ಶಿವಮೊಗ್ಗ : ಕನ್ನಡ ನಾಡುನುಡಿ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಿನ ಧ್ವನಿ ಮೊಳಗಿಸಬೇಕು. ಕನ್ನಡ ನಾಡಿನ ಒಂದಿಂಚು ಭೂಮಿ ಅನ್ಯರಾಜ್ಯಗಳಿಗೆ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕೆಳದಿ ರಾಣಿ ಚೆನ್ನಮ್ಮಾಜಿ ವೃತ್ತದಲ್ಲಿ ಶನಿವಾರ ನಗರಸಭೆ ಹಾಗೂ ವಿದ್ಯಾರಣ್ಯ ಯುವಕ ಸಂಘದ ವತಿಯಿಂದ ಕೆಳದಿಯಿಂದ ಬಂದ ವಿದ್ಯಾರಣ್ಯ ಜ್ಯೋತಿಯನ್ನು ಸ್ವಾಗತಿಸಿ, ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದಂತ ಅವರು, ಕೇರಳದ ಕಾಸರಗೋಡು, ಬೆಂಗಳೂರಿನ ಹೊಸೂರು, ಬೆಳಗಾವಿ ಭಾಗದಲ್ಲಿ ಕರ್ನಾಟಕ ಗಡಿಯಲ್ಲಿ ಸದಾ ತಕರಾರು ತೆಗೆದು ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಿರಂತರ ನಡೆಯುತ್ತಿದೆ. ಕನ್ನಡಪರ ಸಂಘಟನೆಗಳು ಕಟ್ಟೆಚ್ಚರದಿಂದ ಇದ್ದು ಇಂತಹ ಘಟನೆಗಳ ವಿರುದ್ದ ಹೋರಾಟ ನಡೆಸುತ್ತಿರುವುದು ಅಭಿನಂದಾರ್ಹ ಸಂಗತಿ. ಕನ್ನಡದ ವಿಷಯ ಬಂದಾಗ ನಾವೆಲ್ಲರೂ ಕಟ್ಟೆಚ್ಚರದಿಂದ ಇರೋಣ. ನಾವು ಎಲ್ಲೆ ಇದ್ದರೂ ಕನ್ನಡಿಗರಾಗಿರೋಣ. ವಿದೇಶದಲ್ಲಿದ್ದರೂ ನಮ್ಮ ಕನ್ನಡ ಪ್ರೇಮ ಸದಾ ಹಸಿರಾಗಿರಲಿ ಎಂದರು.
ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಟೋ ಚಾಲಕರ ಪಾತ್ರ ಪ್ರಮುಖವಾಗಿದೆ. ವಿದ್ಯಾರಣ್ಯ ಯುವಕ ಸಂಘ ಅತ್ಯಂತ ವಿಶೇಷವಾಗಿ 40 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದೆ. ಇಲ್ಲಿ ಬಸ್ ನಿಲ್ದಾಣಕ್ಕೆ ಹಿಂದಿನ ಶಾಸಕರು ಅನುದಾನ ಮೀಸಲಿರಿಸಿದ್ದರು. ಈಗಿನ ಶಾಸಕರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ನಗರಸಭೆ ಈ ಭಾಗದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ತಿಳಿಸಿದರು.
ವಿದ್ಯಾರಣ್ಯ ಯುವಕ ಸಂಘದ ಅಧ್ಯಕ್ಷ ಅಮಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ರಶ್ಮಿ ಜೆ.ಎಚ್., ಶ್ರೀನಿವಾಸ್ ಮೇಸ್ತಿç, ಗಣೇಶ್ ಪ್ರಸಾದ್, ಕುಸುಮ ಸುಬ್ಬಣ್ಣ, ಸರೋಜಮ್ಮ, ಪ್ರೇಮ ಸಿಂಗ್, ಎಚ್.ಕೆ.ನಾಗಪ್ಪ, ಡಾ. ಬೆನಕ ಪ್ರಸಾದ್, ಮಧುಮಾಲತಿ, ಸರಸ್ವತಿ ನಾಗರಾಜ್, ಎಲ್.ಚಂದ್ರಪ್ಪ, ರವಿಕುಮಾರ್, ವಿ.ಟಿ.ಸ್ವಾಮಿ, ಪ್ರದೀಪ್ ಆಚಾರ್, ಸಂತೋಷ್, ಉಮೇಶ್ ಬಿ.ಆರ್., ಸತ್ಯನಾರಾಯಣ ಕೆಳದಿ ಇನ್ನಿತರರು ಹಾಜರಿದ್ದರು. ಎಚ್.ಜಿ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಆನಂತರ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರಣ್ಯ ಕನ್ನಡ ಜ್ಯೋತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ಸ್ತಬ್ದಚಿತ್ರಗಳು ಜನಾಕರ್ಷಣೆಗೆ ಪಾತ್ರವಾಯಿತು. ಧ್ವನಿ ಬೆಳಕು ಶಾಮಿಯಾನ ಮಾಲೀಕರ ಸಂಘದ ವತಿಯಿಂದ ಉಪಹಾರದ ವ್ಯವಸ್ಥೆ, ಗಣಪತಿ ಬ್ಯಾಂಕ್‌ನಿAದ ಸಿಹಿ ವಿತರಣೆ ಮಾಡಲಾಯಿತು.
ಇಂದು ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ: ಸಾಗರ AC ವೀರೇಶ್ ಕುಮಾರ್
BIG BREAKING: ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಾಸ್: ಸಿ.ಎಂ.ಸಿದ್ದರಾಮಯ್ಯ ಘೋಷಣೆ








