ. ಒಮ್ಮೆ ನೀವೂ ಟ್ರೈ ಮಾಡಿ ನೋಡಿ.
ನಾಲ್ಕು ಚಮಚ ಮೆಂತೆ ಕಾಳುಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ತೀರಾ ನುಣ್ಣಗೆ ಬೇಡ. ತರಿತರಿಯಾಗಿ ರುಬ್ಬಿಕೊಂಡು ರಾತ್ರಿಯಿಡೀ ನೀರನಲ್ಲಿ ನೆನಸಿಡಿ. ಇದಕ್ಕೆ ಬೆಳಗ್ಗೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಕೂದಲಿನ ಚರ್ಮಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತಲೆ ತೊಳಿಯಿರಿ.
ಆರ್ಯುವೇದ ಶಾಪ್‌ನಲ್ಲಿ ಸಿಗುವ ತ್ರಿಫಲ ಚೂರ್ಣವನ್ನು ಬಿಸಿ ನೀರಿಗೆ ಹಾಕಿ ಕುದಿಸಿ ಆರದಿ ಮೇಲೆ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಲೆ ಸ್ನಾನ ಮಾಡಿ.
ಮೆಹೆಂದಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ, ಇದಕ್ಕೆ ಹಳೆಯ ಹುಳಿ ಮೊಸರನ್ನು ಸೇರಿಸಿ ಸುಮಾರು ಅರ್ಧ ದಿನ ಇದನ್ನು ನೆನೆಯಲು ಬಿಡಿ. ಇದನ್ನು ತಲೆ ತುಂಬಾ ಹಚ್ಚಿಕೊಳ್ಳಿ. ಎರಡು ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಮೆಹೆಂದಿ ಎಲೆಗಳು ಲಭ್ಯವಿಲ್ಲದಿದ್ದಾಗ ರೆಡಿಮೇಡ್ ಮೆಹಂದಿ ಪುಡಿಯನ್ನು ಸಹ ಬಳಸಬಹುದು.
ದಾಸವಾಳ ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ಇದಕ್ಕೆ ಅಲೊವೆರಾ ಅಂದರೆ ಲೋಳೆರಸ ಬಿಳಿ ತಿರುಳನ್ನು ಸೇರಿಸಿ. ಇವೆರಡನ್ನೂ ಮಿಕ್ಸಿ ಮಾಡಿಕೊಳ್ಳಿ. ಇದನ್ನು ತಲೆ ಕೂದಲಿಗೆ ಪ್ಯಾಕ್ ರೀತಿ ಹಚ್ಚಿಕೊಂಡು ಒಂದು ಗಂಟೆಯ ನಂತರ ತೊಳೆಯಿರಿ.
ಈ ಮೇಲಿನ ಆರ್ಯುವೇದ ಹಾಗು ಮನೆ ಮದ್ದನ್ನು ಬಳಸಿದರೆ ನಿಮ್ಮ ತಲೆ ಕೂದಲಿನ ಎಲ್ಲಾ ಸಮಸ್ಯೆಗಳು ಕ್ರಮೇಣವಾಗಿ ನಿವಾರಣೆಯಾಗುತ್ತದೆ. ಈ ನೈಸರ್ಗಿಕ ಹೇರ್ ಪ್ಯಾಕ್‌ಗಳು ಶೀಘ್ರವೇ ಫಲಿತಾಂಶ ನೀಡದೇ ಇರಬಹುದು, ಆದರೆ ದೀರ್ಘಕಾಲದ ವರೆಗೆ ನಿಮ್ಮ ಕೂದಲಿನ ಆರೈಕೆ ಮಾಡುವುದಂತೂ ಖಂಡಿತ. ಇನ್ನು ಅತೀ ಹೆಚ್ಚು ಕೆಮಿಕಲ್ ಇರುವ ಶಾಂಪು ಬಳಕೆ ಮಾಡಿದರೆ ಈ ನೈಸರ್ಗಿಕ ಹೇರ್ ಪ್ಯಾಕ್‌ಗಳು ಅಷ್ಟು ಪರಿಣಾಮ ಬೀರದೇ ಇರಬಹುದು. ಅತೀ ಹೆಚ್ಚು ಬಿಸಿ ನೀರಿನ ಸ್ನಾನ ಬೇಡ. ಕೆಲ ಆರ್ಯುವೇದ ಶಾಂಪುಗಳನ್ನು ಬಳಸಿ. ಇಲ್ಲದಿದ್ದರೆ ಕಡಲೆ ಹಿಟ್ಟು, ಸೀಗೆ ಪುಡಿ ಇಂತ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಲೆ ಸ್ನಾನ ಮಾಡಿ