ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲೂ ವೈರಲ್ ಆಗಿರುವಂತ ಏನಿಲ್ಲ, ಏನಿಲ್ಲ ಹಾಡು ಸದ್ದು ಮಾಡಿದೆ. ಇದನ್ನು ಸದನದಲ್ಲೇ ಹಾಡಿದಂತ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಸೋಷಿಯಲ್ ಮೀಡಿಯದಲ್ಲಿ ಏನಿಲ್ಲ ಹಾಡು ಟ್ರೆಂಡ್ ಆಗಿದೆ. ಹಾಗೆ ಇಲ್ಲಿ ನೀರಿಲ್ಲ ನೀರಿಲ್ಲ ಎನ್ನುವಂತೆ ಆಗಿದೆ ಎಂಬುದಾಗಿ ರಾಜ್ಯ ಸರ್ಕಾರವನ್ನು ಕಾಲು ಎಳೆದರು.
ಇಂದು ವಿಧಾನಸಭೆಯಲ್ಲಿ ಮಾತನಾಡಿದಂತ ಅವರು, ನಾನು ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ. ಸರ್ಕಾರ ಎಲ್ಲೋ ಒಂದು ಕಡೆ ಕೆಟ್ಟೋಗಿರೋ ಬಸ್ ತರ ನಿಂತು ಹೋಗಿದೆ. ಇದು ಮುಂದೆ ಹೋಗುತ್ತೋ ಇಲ್ವೋ ಗೊತ್ತಿಲ್ಲ ಎಂದರು.
ನೀವು ಸೋಷಿಯಲ್ ಮೀಡಿಯಾದಲ್ಲಿ ನೋಡಬೇಕು. ಏನಿಲ್ಲ ಏನಿಲ್ಲ ಅಂತ ಹಾಡೊಂದು ಟ್ರೆಂಡ್ ಆಗಿದೆ. ಇಲ್ಲಿ ನೀರಿಲ್ಲ. ನೀರಿಲ್ಲ. ಮೇವಿಲ್ಲ. ಅಕ್ಕಿಯಿಲ್ಲ. ಕೊನೆಗೆ ಏನು ಹಾಕಿದ್ದಾರೆ ಅಂದರೇ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಈ ಸರ್ಕಾರ ಸತ್ತೋಗಿದೆ ಅಂತ ಹಾಡಿನಲ್ಲಿ ಹಾಕಿದ್ದಾರೆ. ಅದನ್ನು ನಾನು ಇಲ್ಲಿ ಹೇಳುತ್ತಿದ್ದೇನೆ ಎಂಬುದಾಗಿ ಹೇಳಿದರು.
ರಾಜ್ಯದಲ್ಲಿ ಕುಡಿಯುವ ನೀರಿಗೆ ಆಹಾಹಾಕಾರ ಇದೆ. ಕಾನೂನು ಸುವ್ಯವಸ್ಥೆ ದಾರಿ ತಪ್ಪಿದೆ. ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಲಾಗಿದೆ. ಇದು ತಪ್ಪಬೇಕು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಆಗಬೇಕು ಎಂಬುದಾಗಿ ತಿಳಿಸಿದರು.
1056 ಖಾಲಿ ಹುದ್ದೆಗಳ ಭರ್ತಿಗೆ ‘UPSC’ ಅಧಿಸೂಚನೆ ಬಿಡುಗಡೆ : ಅರ್ಜಿ ಸಲ್ಲಿಕೆಗೆ ‘ಡೈರೆಕ್ಟ್ ಲಿಂಕ್’ ಇಲ್ಲಿದೆ