ಬೆಂಗಳೂರು: ಹೈಕೋರ್ಟ್ ನಿಂದ ಕನ್ನದ ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡುವಂತೆ ಆದೇಶ ಮಾಡಲಾಗಿತ್ತು. ಈ ನಂತ್ರ ಮಾಲೀಕ ರಾಕೇಶ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಮಾಡುವಂತೆ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ ಆಗ್ರಹಿಸಿದ್ದಾರೆ.

ಇಂದು ಬೆಂಗಳೂರಿನ ಪ್ರೆಸ್ ಕ್ಲಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, Power Tv ಚಾನೆಲ್ ನ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ ರಾಕೇಶ ಶೆಟ್ಟಿ ಎಂಬ ವ್ಯಕ್ತಿ ದೃಶ್ಯ ಮಾಧ್ಯಮ ದುರುಪಯೋಗ ಪಡಿಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಮತ್ತು ಪರವಾನಿಗೆ ಇಲ್ಲದೇ ಒಂದು satellite ಚಾನೆಲ್ ನಡೆಸುತ್ತಿದ್ದ ಕಾರಣ ದಿ : 25-06-2024 ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ Power Tv ಪ್ರಸರವನ್ನು ತಾತ್ಕಾಲಿಕವಾಗಿ ನಿಷೇಧಸಿದೆ ಎಂದರು.

ಪತ್ರಿಕೋದ್ಯಮವನ್ನು ಕೇವಲ ತನ್ನ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡು ಅನೇಕ ಕಾನೂನು ಬಾಹಿರ, ಬ್ಲಾಕ್ ಮೆಲ್, ವಸೂಲಿ ದಂದೆಗೆ ಇಳಿದ ರಾಕೇಶ್ ಶೆಟ್ಟಿಯ ಮೇಲೆ ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಈತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ನಾಗರಿಕ ಸಮಾಜದ ಆಗ್ರಹಿಸಿದರು.

ರಾಕೇಶ್ ಶೆಟ್ಟಿ ಹಿನ್ನಲೆ :

