ಬೆಂಗಳೂರು: ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಅದೆಲ್ಲವನ್ನು ಕಾಲವೇ ಉತ್ತರಿಸಲಿದೆ. ನಾನು ಈಗ ಪ್ರಜ್ವಲ್, ಸೂರಜ್ ಬಗ್ಗೆ ಯಾವುದೇ ಮಾತನಾಡೋದಿಲ್ಲ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಜ್ವಲ್, ಸೂರಜ್ ಪ್ರಕರಣ ಕೋರ್ಟ್ ನಲ್ಲಿ ಇದೆ. ಹೀಗಾಗಿ ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನನಗೆ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆ, ಗೌರವವಿದೆ. ಯಾವುದೇ ವಿಷಯ ಇದ್ರೂ ನ್ಯಾಯಾಂಗ, ದೇವರ ಮೇಲೆ ನಂಬಿಕೆಯಿದೆ ಎಂದರು.

ಪ್ರಕರಮ ಕೋರ್ಟ್ ನಲ್ಲಿ ಇರುವಾಗ ನಾನು ಏನೂ ಮಾತನಾಡುವುದಿಲ್ಲ. ಮಾಜಿ ಶಾಸಕ ಪ್ರೀತಂ ಗೌಡ ಷಡ್ಯಂತ್ರದ ಬಗ್ಗೆಯೂ ಮಾತನಾಡಲ್ಲ. ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಎಲ್ಲವನ್ನು ಕಾಲವೇ ಉತ್ತರಿಸಲಿದೆ ಅಂತ ತಿಳಿಸಿದರು.

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಗೊತ್ತಿಲ್ಲ. ಅದೆಲ್ಲ ದೊಡ್ಡವರ ವಿಷಯವಾಗಿದೆ ಎಂದರು.

ಚಂದ್ರಶೇಖರ ಸ್ವಾಮೀಜಿ ಯಾವ ಮಟ್ಟದಲ್ಲಿ ಇದ್ದರು. ಹೆಚ್ ಡಿಡಿ ಬಗ್ಗೆ ಕಳೆದೊಂದು ತಿಂಗಳಿನಿಂದ ಏನು ನಡೆಯುತ್ತಿದೆ. ದೇವೇಗೌಡರ ಬಗ್ಗೆ ಅನುಕಂಪಕ್ಕಾದರೂ ಹೇಳಬಹುದಿತ್ತಲ್ವ ಎಂದು ಪ್ರಶ್ನಿಸಿದರು.

ದೇವೇಗೌಡ ಅವರು ಮಠಕ್ಕೆ ಏನೆಲ್ಲಾ ಮಾಡಿದ್ದಾರೆ. ನಮಗೆ ಬಿಡಿ, ದೇವೇಗೌಡರ ಬಗ್ಗೆ ಆದರೂ ಮಾತಾಡಬೇಕಿತ್ತು. ಮುಖ್ಯಮಂತ್ರಿ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಪಟ್ಟಿದ್ದು. ಸಿಎಂ ವಿಚಾರ ನನಗೆ ಗೊತ್ತಿಲ್ಲ. ಅದು ದೊಡ್ಡವರ ವಿಷಯ. ಸಿಎಂ ಹುದ್ದೆ ನಮ್ಮ ಬಳಿ ಇಲ್ಲ. ಅವರು ಏನು ಬೇಕಾದ್ರೂ ಮಾತಾಡಲಿ ಅಂತ ತಿಳಿಸಿದರು.

‘ರಾಕೇಶ್ ಶೆಟ್ಟಿ’ ವಿರುದ್ಧ ‘ರೌಡಿ ಶೀಟರ್’ ಓಪನ್ ಮಾಡಿ: ‘ಗಿರೀಶ್ ಮಟ್ಟೆಣ್ಣವರ’ ಆಗ್ರಹ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ, ರಾಜೀನಾಮೆ ನೀಡುವವರೆಗೂ ಹೋರಾಟ: ಆರ್‌.ಅಶೋಕ್

Share.
Exit mobile version