ಭೂಲೋಕದ ಪ್ರಾಣಿ ಹಾಗೂ ಪಕ್ಷಿಗಳು ಹೆಚ್ಚಾಗಿ ದೇವರ ವಾಹನವೆಂದು ಪರಿಗಣಿಸಿ ದೇವರ ಅಂಶ ಅಥವಾ ಅನುಗ್ರಹ ಇದೆ ಎಂದು ನಾವು ಪೂಜಿಸುತ್ತೇವೆ. ಆದರೆ “ಬೆಕ್ಕನ್ನು’ ಅಪಶಕುನ ಎನ್ನುತ್ತಾರೆ. ಬೆಕ್ಕಿಗೆ ವಿಶೇಷ ಮನ್ನಣೆ ಕೊಡದಿರಲು ಕಾರಣವಿದೆ. ಪುರಾಣ ಕಥೆ ಪ್ರಕಾರ “ಸಮುದ್ರಮಂಥನ” ದ ಕಾಲಕ್ಕೆ ಹೋದರೆ ಮಂಥನದಲ್ಲಿ ಮೊದಲು ಬಂದ ಕಾರ್ಕೋಟಕ “ವಿಷ” ವನ್ನು ಲೋಕಕಲ್ಯಾಣಾರ್ಥವಾಗಿ ಶಿವನೇ ಸ್ವೀಕರಿಸಿ ನಂಜುಂಡೇಶ್ವರನಾದ. ಮಂಥನ ಮುಂದು ವರೆದಾಗ ಅಶ್ವ, ಗಜ, ಚಂದ್ರ, ಅಪ್ಸರೆಯರು, ಗಂಧರ್ವರು ಬರುತ್ತಿದ್ದಂತೆ ದೇವಿ ಮಹಾಲಕ್ಷ್ಮಿಯ ಜೊತೆ ಅವಳ ಅಕ್ಕ ‘ಅಲಕ್ಷ್ಮಿ’ ರಾಕ್ಷಸರ ಜೊತೆ ಹೊರ ಬಂದಳು ಹಾಗೆ ಬರುವಾಗ ಅಲಕ್ಷ್ಮಿ ಜೊತೆ ‘ಬೆಕ್ಕು’ ಬಂದಿತು. ಲಕ್ಷ್ಮಿ ಜೊತೆ ಬಂದ ಬೆಕ್ಕನ್ನು ಯಾರೂ ವಾಹನ ಮಾಡಿಕೊಳ್ಳಲಿಲ್ಲ ಕೊನೆಗೆ ಅದು ಜೇಷ್ಠಾ ಲಕ್ಷ್ಮಿಯ ವಾಹನವಾಯಿತು. ಅಲ್ಲದೆ ಜೇಷ್ಠಾ ಲಕ್ಷ್ಮಿ ಆಸುರರ ಶಕ್ತಿಯನ್ನು ಆಶ್ರಯಿಸಿದಳು. ತಂಗಿ ಲಕ್ಷ್ಮಿ ವಿಷ್ಣುವಿನ ಆಶ್ರಯ ಪಡೆದು “ಮಹಾಲಕ್ಷ್ಮಿ” ಆಗಿ ಸಂಪತ್ತಿನ ಒಡತಿ ಎಂದು ಪೂಜಿಸಿದರು. ಅಕ್ಕ ಜೇಷ್ಠಾ ಲಕ್ಷ್ಮಿಯನ್ನು ಅಲಕ್ಷಿಸಿದ ಕಾರಣ ಮತ್ತು ಅಲಕ್ಷ್ಮೀಯ ವಾಹನ ‘ಬೆಕ್ಕೇ” ಆದ್ದರಿಂದ ಬೆಕ್ಕನ್ನು ಅಪಶಕುನ ಎಂದು ಪರಿಗಣಿಸಿದರು ಇನ್ನೊಂದು ಕಥೆಯಂತೆ ಬೆಕ್ಕು ಅಶುಭ ಗ್ರಹವಾದ “ರಾಹು’ವಿನ ವಾಹನ ಎಂಬ ನಂಬಿಕೆಯಿಂದ ಬೆಕ್ಕಿನ ಬಗ್ಗೆ ಮೂಡನಂಬಿಕೆ ಬೇರೂರಿತು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಹಾಗಾದರೆ ‘ಪುನುಗು ಬೆಕ್ಕು” ಇದರ ಸುಗಂಧ ಶ್ರೀನಿವಾಸನಿಗೆ ಏಕೆ ಬೇಕು ? ಹುಡುಕ ಹೊರಟರೆ, ಸಮುದ್ರ ಮಥನದಲ್ಲಿ ಲಕ್ಷ್ಮಿ ಜೊತೆಯಲ್ಲಿ ಇವಳ ಅಕ್ಕ ಜೇಷ್ಠಾ ಲಕ್ಷ್ಮಿಯು ಬಂದು ರಾಕ್ಷಸರನ್ನು ಆಶ್ರಯಿಸಿ ತಿರಸ್ಕೃತಳಾದಳು. ನಾರಾಯಣನನ್ನು ಆಶ್ರಯಿಸಿದ ಲಕ್ಷ್ಮಿ ಮಹಾಲಕ್ಷ್ಮಿಯಾಗಿ ಪೂಜಿಸಲ್ಪಟ್ಟಳು. ಇಲ್ಲಿಂದಲೇ ಜೇಷ್ಠಾಲಕ್ಷ್ಮಿಗೆ ಎಲ್ಲರ ತಿರಸ್ಕಾರ, ಅವಮಾನ ಕ್ಕೆ ಗುರಿಯಾದ ದುಃಖದಿಂದ ನಾರಾಯಣನಲ್ಲಿ ಬಂದು ಹೇಳಿದಳು. ಅ ಲಕ್ಷ್ಮಿಯ ನೋವು ಅರ್ಥ ಮಾಡಿಕೊಂಡ ನಾರಾಯಣ ಆಕೆಗೆ ಒಂದು ವರ ಅನುಗ್ರಹಿಸಿದನು. ಯಾರು ನಿನ್ನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೋ ಅಲ್ಲಿ ನನ್ನ ನೆಲೆಯೂ ಇರುತ್ತದೆ. ನಿನ್ನನ್ನೇ ನಂಬಿ ನಡೆವ ಭಕ್ತರ ಜೊತೆ ನಾನಿದ್ದು ಅವರ ಇಷ್ಟಾರ್ಥಗಳನ್ನು ಪೂರೈಸುವೆ ಎಂದು ವರ ಕೊಟ್ಟನು. (ಹೀಗಾಗಿ ಇಂದಿಗೂ ಸಹ ಜೇಷ್ಠಾ ಲಕ್ಷ್ಮಿ ವ್ರತವನ್ನು ಮಾಡಿ ಅವಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ) ವಿಷ್ಣುವಿನ ಕೃಪೆಯಿಂದ ಜೇಷ್ಠಾ ಲಕ್ಷ್ಮಿ ಲಾಭಾ ಮತ್ತು ನಷ್ಟಗಳ ಸಂಕೇತವಾದಳು. ಜೇಷ್ಠಾ ಲಕ್ಷ್ಮಿಯ ವಾಹನ “ಬೆಕ್ಕು” ಸಹ ಅದೃಷ್ಟ ಮತ್ತು ನತದೃಷ್ಟ ಸಂಕೇತವಾಗಿದೆ.
