ಧಾರವಾಡ: ದೇಶದಲ್ಲಿ ಬ್ರಿಟೀಷರು ಆಳ್ವಿಕೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಇರಲಿಲ್ಲ. ಆದ್ರೇ.. ಈಗ ಸ್ವಾತಂತ್ರ್ಯ ಬಂದ ನಂತ್ರ, ಗಣೇಶೋತ್ಸವ ಆಚರಣೆಗೆ ಪರದಾಡುವಂತೆ ಆಗಿದೆ ಎಂಬುದಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ

ನಗರದಲ್ಲಿ ಇಂದು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿದಂತ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ಸುಪ್ರೀಂ ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆಭಾಗಲೇಬೇಕು. ಆದ್ರೇ.. ಇಂದು ಮುಂದೆ ಸಮಸ್ಯೆಯಾಗಿ ಉಳಿಯಬಾರದು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಉದ್ಯೋಗ ನಿರೀಕ್ಷಿತರೇ ಗಮನಿಸಿ ; ‘ITBP ಕಾನ್ಸ್‌ಟೇಬಲ್‌ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ಮಾಹಿತಿ |ITBP Constable Recruitment

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸೋದಕ್ಕೆ ಕಾಂಗ್ರೆಸ್ ಹಾಗೂ ವಕ್ಫ್ ಬೋರ್ಡ್ ಅಡ್ಡಿಯಾಗಿದೆ. ಸುಪ್ರೀಂ ಕೋರ್ಟ್ ಅನ್ನು ದಾರಿ ತಪ್ಪಿಸೋ ವಾದ ನಡೆದಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್ ಗೆ ಹೋಗಿ ಅಂತ ಹೇಳಿದೆ. ಹೀಗಾಗಿ ಸರ್ಕಾರ ಹೈಕೋರ್ಟ್ ಮೂಲಕ ಗಣೇಶೋತ್ಸವಕ್ಕೆ ಅವಕಾಶ ಕೊಡಿಸೋ ಕೆಲಸ ಮಾಡಬೇಕು ಎಂದರು.

Share.
Exit mobile version