ಬೆಂಗಳೂರು : ರಾಜ್ಯದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇಲ್ಲ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸ್ಪಷ್ಟಪಡಿಸಿದೆ.
ಡೆಂಗ್ಯೂ ರೋಗಿಗಳಿಗೆ ನೀಡಲಾಗುವ ಪ್ಯಾರಸಿಟಮಾಲ್ ಮಾತ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆ ಉಂಟಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಕೆಎಸ್ಎಂಎಸ್ಸಿಎಲ್ (KSMSCL ) ರಾಜ್ಯದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇಲ್ಲ ಎಂದು ಹೇಳಿದೆ.
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ಯಾರಸಿಟಮಾಲ್ 650 ಎಂಜಿಗೆ ವಾರ್ಷಿಕ ಬೇಡಿಕೆ ಪ್ರಮಾಣ 8,72,20,40 ಮಾತ್ರೆಗಳಿಗೆ ಬಂದಿದ್ದು, 8.27 ಕೋಟಿ ಮೌಲ್ಯದ ಪ್ಯಾರಸಿಟಮಾಲ್ 650MG ಖರೀದಿಸಲಾಗಿದೆ. ಪ್ರಸ್ತುತ ಈ ಔಷಧವು ಎಲ್ಲಾ ಉಗ್ರಾಣಗಳಿಗೆ ಸರಬರಾಜು ಆಗಿದೆ. 2024 ಜು.4ರ ವೇಳೆಗೆ 3.7 ಕೋಟಿ ಮೌಲ್ಯದ ಮಾತ್ರೆಗಳು ಲಭ್ಯತೆ ಇದೆ. ಸದ್ಯ ಆರೋಗ್ಯ ಸಂಸ್ಥೆಗಳಲ್ಲಿ 3.18 ಕೋಟಿ ಮೌಲ್ಯದ ಮಾತ್ರೆಗಳು ಲಭ್ಯವಿದೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ತಿಳಿಸಿದೆ.