ಬೆಂಗಳೂರು: ಬಜೆಟ್‌ನಲ್ಲಿ ಏನಿಲ್ಲವೆಂದು ಘೋಷಣೆ ಕೂಗುವ ಬಿಜೆಪಿಗರ ತಲೆಯಲ್ಲಿ ಏನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು 3,71,383 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. ಕಳೆದ ವರ್ಷ 3,27,747 ಕೋಟಿ ಬಜೆಟ್ ಗಾತ್ರವಾಗಿತ್ತು. ಈ ವರ್ಷದ ಬಜೆಟ್ ಕಳೆದ ಜುಲೈಗೆ ಮಂಡನೆ ಮಾಡಿದ ಬಜೆಟ್ ಗಾತ್ರಕ್ಕಿಂತ 46,636 ಕೋಟಿ ಹೆಚ್ಚಳವಾಗಿದ್ದು ಶೇ 13 ರಷ್ಟು ಬೆಳವಣಿಗೆ ಆಗಿದೆ ಎಂದರು. ಬಜೆಟ್ ಮಂಡನೆ ಮಾಡುವಾಗ ವಿರೋಧ ಪಕ್ಷ ಬಹಿಷ್ಕಾರ ಮಾಡಿದ ಇತಿಹಾಸ ಇಲ್ಲ. ನಾನು ಬಜೆಟ್ ಮಂಡನೆ ಮಾಡುವಾಗ ಸುನೀಲ್ ಕುಮಾರ್ ಏನಿಲ್ಲ ಏನಿಲ್ಲ ಎಂದು ಕೂಗುತ್ತಿದ್ದರು. ಆದರೆ, ಅವರ ತಲೆಯಲ್ಲಿ ಏನಿಲ್ಲ. ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅವರಿಗೆ ರಾಜಕೀಯ ಮಂಜು ಆವರಿಸಿದೆ. ಕಾಮಾಲೆ ರೋಗದವರೆಗೆ ಕಂಡದೆಲ್ಲಾ ಹಳದಿ ಅಂತ ಹೇಳಿದರು.
ನಿಮ್ಗೆ ‘300 ಯೂನಿಟ್ ಉಚಿತ ವಿದ್ಯುತ್’ ಬೇಕಾ.? ಮನೆಯಲ್ಲೇ ಕುಳಿತು ಜಸ್ಟ್ 5 ನಿಮಿಷದಲ್ಲಿ ಅರ್ಜಿ ಸಲ್ಲಿಸಿ
ರಾಜ್ಯದ ಜನರೇ ಗಮನಿಸಿ: ಏ.1 ರಿಂದ ಹೊಸ APL, BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ
BREAKING : ರಷ್ಯಾ ಅಧ್ಯಕ್ಷ ಪುಟಿನ್ ಟೀಕಾಕಾರ, ವಿಪಕ್ಷ ನಾಯಕ ‘ಅಲೆಕ್ಸಿ ನವಲ್ನಿ’ ಜೈಲಿನಲ್ಲೇ ಸಾವು