Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಶಿವರಾತ್ರಿ ದಿನದಂದು ಜಾಗರಣೆಗೆ ತೆರಳಿದಾಗ ದರೋಡೆ : ಕ್ಯಾಮರಾಗೆ ಬಟ್ಟೆ ಕಟ್ಟಿ, ಚಿನ್ನಾಭರಣ ನಗದು ಹಣ ಕಳ್ಳತನ!

17/02/2026 2:26 PM

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿಭಟನಾಕಾರರು ಕಲ್ಲು ಹೊಡೆದಿರುವ ಫೋಟೋಗಳಿವೆ: ಸಿಎಂ ಸಿದ್ದರಾಮಯ್ಯ
KARNATAKA

ಪ್ರತಿಭಟನಾಕಾರರು ಕಲ್ಲು ಹೊಡೆದಿರುವ ಫೋಟೋಗಳಿವೆ: ಸಿಎಂ ಸಿದ್ದರಾಮಯ್ಯ

By kannadanewsnow0713/12/2024 12:09 PM

ವಿಜಯಪುರ: ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಜಯಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಹೃದಯಹೀನರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವ ಬಗ್ಗೆ ಮಾತನಾಡಿ ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು: ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ.‌ ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.

ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇವೆ: ಪ್ರವರ್ಗ 2ಎ ಅಡಿಯಲ್ಲಿರುವ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು 2 ಎ ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ಹೇಳಲು ಅವರಿಗೆ ಸ್ವಾತಂತ್ರ್ಯವಿದೆ. ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿ ಸಮುದಾಯದ ಜನರ ಮೇಲೆ ಪೊಲೀಸ್ ಕಲ್ಲು ಹೊಡೆದಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರು ಕಲ್ಲು ಹೊಡೆದಿರುವುದು, ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗುವುದರ ಫೋಟೋಗಳನ್ನು ತೋರಿಸುತ್ತೇವೆ. ಸ್ವಾಮೀಜಿಗಳು ರಸ್ತೆಯಲ್ಲಿ ಏಕೆ ಕುಳಿತುಕೊಂಡಿದ್ದಾರೆ? ಪ್ರತಿಭಟನಾಕಾರರು ಕಲ್ಲು ತೂರದಿದ್ದರೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಹೇಗಾಯಿತು. ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ ? ಎಂದು ಪ್ರಶ್ನಿಸಿದರು. ನಾನು ಹೇಳಿರುವುದಕ್ಕೆ ಸಾಕ್ಷಿಯಿದೆ ಎಂದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು: ಮೀಸಲಾತಿ ಮುಂದೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು. ಬಿಜೆಪಿ ಕಾಲದಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆಯವರ ವರದಿಯಲ್ಲಿ ಈಗಿರುವಂತೆಯೇ ಪ್ರವರ್ಗ 2ಎ 2ಬಿ ಇರಬೇಕು. ಇದಕ್ಕೆ ಹೊಸ ಸೇರ್ಪಡೆಯಾಗಬಾರದು 2ಬಿ ಯಲ್ಲಿರುವ 4% ಮೀಸಲಾತಿಯನ್ನು ರದ್ದು ಮಾಡಬಾರದು ಎಂದು ಹೇಳಿದ್ದಾರೆ.

ಹೋರಾಟಕ್ಕೆ ಬಿಜೆಪಿ ಬೆಂಬಲ: ಬಿಜೆಪಿ ಅವಧಿಯಲ್ಲಿ ಆಗಿದ್ದಕ್ಕೆ ಅಂದು ಪ್ರತಿಭಟನೆ ಏಕಾಗಲಿಲ್ಲ? ಈಗ ಅದೇ ಬಿಜೆಪಿಯವರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಮುಸಲ್ಮಾನರಿಗೆ ಇದ್ದ ಶೇ.4 ರ ಮೀಸಲಾತಿಯನ್ನು ರದ್ದುಮಾಡಿ 3ಎ ಒಕ್ಕಲಿಗರಿಗೆ 2% ಮತ್ತು 3ಬಿ ಪ್ರವರ್ಗಗಳಿಗೆ ಲಿಂಗಾಯತರಿಗೆ 2% ಮೀಸಲಾತಿ ನೀಡಿದರು. ಇದನ್ನು ಪ್ರಶ್ನಿಸಿ ಮುಸಲ್ಮಾನರಾದ ರಸೂಲ್ ಎಂಬ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರವೇ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದನ್ನು ಸಿಎಂ ಉಲ್ಲೇಖಿಸಿದರು.

