ಬೆಂಗಳೂರು: ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯಲ್ಲ; ತೃತೀಯ ದರ್ಜೆಯ ನಾಗರಿಕರನ್ನಾಗಿ ನೋಡುವ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಆರೋಪಿಸಿದರು.
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಸ್ಲಿಂ ಭಯೋತ್ಪಾದಕರಿಗೆ, ಮತಾಂಧರಿಗೆ ಎಲ್ಲ ರೀತಿಯ ರಕ್ಷಣೆ ಕೊಡುತ್ತಿದ್ದಾರೆ. ಚುನಾವಣೆಗೆ ಮುಸ್ಲಿಂ ಭಯೋತ್ಪಾದಕರನ್ನು ಅವರ ಒಂದು ಕಾರ್ಯತಂತ್ರವಾಗಿ ರೂಪೀಕರಣ ಮಾಡುತ್ತಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದಿಂದ ಆರಂಭಿಸಿ ಬಾಂಬ್ ಬ್ಲಾಸ್ಟ್ ಪ್ರಕರಣದ ವರೆಗೆ ಬರಿಯ ಮುಸಲ್ಮಾನ ಭಯೋತ್ಪಾದಕರೇ, ಮುಸಲ್ಮಾನ ಗೂಂಡಾಗಳೇ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನಿಲ್ಲುತ್ತಿದ್ದು, ಇದೆಂಥ ವಿಪರ್ಯಾಸ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯವು ಒಂದು ಕಾಲಘಟ್ಟದಲ್ಲಿ ಎಲ್ಲರನ್ನೂ ಸಮಾನತೆಯಿಂದ ನೋಡಿದೆ. ಆ ವಿಶ್ವಮಾನವನ ಸಂದೇಶವನ್ನು ನೀಡಿದ ನಾಡು ಕರ್ನಾಟಕ. ಈ ಚುನಾವಣೆ ನಡೆಸುವುದೇ ಗೂಂಡಾಗಳ ಮುಖಾಂತರ ಎಂಬಂತೆ ಕರ್ನಾಟಕವನ್ನು ಬದಲಿಸಿದಂತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೂಂಡಾಗಿರಿ, ಬೆದರಿಕೆ ತಂತ್ರ, ಹಿಂದೂಗಳ್ಯಾರೂ ಮನೆಯಿಂದ ಹೊರಕ್ಕೆ ಬರಬಾರದು, ಮತ ಹಾಕಲು ಬರಬಾರದು ಎಂಬ ಭಯದ ವಾತಾವರಣದ ಮೂಲಕ ಚುನಾವಣೆ ನಡೆಸುವ ಕಾಂಗ್ರೆಸ್ಸಿನವರ ಹುನ್ನಾರಕ್ಕೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಂದುವರೆದರೆ ಹಿಂದೂಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜನರು ಆಲೋಚಿಸಿ ಮೋದಿಯವರ ಪರ ಮತದಾನ ಮಾಡಲಿದ್ದಾರೆ ಎಂದು ನುಡಿದರು.
ಒಂದು ವಿಶೇಷ ಕಾಲಘಟ್ಟದಲ್ಲಿ ನಾವಿದ್ದೇವೆ. ಕರ್ನಾಟಕದ ಈ ಬಾರಿಯ ಚುನಾವಣೆ ಒಂದು ರೀತಿಯಲ್ಲಿ ಭಯೋತ್ಪಾದಕರ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಚಾರ, ವಿಧಿವಿಧಾನಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಮತ್ತು ಸಾಮಾನ್ಯ ಕಾರ್ಯಕರ್ತರ ವಿರುದ್ಧದ ಹೋರಾಟದಂತಿದೆ ಎಂದು ವಿಶ್ಲೇಷಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಇದ್ದರು.
ಸಿದ್ಧರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಯನ್ನೇ ಕಳೆದುಕೊಂಡಿದ್ದಾರೆ- ಬಿಎಸ್ ಯಡಿಯೂರಪ್ಪ ವಾಗ್ಧಾಳಿ
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!