* ಮುಂಬೈ ಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡುವ ಜಾಲದಲ್ಲಿ ತೊಡಗಿದ್ದ ಈತ, ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿ ಆಕೆಯ ಸಂಬಂಧಿಕರು ಈತನನ್ನು ಮುಂಬೈ ಇಂದ ಓಡಿಸಿದರು.
* ಬೆಂಗಳೂರಿನ ರವಿ ಉಪ್ಪಾಳ ಅವರು ಮುಖ್ಯಸ್ಥ ಆಗಿದ್ದ WORK FORCE ಎಂಬ CA ಕಚೇರಿಗೆ ತಾನು ಒಬ್ಬ ಮೇಧಾವಿ CA ಎಂದು ಹೇಳಿ ನಿರ್ದೇಶಕನಾದ ಇವನನ್ನು ಈತನ ಅಸಲಿ ಮುಖ ಗೊತ್ತಾದ ಮೇಲೆ ಹೊರ ಹಾಕುತ್ತಾರೆ.
* ACS-FIN consultancy ಎಂಬ firm ಶುರುಮಾಡಿದ ಈತ ಬಸವನಗುಡಿಯಲ್ಲಿ ತನ್ನದೇ ಮಹಿಳಾ ಸಿಬ್ಬಂದಿಯಿಂದ ಲೈಂಗಿಕ ಶೋಷಣೆ ಮಾಡಿದ ಕಾರಣಕ್ಕೆ ಏಟು ತಿಂದಿದ್ದ.
* ವಾಸ್ತವದಲ್ಲಿ ಈ ರಾಕೇಶ್ ಶೆಟ್ಟಿ ಮುಂಬೈ ನ ಹೆಸರಾಂತ CA ರಮೇಶ್ ಸಂಜೀವ ಶೆಟ್ಟಿ ಎನ್ನುವವರ CA ಸರ್ಟಿಫಿಕೇಟ್ ಅನ್ನು forge ಮಾಡಿ ರಾಕೇಶ್ ಸಂಜೀವ ಶೆಟ್ಟಿ ಎಂದು ಬದಲಾಯಿಸಿ ಬೆಂಗಳೂರಿನ ಉದ್ಯಮಿಗಳಿಗೆ ತಾನು ಮೇಧಾವಿ CA ಎಂದು ಹೇಳಿ ನಾಮ ಹಾಕುತ್ತಿದ್ದ. ಈ ವಿಷಯ ಗೊತ್ತಾಗಿ ಇತರ ಸಿಬ್ಬಂದಿ ಇವನನ್ನು ದೂರ ಇಟ್ಟಿದ್ದರು.
* 2018 ರಲ್ಲಿ ಬೆಂಗಳೂರಿನ POWER SMART MEDIA ದಲ್ಲಿ ತಾನು ಅಕೌಂಟ್ ಉದ್ಯೋಗಿ ಎಂದು ಸೇರಿಕೊಂಡು ಅದರ ನಿರ್ದೇಶಕರಿಗೆ ಮೋಸ ಮಾಡಿ ಕಂಪನಿ ಹಕ್ಕನ್ನು ಮುಂಬೈ ಮೂಲದ MITCON INFRA PROJECT PVT LTD ಎಂಬ ಕೇವಲ 10/10 ft ಕೋಣೆ ಇರುವ Shell ಕಂಪನಿಗೆ ವರ್ಗಾಯಿಸಿ ತಾನೇ POWER TV MD ಎಂದು ಘೋಷಿಸಿಕೊಳ್ಳುತ್ತಾನೆ. ಅಂದಿನಿಂದ ಇಲ್ಲಿಯವರೆಗೆ ಅನೇಕ ಉದ್ಯಮಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಮತ್ತು ತನ್ನ ವಾಹಿನಿಯ ವರದಿಗಾರರು ಮತ್ತು ಸಿಬ್ಬಂದಿಗಳಿಗೆ ನಾನಾ ರೀತಿಯಲ್ಲಿ ವಂಚಿಸಿರುವುದು ಪತ್ತೆ ಆಗಿದೆ.
* ಕರ್ನಾಟಕ ಪೊಲೀಸ್ ಇಲಾಖೆಯ ದಕ್ಷ ಹಿರಿಯ IPS ಅಧಿಕಾರಿ ಶ್ರೀ ರವಿಕಾಂತೆ ಗೌಡ, ಡಾ A ರಮ್ಯಾ ರಮೇಶ್ ಗೌಡ, ಶ್ರೀ HM ರಮೇಶ್ ಗೌಡ Ex MLC ಅವರು ಈತನು ಅವರಿಂದ ಹಣ ವಸೂಲಿ ಉದ್ದೇಶದಿಂದ ಸುಳ್ಳು ಅಪಪ್ರಚಾರ ಸುದ್ದಿ ಪ್ರಸಾರ ಮಾಡಿದ ಕಾರಣ ರಾಕೇಶ್ ಶೆಟ್ಟಿ ಮತ್ತು ವಾಹಿನಿಯ ವಿರುದ್ಧ ಮೊಕದ್ದಮೆ ದಾಖಲು ಮಾಡಿದಾಗ ವಿಚಾರಣೆ ಸಂದರ್ಭದಲ್ಲಿ :
* ಪ್ರಸಾರದ ಪರವಾನಿಗೆ 2021 ರ ವರೆಗೆ MITCON INFRA ಸಂಸ್ಥೆ ಹೆಸರಿಗೆ ಇದ್ದು 2021ರ ನಂತರ ನವಿಕೃತ ಆಗಿಲ್ಲದಿರುವುದು,
* POWER SMART ಮತ್ತು MITCON INFRA ಕಂಪನಿಗಳು ಭಿನ್ನ ಸಂಸ್ಥೆ ಆಗಿದ್ದು ಪ್ರಸಾರದ ಪರವಾನಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ( MIB ) ಮತ್ತು ಕೇಂದ್ರ ಗೃಹ ಸಚಿವಾಲಯದ ನಿಯಮಗಳಿಗೆ ವಿರುದ್ಧ ಆಗಿರುವುದು ಕಂಡು ಬಂದಿದೆ.
* ಪ್ರಸಾರದ ಪರವಾನಿಗೆ ಪಡೆಯುವಾಗ ಮುಖ್ಯಸ್ಥ ರಾದವರು Security clearance ಪಡೆಯುವುದು ಕಡ್ಡಾಯ ಇರುತ್ತದೆ. ಹೀಗಾಗಿ ರಾಕೇಶ್ ಶೆಟ್ಟಿ ಯ power tv ಚಾನೆಲ್ ನಡೆಸುವುದು ದೇಶದ ಭದ್ರತೆಗೆ ಮಾರಕ ವಾಗಿರುವುದು ವಿಚಾರಣೆ ಸಂದರ್ಭದಲ್ಲಿ ಕಂಡು ಬಂದಿರುತ್ತದೆ.
* ಇದು ವರೆಗೆ ರಾಕೇಶ್ ಶೆಟ್ಟಿಯ ಮೇಲೆ 21 ಕ್ರಿಮಿನಲ್ ಪ್ರಕರಣ, 16 court contempt, 5 ಪ್ರಕಾರಣಗಲ್ಲಿ ಶಿಕ್ಷೆ, ಒಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಘೋಷಿಸಿದ ಅಪರಾಧಿ ಇರುವುದು ದಾಖಲೆ ಇಂದ ಕಂಡು ಬರುತ್ತದೆ.
* ಸುಳ್ಳು ಸುದ್ದಿ ಪ್ರಸಾರ ಮಾಡಲು, ವ್ಯಕ್ತಿಗಳ ತೇಜೋವಧೆ ಮಾಡುವುದಕ್ಕಾಗಿ ಹಣ ಪಡೆಯುವುದು, ತನ್ನ ಮೇಲೆ ಮೊಕದ್ದಮೆ ಹೂಡುವವರ ಮೊಬೈಲ್ Hack ಮಾಡಿ ಬ್ಲಾಕ್ ಮೇಲ್ ಮಾಡುವುದು, ವಾಹಿನಿಯಲ್ಲಿ ಅವಾಚ್ಯವಾಗಿ, ವಿಚಿತ್ರವಾಗಿ ಅಸಹ್ಯವಾಗಿ ನಿಂಧಿಸುವುದು, Sting operation ಹೆಸರಲ್ಲಿ Sex Tape ತಯಾರಿಸುವುದು ಈತನ ಕಾರ್ಯಶೈಲಿ ಆಗಿದ್ದು ಪತ್ರಿಕೋದ್ಯಮದ ನೈತಿಕತೆಗೆ ವಿರುದ್ಧವಾಗಿದೆ.

