ಮೈಸೂರು: ನನ್ನ ತಂದೆ ಸಿದ್ಧರಾಮಯ್ಯ ಅವರ ಮೇಲೆ ಯಾವುದೇ ಆರೋಪಗಳು ಇಲ್ಲ. ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದಕ್ಕೂ ಯಾವುದೇ ಕಾರಣಗಳೂ ಇಲ್ಲ. ಹೀಗಾಗಿ ನನ್ನ ತಂದೆ ಉಳಿದ ಎರಡೂವರೆ ವರ್ಷದ ಅವಧಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂಬುದಾಗಿ ಡಾ.ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಂದತ ಅವರು, ಸಿದ್ಧರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ನಾಯಕತ್ವ ಬದಲಾವಣೆ ಚರ್ಚೆ ಸರಿಯಲ್ಲ. ಕೆಲವರು ಆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೇ ಅದನ್ನು ನಿರ್ಧರಿಸೋದು ಕಾಂಗ್ರೆಸ್ ಹೈಕಮಾಂಡ್ ಆಗಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾದದ್ದು ಎಂದರು.
ನನಗೆ ಮಾಹಿತಿ ಇರುವಂತೆ ಎಲ್ಲಿಯೂ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲೀ, ಕೆಲ ಹಿರಿಯ ಸಚಿವರಾಗಲೀ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲವೆಂದು ಅರ್ಥ ತಾನೆ ಅಂತ ಪ್ರಶ್ನಿಸಿದರು.
ಸಿಎಂ ಯಾರನ್ನು ಮಾಡಬೇಕು, ಮಾಡಬಾರದು ಎಂಬುದು ನಮ್ಮ ಶಾಸಕರು, ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂಬುದಾಗಿ ಹೇಳುತ್ತಲೇ ಡಿ.ಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ್ದೇ ಆದಿಚುಂಚನಗಿರಿ ಮಠದ ಸ್ವಾಮೀಜಿಗೆ ತಿರುಗೇಟು ನೀಡಿದರು.
ರೈಲುಗಳಲ್ಲಿ ‘ಹಲಾಲ್ ಮಾಂಸ’ ಮಾತ್ರ ಪೂರೈಕೆ ನಿಷೇಧ ; ವರದಿ ಕೋರಿ ರೈಲ್ವೆಗೆ NHRC ನೋಟಿಸ್
BREAKING : ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡದಿದ್ದರೆ ಸರ್ಕಾರ ಪತನ : ವೀರೇಶ್ವರ ಸ್ವಾಮೀಜಿ ಭವಿಷ್ಯ