ವಿಷ್ಣು ಅ ಲಕ್ಷ್ಮಿಗೆ ವರ ಕೊಟ್ಟಂತೆ ಅವಳ ವಾಹನ ಬೆಕ್ಕಿಗೂ ಅನುಗ್ರಹಿಸಿದನು. ಅದರಂತೆ ಒಂದು ರಾತ್ರಿ ದೇವಸ್ಥಾನದ ಅರ್ಚಕರ ಕನಸಿನಲ್ಲಿ ಭಗವಂತ ದರ್ಶನ ಕೊಟ್ಟು “ ನಾನು ಪುನುಗು ಬೆಕ್ಕಿನ ತೈಲವನ್ನು ಇಷ್ಟಪಡುತ್ತೇನೆ ಅದು ನನ್ನ ದೇಹಕ್ಕೆ ತಂಪಿನ ಅನುಭವ ಕೊಡುತ್ತದೆ ಮತ್ತು ಅದರ ಸುಗಂಧ ಶುದ್ಧವಾಗಿದ್ದು ನನ್ನ ಮನಸ್ಸಿಗೆ ಸಂತೋಷ ಕೊಡುತ್ತದೆ ಇನ್ನು ಮುಂದೆ ನನ್ನ ಪೂಜೆಯಲ್ಲಿ ಪುನುಗು ಬೆಕ್ಕಿನ ತೈಲ ಲೇಪನವಾಗಲಿ”. ಈ ಕನಸನ್ನು ಅರ್ಚಕರು ದೇವಳದ ಮುಖ್ಯಸ್ಥರಿಗೆ ತಿಳಿಸಿದರು.
ತೈಲದ ಮೂಲವನ್ನು ಹುಡುಕಿ ದಾಗ ಪುನುಗು ಬೆಕ್ಕು(Civet cat) ಎನ್ನುವ ಒಂದು ಅರಣ್ಯ ಜೀವಿ ಯಿಂದ ಸುಗಂಧ ಬರುತ್ತದೆ ಎಂಬುದು ಪತ್ತೆ ಆಯಿತು. ಕೆಲವು ಭಕ್ತರು ಇದು ಬೆಕ್ಕಿನಿಂದ ಬಂದಿರುವುದು ನಿಶಿದ್ಧವಲ್ಲವೇ ಎಂದು ಪ್ರಶ್ನಿಸಿದರು. ಆಗ ವಿಚಾರ ಮಾಡಿದ ತಂತ್ರಿಗಳು- ಶಾಸ್ತ್ರಜ್ಞರು, ಈ ದ್ರವ್ಯವನ್ನು ಆಹಾರಕ್ಕೆ ಬಳಸುವುದಿಲ್ಲ ಇದು ಶುದ್ಧ ಗಂಧದ ತೈಲವಾಗಿ ಸೇವೆಗೆ ಮಾತ್ರ ಬಳಸಲಾಗುತ್ತದೆ ದೇವತೆಗಳಿಗೆ ಯಾವುದು ಅಪೇಕ್ಷೆಯೋ ಅದನ್ನು ಮಾಡುವುದೇ ನಮ್ಮ ಧರ್ಮ ಎಂದರು. ಅಂದಿನಿಂದ ಇಂದಿಗೂ ಸಹ ಶ್ರೀನಿವಾಸನಿಗೆ ಪುನುಗು ಬೆಕ್ಕಿನ ತೈಲ ಸೇವೆ ಮಾಡುತ್ತಾರೆ.
ತೈಲ ಸೇವೆ ಹೇಗೆಂದರೆ ತಿರುಪತಿ ತಿಮ್ಮಪ್ಪನಿಗೆ ಪಂಚಾಮೃತಾಭಿಷೇಕ ಆದಮೇಲೆ ವಸ್ತ್ರ, ಒಡವೆ, ಸರ್ವಾಲಂಕಾರ ಭೂಷಿತನಾಗಿದ್ದರೂ, ತಿಮ್ಮಪ್ಪನಿಗೆ ಅಚ್ಚುಮೆಚ್ಚಿನ ‘ಪುನುಗು’ ಬೆಕ್ಕಿನ ಸುಗಂಧ ತೈಲ ಲೇಪನದ ನಂತರವೇ ಅವನ ಅಲಂಕಾರ ಪೂರ್ಣವಾಗಿ ತೃಪ್ತನಾಗುತ್ತಾನಂತೆ. ಪ್ರತಿ ಶುಕ್ರವಾರ ತಿರುವಾಭರಣ ಅಲಂಕಾರ ನಂತರ ಪುನುಗು ಸುಗಂಧ ದ್ರವ್ಯ ಲೇಪನ ಮಾಡುತ್ತಾರೆ. ಇದು ಪುರಾಣ ಕಾಲ ದಿಂದಲೂ ನಡೆದು ಬಂದಿದೆ. ಪುನುಗು ಬೆಕ್ಕು ಎಂದರೆ, ನಾಯಿ- ಕಾಡು ಬೆಕ್ಕು ವರ್ಗಕ್ಕೆ ಸೇರಿದೆ.
