ಶಿವಮೊಗ್ಗ : ರಾಜ್ಯಕ್ಕೆ ಅತಿಹೆಚ್ಚು ವಿದ್ಯುತ್ ಪೂರೈಕೆ ಮಾಡುವ ಲಿಂಗನಮಕ್ಕಿ ಜಲಾಶಯ ತುಂಬಿರುವುದು ರಾಜ್ಯದಲ್ಲಿ ಮಳೆಬೆಳೆ ಸಮೃದ್ದವಾಗಿ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಲಿಂಗನಮಕ್ಕಿಗೆ ಜಲಾಶಯಕ್ಕೆ ಬಾಗಿನ ಕೊಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವುದು ಅರ್ಥವಿಲ್ಲದ ಮಾತು. ಎಲ್ಲರೂ ಒಂದಲ್ಲ ಒಂದು ದಿನ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದ ಕ್ರೆಸ್ಟ್ಗೇಟ್ ತೆರೆದು, ಶರಾವತಿ ನದಿ ನೀರಿಗೆ ಪುಷ್ಪವೃಷ್ಟಿ ಮಾಡಿ ಮಾತನಾಡಿದಂತ ಅವರು, ಈ ಸ್ಥಳಕ್ಕೆ ಬಂದಾಗ ನಮ್ಮ ಪೂರ್ವಿಕರು ಇಂತಹದ್ದೊಂದು ಆಣೆಕಟ್ಟು ಕಟ್ಟಿದ್ದಾರಲ್ಲಾ ಎನ್ನುವುದು ನೆನಪಿಸಿಕೊಳ್ಳಬೇಕು. ಈತ ಇಂತಹ ನಿರ್ಮಾಣ ಕಷ್ಟಸಾಧ್ಯ. ಲಿಂಗನಮಕ್ಕಿ ಜಲಾಶಯದ ಮೇಲೆ ಎಲ್ಲರೂ ನಿಂತು ಸಂಭ್ರಮಿಸುವುದು ಶಾಶ್ವತವಾಗಿ ಇರಬೇಕು. ಬಂಗಾರಪ್ಪ ಅವರ ಆಶಯ ಸಹ ಅದೇ ಆಗಿತ್ತು. ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ ಸಂದರ್ಭದಲ್ಲಿ ಹೆಚ್ಚು ಪರಿಸರ ನಾಶವಾಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆ ಯಶಸ್ವಿಗೊಳಿಸುತ್ತದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುವ ಕೆಲಸ ಶೀಘ್ರದಲ್ಲೆ ಆಗುತ್ತದೆ. ಹಿಂದೆ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಟ್ಟೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ನಮ್ಮ ಸರ್ಕಾರ ಬಂದು ಎರಡು ವರ್ಷ ಮೂರು ತಿಂಗಳಾಗಿದೆ. ಮುಳುಗಡೆ ಸಂತ್ರಸ್ತರ ಸರ್ವೇ ಕಾರ್ಯ ನಡೆಯುತ್ತಿದೆ. ಪ್ರತಿಕೇಸ್ ಸಹ ಸುಪ್ರೀಂ ಕೋರ್ಟ್ಗೆ ವರದಿ ನೀಡಬೇಕು. ಸಾಮಾಜಿಕ, ದ್ರೋಣ್ ಮೂಲಕ ಸರ್ವೇ ಕಾರ್ಯ ನಡೆದಿದೆ. ಈ ಭಾಗದ ಜನರಿಗೆ ಸಿಗಂದೂರು ದೇವಿಯ ಆಶೀರ್ವಾದದಿಂದ ಶರಾವತಿ, ಚಕ್ರ, ವರಾಹಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡುವ ಕೆಲಸ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಪ್ರಮುಖರಾದ ಪ್ರಸನ್ನಕುಮಾರ್, ರವಿಕುಮಾರ್, ಕಲಗೋಡು ರತ್ನಾಕರ. ರಾಜು, ಕಲಸೆ ಚಂದ್ರಪ್ಪ, ಉಪವಿಭಾಗಾಧಿಕಾರಿ ವೀರೇಶಕುಮಾರ್, ಎಎಸ್‌ಪಿ ಡಾ. ಬೆನಕಪ್ರಸಾದ್, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಹಾಜರಿದ್ದರು.
BREAKING: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು
ರೈತರಿಗೆ ಗುಡ್ ನ್ಯೂಸ್: ಹೈನುಗಾರಿಕೆಗೆ ಅರ್ಜಿ ಆಹ್ವಾನ, ದೊರೆಯಲಿದೆ 1.25 ಲಕ್ಷ ಸಹಾಯಧನ