ಉಡುಪಿ: ಇಲ್ಲಿನ ಕಬ್ಬಿನಾಲೆಯ ಪಿತ್ತಬೈಲ್ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎಂಬುವರನ್ನು ನಕ್ಸಲ್ ನಿಗ್ರಹ ಪಡೆಯಿಂದ ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯಲಾಗಿತ್ತು. ಇನ್ನೂ 5-6 ನಕ್ಸಲರು ಅರಣ್ಯ ಪ್ರದೇಶದಲ್ಲಿ ಇದ್ದಾರೆ ಎಂಬುದಾಗಿ ಐಎಸ್ ಡಿ ಐಜಿಪಿ ರೂಪಾ.ಡಿ ತಿಳಿಸಿದ್ದಾರೆ.
ಇಂದು ಸುದ್ದಿಗಾಗರೊಂದಿಗೆ ಮಾತನಾಡಿದಂತ ಅವರು ಮೋಸ್ಟ್ ವಾಂಟೆಂಡ್ ನಕ್ಸಲ್ ನಾಯಕ ವಿಕ್ರಂ ಗೌಡ ಅವರನ್ನು ಎನ್ ಕೌಂಟರ್ ಮಾಡಲಾಗಿದೆ. ಅವರ ವಿರುದ್ಧ 61 ಕೇಸ್ ಗಳಿದ್ದವು. ಕಾರ್ಯಾಚರಣೆಯಲ್ಲಿ ಎರಡೂ ಕಡೆಯಿಂದ ಗುಂಡಿನಚಕಮಕಿ ಆಗಿದೆ. ಹತ್ಯೆದಾ ವ್ಕಿಂ ಗೌಡ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದನು. ಕೇರಳದಲ್ಲೂ 19 ಕೇಸ್ ಗಳಿದ್ದಾವೆ ಎಂದರು.
ನವೆಂಬರ್.10ರಿಂದ ವಿಕ್ರಂ ಗೌಡಗಾಗಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿತ್ತು. 2005ರ ನಂತ್ರ 4ನೇ ಎನ್ ಕೌಂಟರ್ ಇದಾಗಿದೆ. ವಿಕ್ರಂ ಗೌಡ ಅವರ ಮೃತದೇಹವನ್ನು ಕೆಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಇನ್ನೂ ಕಬ್ಬಿನಾಲೆ ಪಿತ್ತಬೈಲ್ ಅರಣ್ಯ ಪ್ರದೇಶದಲ್ಲಿ 5 ರಿಂದ 6 ಮಂದಿ ನಕ್ಸಲರು ಇರುವ ಮಾಹಿತಿ ಬಂದಿದೆ. ಅವರಿಗೆ ಶರಣಾಗತಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಶರಣಾಗತಿಗೆ ಒಪ್ಪದಿದ್ದರೇ, ನಾವು ನಮ್ಮ ಮುಂದಿನ ನಡೆಯನ್ನು ತೋರಲಿದ್ದೇವೆ ಎಂದರು.
ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