ಬೆಂಗಳೂರು: ಕೋವಿಡ್ ಲಸಿಕೆಗೂ, ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ಈಗಾಗಲೇ ತಿಳಿದಿದೆ ಎಂಬುದಾಗಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದೆ.
ರಾಜ್ಯದಲ್ಲಿ ದಾಖಲಾಗುತ್ತಿರುವ ಹೃದಯಾಘಾತ ಪ್ರಕಾರಣಗಳಿಂದ ಯಾರು ಹೆದರುವ ಹಾಗೂ ಗೊಂದಲಗೊಳ್ಳುವ ಅವಶ್ಯಕತೆ ಇಲ್ಲ, ಬದಲಿಗೆ ಆರೋಗ್ಯ ತಪಾಸಣೆ ಮಾಡಿಸಿ, ಸಮತೋಲನ ಆಹಾರ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಂದಾಗಿ ಆತಂಕಗೊಂಡು ಸಾರ್ವಜನಿಕರು ಜಯದೇವ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಇಂತಹ ಆತಂಕದ ಅವಶ್ಯಕತೆಯಿಲ್ಲ ಎಂಬುದಾಗಿ ತಿಳಿಸಿದರು.
ಸಾರ್ವಜನಿಕರು ಆತಂಕ ಬಿಟ್ಟು ಆರೋಗ್ಯಕರ ಜೀವನಶೈಲಿ, ಅಗತ್ಯ ನಿದ್ರೆ ಹಾಗೂ ವ್ಯಾಯಾಮವನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಸನ್‌ಫೀಸ್ಟ್ ವೌಜರ್ಸ್ ನ ರಾಯಭಾರಿಯಾಗಿ ತನ್ನ ಅನುಭವ ಹಂಚಿಕೊಂಡಿರುವ ನಟ ಶಾರುಖ್ಖಾನ್
OMG: 3 ತಿಂಗಳ ಹಿಂದೆ ಕಾಗೆ ಹೊತ್ತೊಯ್ದ ‘ಚಿನ್ನದ ಬಳೆ’ ಮರಳಿ ಒಡತಿಯ ಕೈಗೆ: ಹೇಗೆ ಅಂತ ಈ ಸುದ್ದಿ ಓದಿ