ಇದು ನೈಜವಾಗಿ ಬೆಕ್ಕಿನ ಜಾತಿ ಅಲ್ಲ. ಆದರೆ ಕೊಂಬಿನ ಗುಂಡಿ ಹಾಗೂ ಇದರ ವರ್ತನೆಗಳ ಕಾರಣ “ಬೆಕ್ಕು” ಎಂದು ಕರೆಯುತ್ತಾರೆ. ಈ ಬೆಕ್ಕಿನ ಹಿಂಭಾಗವನ್ನು ಒತ್ತಿದಾಗ ಹಳದಿ ಅಥವಾ ಬೂದು ಬಣ್ಣದ ಜೇನುತುಪ್ಪ ದಂತ ದ್ರವ ವಸರುತ್ತದೆ. ಇದನ್ನು ಸಂಗ್ರಹಿಸಿ ಹಲವು ತಿಂಗಳು ತಂಪಾದ ಸ್ಥಳದಲ್ಲಿಟ್ಟು ಮರುಶೋಧನೆ ಮಾಡಿದ ನಂತರ ಸುಗಂಧವಾಗುತ್ತದೆ. ಈ ದ್ರವವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ( ಸೆಂಟ್) ಹಾಗೂ ಭಕ್ತಿಯ ಸಂಕೇತವಾಗಿ ದೇವಾಲಯಗ ಳಲ್ಲಿ ದೇವರಿಗೆ ಅರ್ಪಿಸಲು ಬಳಸುತ್ತಾರೆ.
ಪುನುಗು ಬೆಕ್ಕು ರಾತ್ರಿ ಇಡೀ ಎಚ್ಚರವಾಗಿರುವ ನಿಶಾಚರ ಪ್ರಾಣಿ. ಇದರಂತೆ ಇರುವ ಇನ್ನೊಂದು ಜಾತಿ ಮರ ಬೆಕ್ಕು ಇದೆ.ಪುನುಗು ಬೆಕ್ಕು ನೋಡಲು ಮುಂಗುಸಿಯಂತೆ. ಇದರ ನಾಭಿಯಿಂದ ದ್ರವ ವಸರುತ್ತದೆ ಆ ದ್ರವವನ್ನು ಪರಿಷ್ಕರಿಸಿ ಶುದ್ಧವಾದ ಮೇಲೆ ಶ್ರೀನಿವಾಸನಿಗೆ ಅರ್ಪಿಸುತ್ತಾರೆ. ಪುನುಗು ರಾತ್ರಿ ಇಡಿ ಎಚ್ಚರವಾಗಿದ್ದು ಸಂಚರಿಸುತ್ತ ಬೇಟೆಯಾಡುತ್ತದೆ. ಇದರ ತೈಲವನ್ನು ಸಂಗ್ರಹಿಸಲು ವಿಶೇಷ ವಾದ ಜಾಗರೂಕತೆ ವಹಿಸುತ್ತಾರೆ. ತೈಲಕ್ಕಾಗಿ ತಿರುಪತಿಯಲ್ಲಿ ಪುನುಗು ಬೆಕ್ಕುಗಳನ್ನು ಸಾಕಿದ್ದಾರೆ.