ಇಷ್ಟೊಂದು ಕ್ರಿಮಿನಲ್ ಹಿನ್ನಲೆ ಇರುವ ಈತನ ವಿರುದ್ಧ ಇನ್ನೂ ಯಾಕೆ ರೌಡಿ ಶೀಟರ ಮಾಡಿಲ್ಲ ಪೊಲೀಸ್ ಇಲಾಖೆ? ಆದಷ್ಟು ಬೇಗ ಪೊಲೀಸ್ ಇಲಾಖೆ ರಾಕೇಶ್ ಶೆಟ್ಟಿ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ರೌಡಿ Sheeter ದಾಖಲಿಸಿ ಬಂಧಿಸಬೇಕು ಅಂತ ಆಗ್ರಹಿಸಿದರು.

ಕೇಂದ್ರ ಸರ್ಕಾರದ ED ಮತ್ತು CBI ಸಂಸ್ಥೆಗಳು ಈತನ ಬೇನಾಮಿ ವ್ಯವಹಾರ, ಬೇನಾಮಿ ಆಸ್ತಿ, ಅನೈತಿಕ ಚಟುವಟಿಕೆ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಸಂಸದರು ಮತ್ತು ಕೇಂದ್ರ ಸಚಿವರು ಈ ಕುರಿತು ಗಮನ ಹರಿಸಬೇಕು. ಕರ್ನಾಟಕ ಪತ್ರಿಕೋದ್ಯಮದಿಂದ ರಾಕೇಶ್ ಶೆಟ್ಟಿ ಯನ್ನು ಹೊರಗಿಡಬೇಕು. ಏಕೆಂದರೆ ಈತ ಈತ ಪತ್ರಕರ್ತ ಅಥವಾ ಪತ್ರಿಕೋದ್ಯಮಿ ಆಗಿರದೆ ಪತ್ರಿಕೋದ್ಯಮ ಹೆಸರಲ್ಲಿ ವಂಚನೆ ಸುಲಿಗೆ ಮಾಡುವ ಮಹಾ ವಂಚಕ ಎಂದು ದಾಖಲೆ ಇಂದ ಸಾಬೀತಾಗಿದೆ ಎಂದರು.

ರಾಕೇಶ್ ಶೆಟ್ಟಿ ಎಂಬ ವ್ಯಕ್ತಿ ನಾಗರೀಕ ಸಮಾಜಕ್ಕೆ ಮಾರಕ ಆಗಿದ್ದು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿ ಈತನ ಸಹಾಯಕ್ಕೆ ಬಾರದೇ ಈತನ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಇಚ್ಛಾ ಶಕ್ತಿ ತೋರಿಸಬೇಕು ಅಂತ ತಿಳಿಸಿದರು.

BREAKING : ಸಿಎಂ ಬದಲಾದರೆ ಆ ಸ್ಥಾನ ವೀರಶೈವ ಲಿಂಗಾಯತರಿಗೆ ನೀಡಬೇಕು : ಶ್ರೀಶೈಲ್ ಜಗದ್ಗುರು ಆಗ್ರಹ

ಹಾವೇರಿ ಅಪಘಾತ ಪ್ರಕರಣ :ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Share.
Exit mobile version