Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Viral : OMG! ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ, ಅಜ್ಜ ಸತ್ತ ನಂತ್ರ ಬೆಳೆಯಿತು ಆತ್ಮೀಯತೆ!

28/06/2025 7:01 PM

‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

28/06/2025 6:56 PM

BREAKING: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

28/06/2025 6:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್
KARNATAKA

‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

By kannadanewsnow0928/06/2025 6:56 PM

ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಶನಿವಾರ ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಯಿತು.

ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್, 8 ಅನುದಾನಿತ, 6 ವಿಟಿಯು ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 9 ಜಿಲ್ಲೆಗಳ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಚಿಂತಾಮಣಿಯ ವಿಟಿಯು ಸಂಯೋಜಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ನೀಡಿದರು. ಸ್ವತಃ ಸಚಿವರು ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ, ಅವರಿಂದ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದರು.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮ ನಡೆದ ಪ್ರತಿಯೊಂದು ಕಾಲೇಜಿಗೂ ತಲಾ ಒಬ್ಬ ಕೆಇಎ ಪ್ರತಿನಿಧಿಯನ್ನು ಹಾಗೂ ಅಗತ್ಯ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಬಹುಸಂಖ್ಯೆಯ-ಸೆಷನ್ ಗಳನ್ನು ನಡೆಸುವ ಮೂಲಕ ಅನುಕೂಲ ಮಾಡಿಕೊಡಲಾಯಿತು.

ಬೆಂಗಳೂರಿನಲ್ಲಿ ಬಿಎಂಎಸ್, ಅಂಬೇಡ್ಕರ್ ಮತ್ತು ಎಸ್.ಕೆ.ಐ.ಟಿ ಕಾಲೇಜುಗಳಲ್ಲಿ ಮಂಥನ ನಡೆಯಿತು. ಬಿಎಂಎಸ್ ಕಾಲೇಜಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರಿಂದ 19 ಕೊಠಡಿಗಳನ್ನು ಬಳಸಿಕೊಂಡು ಬಹುಸಂಖ್ಯೆಯ-ಸೆಷನ್ ಗಳನ್ನು ನಡೆಸಲಾಯಿತು.

ಕೌನ್ಸೆಲಿಂಗ್ ಹೇಗೆ ನಡೆಯುತ್ತದೆ? ಕಾಲೇಜು ಆಯ್ಕೆ ಹೇಗೆ? ಆಪ್ಷನ್ ಎಂಟ್ರಿ ಯಾವ ರೀತಿ ಮಾಡಬೇಕು?- ಇಂತಹ ಪದೇಪದೇ ಕೇಳಿಬರುವ ಪ್ರಶ್ನೆಗಳು ಸೇರಿದಂತೆ ಇಡೀ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ವಿಡಿಯೊ ಪ್ರಾತ್ಯಕ್ಷಿಕೆ ಪ್ರಸ್ತುತಿ ನೆರವಿನಿಂದ ವಿವರಿಸಲಾಯಿತು. ಸೀಟು ಕೊಡಿಸುವುದಾಗಿ ಆಮಿಷವೊಡ್ಡುವವರ ಮೋಸದ ಜಾಲಕ್ಕೆ ಬೀಳದಿರುವಂತೆಯೂ ಜಾಗೃತಿ ಮೂಡಿಸಲಾಯಿತು.

75 ಸಾವಿರಕ್ಕೂ ಹೆಚ್ಚು ಪೋಷಕರು/ ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದ ನೇರ ಉಪಯೋಗ ಪಡೆದಿದ್ದಾರೆ. ಮಂಥನ ಕಾರ್ಯಕ್ರಮದಲ್ಲಿ ಬಳಸಿದ ಎಲ್ಲ ವಿಡಿಯೊಗಳನ್ನು ಕೆಇಎ ವಿಕಸನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್ ಲೋಡ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದರು.

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಹಲವರು ಸಾವು, ಪ್ರವಾಹದಲ್ಲಿ ಕೊಚ್ಚಿಹೋದ ಕುಟುಂಬ

Share. Facebook Twitter LinkedIn WhatsApp Email

Related Posts

BREAKING: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

28/06/2025 6:47 PM1 Min Read

BREAKING: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಬಲಿ: ಜಿಲ್ಲೆಯಲ್ಲಿ 19ಕ್ಕೆ ಏರಿದ ಸಾವಿನ ಸಂಖ್ಯೆ

28/06/2025 6:01 PM1 Min Read

‘ಭಾರತೀಯ ಬ್ರ್ಯಾಂಡ್’ಗಳಲ್ಲಿ 4ನೇ ಸ್ಥಾನ ಉಳಿಸಿಕೊಂಡ ‘ನಂದಿನಿ’ : ವರದಿ

28/06/2025 5:54 PM1 Min Read
Recent News

Viral : OMG! ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ, ಅಜ್ಜ ಸತ್ತ ನಂತ್ರ ಬೆಳೆಯಿತು ಆತ್ಮೀಯತೆ!

28/06/2025 7:01 PM

‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

28/06/2025 6:56 PM

BREAKING: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

28/06/2025 6:47 PM

BREAKING : ‘ISS’ನಲ್ಲಿರುವ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಜೊತೆಗೆ ‘ಪ್ರಧಾನಿ ಮೋದಿ’ ವಿಡಿಯೋ ಕಾನ್ಫರೆನ್ಸಿಂಗ್ ಸಂವಾದ

28/06/2025 6:09 PM
State News
KARNATAKA

‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

By kannadanewsnow0928/06/2025 6:56 PM KARNATAKA 1 Min Read

ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಶನಿವಾರ ರಾಜ್ಯದ ಸರ್ಕಾರಿ…

BREAKING: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

28/06/2025 6:47 PM

BREAKING: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಬಲಿ: ಜಿಲ್ಲೆಯಲ್ಲಿ 19ಕ್ಕೆ ಏರಿದ ಸಾವಿನ ಸಂಖ್ಯೆ

28/06/2025 6:01 PM

‘ಭಾರತೀಯ ಬ್ರ್ಯಾಂಡ್’ಗಳಲ್ಲಿ 4ನೇ ಸ್ಥಾನ ಉಳಿಸಿಕೊಂಡ ‘ನಂದಿನಿ’ : ವರದಿ

28/06/2025 5:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.