ಇವುಗಳನ್ನು ವಿಶಾಲವಾದ ಬೋನಿನಲ್ಲಿ ಇಟ್ಟು ಅಲ್ಲಿ ದಪ್ಪನೆಯ ಗಂಧದ ಕೊರಡನ್ನು ಇಟ್ಟಿರುತ್ತಾರೆ. ಬೆಕ್ಕಿಗೆ ಬಹಳ ತಾಪವಾದಾಗ ಅದು ಗಂಧದ ಮರದ ತುಂಡಿಗೆ ತನ್ನ ಮೈಯನ್ನು ಉಜ್ಜಿಕೊಳ್ಳುತ್ತದೆ ಆಗ ಬೆಕ್ಕಿನ ನಾಭಿಯಿಂದ ಹಳದಿ ಬಣ್ಣದ ದ್ರವ ಸ್ರವಿಸುತ್ತದೆ. ಸ್ರವಿಸಿದ ದ್ರವ ಮರಕ್ಕೆ ಅಂಟಿಕೊಳ್ಳುತ್ತದೆ. ಈ ತೈಲ ಎರಡರಿಂದ ಮೂರು ಗ್ರಾಂ ಇರುತ್ತದೆ. ತೈಲವನ್ನು ಗಂಧದ ತುಂಡಿನಿಂದ ಪ್ರತ್ಯೇಕಿಸಿ ಅದನ್ನು ಸಂಸ್ಕರಿಸಿ ವಾರಕ್ಕೊಮ್ಮೆ ನಡೆವ ಅಭಿಷೇಕದ ನಂತರ, ಪಚ್ಚ ಕರ್ಪೂರದಿಂದ ತಿಮ್ಮಪ್ಪನ ಹಣೆಗೆ ಯು ಆಕಾರದಲ್ಲಿ ಬಿಳಿ ನಾಮ ಧಾರಣೆ ಮಾಡುತ್ತಾರೆ. ಇದರ ಮಧ್ಯದಲ್ಲಿ ಕಸ್ತೂರಿ ತಿಲಕವನ್ನು ಇಡುತ್ತಾರೆ. ರೇಷ್ಮೆ ವಸ್ತ್ರ, ಎಲ್ಲಾ ಮುಗಿದು ಕೊನೆಯದಾಗಿ ಪುನುಗು ಬೆಕ್ಕಿನ ತೈಲವನ್ನು ತಿಮ್ಮಪ್ಪನ ಮುಖಕ್ಕೆ ಹಚ್ಚುತ್ತಾರೆ. ಪ್ರಣತಿ ದೀಪದ ಬೆಳಕಿನಲ್ಲಿ ತಿಮ್ಮಪ್ಪನ ಮುಖ ಮಿರಿ ಮಿರಿ ಮಿಂಚುತ್ತದೆ. ಈ ಕ್ರಮ ಸಾವಿರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.
ತಿರುಪತಿಯ ವೆಂಕಟೇಶನ ಗರ್ಭಗುಡಿ ಒಳಗೆ ಕಿಟಕಿಗಳು ಇಲ್ಲ ಏಕೆಂದರೆ ಹೊರಗಿನ ಯಾವುದೇ ವಾಯುಮಾಲಿನ್ಯ ತಿಮ್ಮಪ್ಪನಿಗೆ ಆಗಬಾರದು ಎಂದು ನಿಯಮವನ್ನೇ ಪಾಲಿಸುತ್ತಾರೆ. ಇದರಿಂದ ಗರ್ಭಗುಡಿಯೊಳಗೆ ಉಷ್ಣಾಂಶ ಯಾವಾಗಲೂ ಹೆಚ್ಚಾಗಿರುತ್ತದೆ. ಪುನುಗು ಬೆಕ್ಕಿನ ಸುಗಂಧ ತಂಪನ್ನು ಕೊಡುವ ಗುಣವುಳ್ಳದ್ದು. ಗರ್ಭಗುಡಿ ಯೊಳಗೆ ಯಾವಾಗಲೂ ಧೂಪ ದೀಪಗಳ ಬಳಕೆಯಿಂದ ಉಷ್ಣತೆ ತುಂಬಿರುತ್ತದೆ.