ಸಂಧಾನಕ್ಕೆ ಸಚಿವರನ್ನು ಕಳುಹಿಸಲಾಗಿತ್ತು: ಪಂಚಮಸಾಲಿ ಹೋರಾಟವನ್ನು ಟ್ರ್ಯಾಕ್ಟರ್ ತರುವ ಮೂಲಕ ಮಾಡುತ್ತೇವೆ ಎಂದು ಮೊದಲೇ ತಿಳಿಸಿದ್ದರು. ನ್ಯಾಯಾಲಯ ಹೋರಾಟವನ್ನು ಶಾಂತಿಯುತವಾಗಿ , ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಲು ಸೂಚನೆ ನೀಡಿತ್ತು. ಆದರೆ ಹೋರಾಟಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಸ್ಥಳಕ್ಕೆ ಮಹದೇವಪ್ಪ ಸೇರಿದಂತೆ ಮೂರು ಸಚಿವರನ್ನು ಕಳುಹಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

There are photos of protesters pelting stones: CM Siddaramaiah
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಶಿವರಾತ್ರಿ ದಿನದಂದು ಜಾಗರಣೆಗೆ ತೆರಳಿದಾಗ ದರೋಡೆ : ಕ್ಯಾಮರಾಗೆ ಬಟ್ಟೆ ಕಟ್ಟಿ, ಚಿನ್ನಾಭರಣ ನಗದು ಹಣ ಕಳ್ಳತನ!

17/02/2026 2:26 PM1 Min Read

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM1 Min Read

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM1 Min Read
Recent News

ಬೆಂಗಳೂರಲ್ಲಿ ಶಿವರಾತ್ರಿ ದಿನದಂದು ಜಾಗರಣೆಗೆ ತೆರಳಿದಾಗ ದರೋಡೆ : ಕ್ಯಾಮರಾಗೆ ಬಟ್ಟೆ ಕಟ್ಟಿ, ಚಿನ್ನಾಭರಣ ನಗದು ಹಣ ಕಳ್ಳತನ!

17/02/2026 2:26 PM

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM

BREAKING : ನಂದಿನಿ ಹಾಲು ಕುಡಿಯಲು ಶೇ.100% ಸುರಕ್ಷಿತ : ‘ಸುಳ್ಳು’ ಹೇಳಿಕೆಗಳನ್ನು ತಳ್ಳಿಹಾಕಿದ ‘KMF’

17/02/2026 2:15 PM
State News
KARNATAKA

ಬೆಂಗಳೂರಲ್ಲಿ ಶಿವರಾತ್ರಿ ದಿನದಂದು ಜಾಗರಣೆಗೆ ತೆರಳಿದಾಗ ದರೋಡೆ : ಕ್ಯಾಮರಾಗೆ ಬಟ್ಟೆ ಕಟ್ಟಿ, ಚಿನ್ನಾಭರಣ ನಗದು ಹಣ ಕಳ್ಳತನ!

By kannadanewsnow0517/02/2026 2:26 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಶಿವರಾತ್ರಿ ದಿನದಂದು ಮನೆ ಮಾಲೀಕರು ಜಾಗರಣೆಗೆ ತೆರಳಿದಾಗ ದರೋಡೆ ನಡೆದಿದೆ. 5 ಲಕ್ಷ ಮೌಲ್ಯ ಚೆನ್ನ…

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM

BREAKING : ನಂದಿನಿ ಹಾಲು ಕುಡಿಯಲು ಶೇ.100% ಸುರಕ್ಷಿತ : ‘ಸುಳ್ಳು’ ಹೇಳಿಕೆಗಳನ್ನು ತಳ್ಳಿಹಾಕಿದ ‘KMF’

17/02/2026 2:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.