ಈ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಪುನುಗು ಬೆಕ್ಕಿನ ತೈಲ ಬಳಕೆಯಾ ಯಿತು ಇದರ ಸುಗಂಧವೂ ತಿಮ್ಮಪ್ಪನಿಗೆ ಮಾತ್ರವಲ್ಲದೆ ಅಲಂಕಾರದ ಪೂರ್ಣತೆ ಯ ಸಂಕೇತವು ಆಗಿದೆ. ಸುಗಂಧ ದ್ರವ್ಯದ ತೈಲದ ಸಲುವಾಗಿ ಪುನುಗು ಬೆಕ್ಕಿನ ಸಾಗಾಣಿಕೆಗಾಗಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ಒಂದು ಸಾವಿರ ಚಿನ್ನದ ವರಹಗಳನ್ನು ಕೊಟ್ಟಿದ್ದನಂತೆ. ಆಯುರ್ವೇದದ ಔಷಧೀಯಗಳಲ್ಲಿ ಈ ತೈಲವನ್ನು ಬಳಸಲಾಗುತ್ತದೆ.
ಪುನುಗು ಬೆಕ್ಕುಗಳದು ಬಹಳ ನಾಚಿಕೆ ಸ್ವಭಾವ, ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರಾದರೂ ಕಂಡರೆ ಕಣ್ಣಿಗೆ ಕಾಣದಂತೆ ಓಡಿಹೋಗಿ ಸಂಧಿಯಲ್ಲಿ ಮುದುರಿ ಕೂರುತ್ತವೆ. ಮೊದಲು ಕಾಡುಗಳಲ್ಲಿ ಇವು ಕಾಣಿಸುತ್ತಿತ್ತು. ಈಗೆ ಅಪರೂಪವಾಗಿದೆ. ಅದರ ನಾಭಿಯಿಂದ ವಸರುವ ತೈಲದ ಸುಗಂಧದ ಪರಿಮಳ ಸುತ್ತಮುತ್ತ ಹರಡಿ
ಸುತ್ತಮುತ್ತ ಓಡಾಡುವವರ ಮೂಗಿಗೆ ಸುವಾಸನೆ ಬಂದರೆ ಅಲ್ಲಿ ಪುನುಗು ಬೆಕ್ಕು ಇದೆ ಎಂದು ತಿಳಿಯುತ್ತದೆ. ಪುರಾಣ ಕಾಲದಿಂದಲೂ ಭಗವಂತನ ಸೇವೆಗಾಗಿ ಪುನುಗು ಬೆಕ್ಕಿನ ಸುಗಂಧ ತೈಲ ಹಚ್ಚುವ ಪದ್ಧತಿ ರೂಡಿಯಲ್ಲಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ದೇವರಿಗೆ ಯಾವುದು ಇಷ್ಟವೋ ಅದನ್ನು ಭಕ್ತಿ ಭಾವದಿಂದ ಸಮರ್ಪಿಸುವುದು ನಮ್ಮ ಕರ್ತವ್ಯ. ಹೊರಗೆ ಅಪಶಕುನವೆಂದು ತಿಳಿದಿದ್ದೂ ಸಹ, ಭಗವಂತನು ಅದನ್ನು ಸ್ವೀಕರಿಸಿದರೆ ಅದು ಪವಿತ್ರವಾಗುತ್ತದೆ.
ಯತ್ಪ್ರಿಯಂ ತಸ್ಯ ದೇವಸ್ಯ ತತ್ಸರ್ವಂ
ಶೋಭನಂ ಭುವಿ!
ಭಕ್ತ್ಯಾ ಸಮರ್ಪಿತಂ ಯತ್ ತತ್ ಪುಣ್ಯಮೇವ
ನಾ ಸಂಶಯ!!
ಭಗವಂತನಿಗೆ ಯಾವುದು ಪ್ರಿಯವೋ, ಅದು ಈ ಭೂಲೋಕದಲ್ಲಿಯೂ ಶುಭಕರವೇ ಭಕ್ತಿಯಿಂದ ಸಮರ್ಪಿಸಲ್ಪಟ್ಟದೆಲ್ಲಾ ಪುಣ್ಯ. ಇದರಲ್ಲಿ ಸಂಶಯವಿಲ್ಲ.









