ಶಿವಮೊಗ್ಗ: ಅಣ್ಣನ ಹೆಂಡತಿಯೊಂದಿಗೆ ತಮ್ಮ ಅನೈತಿಕ ಸಂಬಂಧ ಇಟ್ಟುಕೊಂಡ ವಿಚಾರ ತಿಳಿದಂತ ಸಹೋದರ ಕೆಂಡಾಮಂಡಲವಾಗಿದ್ದರು. ಊರವರನ್ನು ಸೇರಿಸಿ ಪಂಚಾಯ್ತಿ ಮಾಡಿಸಿ ತಮ್ಮನಿಗೆ ಬುದ್ಧಿ ಕೂಡ ಹೇಳಿದ್ದರು. ಆದರೂ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಬಿಟ್ಟಿರಲಿಲ್ಲ. ಮುಂದೆ ಏನಾಯ್ತು ಅಂತ ಮುಂದೆ ಸುದ್ದಿ ಓದಿ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಕೊಪ್ಪ ಗ್ರಾಮದ ಮಾಲತೇಶ್(35) ಮದುವೆಯಾದ ನಂತ್ರ ಪತ್ನಿಯೊಂದಿಗೆ ಕೆಲ ದಿನಗಳ ಕಾಲ ಹಿರೇಕೆರೂರು ತಾಲ್ಲೂಕಿನ ಬೆಟಕೆರೂರಲ್ಲೂ ವಾಸವಿದ್ದರು. ಆ ಬಳಿಕ ತಮ್ಮೂರಿಗೆ ವಾಪಾಸ್ ಮರಳಿದ್ದರು. ಇವರೊಟ್ಟಿಗೆ ಮಾಲತೇಶ್ ತಮ್ಮ ರಾಮಚಂದ್ರ(28) ಕೂಡ ವಾಸವಿದ್ದನು.
ಕೂಲಿ ಕೆಲಸಕ್ಕೆ ಹೋದರೇ 15 ದಿನಗಳವರೆಗೆ ಮನೆಗೆ ಮರಳದೇ ಅಲ್ಲಿಯೇ ಇದ್ದು ಬಿಡುತ್ತಿದ್ದ ಆಸಾಮಿ ರಾಮಚಂದ್ರ ಆಗಿದ್ದನು. ಇದರ ನಡುವೆ ಮದುವೆಯಾಗದೇ ಇದ್ದಂತ ರಾಮಚಂದ್ರ ಅಣ್ಣ ಮಾಲತೇಶ್ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದೇ ವಿಚಾರ ಮನೆಯವರಿಗೂ ಗೊತ್ತಾಗಿ ರಾಮಚಂದ್ರನಿಗೆ ಬುದ್ಧಿ ಹೇಳಿದ್ದಾರೆ.
ದಿನಾಂಕ 08-09-2025ರಂದು ಮನೆಯಿಂದ ಹೋದವನು ಒಂದೂವರೆ ತಿಂಗಳಾದರೂ ವಾಪಾಸ್ಸೇ ಆಗದಿದ್ದಾಗ ದಿಗಿಲಾಗುತ್ತದೆ. ಸಂಬಂಧಿಕರು, ಪರಿಚಯಸ್ತರ ಬಳಿಯಲ್ಲಿ ಕೇಳಿದರೂ ಸುಳಿವು ಸಿಗೋದಿಲ್ಲ. ಈ ಕಾರಣದಿಂದಾಗಿ ಆನವಟ್ಟಿ ಪೊಲೀಸ್ ಠಾಣೆಗೆ ತೆರಳಿ ರಾಮಚಂದ್ರ ನಾಪತ್ತೆಯಾಗಿರೋ ಬಗ್ಗೆ ದೂರು ದೂರು ನೀಡುತ್ತಾರೆ. ಪೊಲೀಸರು ದೂರು ಪಡೆದು ಪತ್ತೆ ಕಾರ್ಯಾಚರಣೆ ಮಾಡಿದರೂ ಸಾಧ್ಯವಾಗಿರೋದಿಲ್ಲ.
ಅದೊಂದು ದಿನ ಕೊಲೆ ವಿಚಾರ ಬಾಯಿ ಬಿಟ್ಟ ಅಣ್ಣನ ಪತ್ನಿ
ರಾಮಚಂದ್ರ ನಾಪತ್ತೆಯಾಗಿದ್ದರಿಂದ ಅದೇ ಕೊರಗಿನಲ್ಲಿ ತಾಯಿ ಗೌರಮ್ಮ ಇದ್ದರು.ಡಿ.10ರಂದು ಪತ್ನಿಯೊಂದಿಗೆ ಮಾಲತೇಶ್ ಬಂದಾಗ, ತಾಯಿಯನ್ನು ಪತಿ-ಪತ್ನಿ ಸಮಾಧಾನಿಸಿದ್ದಾರೆ. ಗೌರಮ್ಮ ಅಳುವುದರಿಂದ ಮನಕಲಕಿದಂತ ಮಾಲತೇಶ್ ಪತ್ನಿ, ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಂತ ರಾಮಚಂದ್ರನನ್ನು ಜೇಡಿಗೆರೆ ತೋಟದ ಮನೆಯ ಹತ್ತಿರ ಕರೆದೊಯ್ದು ಸಾರಾಯಿ ಕುಡಿಸಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಸಾಯಿಸಿ, ಅಲ್ಲಿಯೇ ಗುಂಡಿ ತೋಡಿ ಹೂತಿ ಹಾಕಿರೋ ವಿಷಯವನ್ನು ಅತ್ತೆಗೆ ಹೇಳಿ ಬಿಡುತ್ತಾಳೆ.
ಈ ವಿಷಯ ಕೇಳಿ ಗೌರಮ್ಮ ಆಘಾತಗೊಳ್ಳುತ್ತಾರೆ. ಹಿರಿಯ ಮಗ ಮಾಲತೇಶ್ ವಿಚಾರಿಸಿದ್ರೇ ಏನೂ ಹೇಳದೇ ಕತೆ ಮುಗಿದಿದೆ. ಅದರ ಬಗ್ಗೆ ನನ್ನನ್ನು ಏನೂ ಕೇಳಬೇಡಿ ಎಂಬುದಾಗಿ ಹೇಳಿದ್ದಾನೆ. ಈ ಹಿನ್ನಲೆಯಲ್ಲಿ ರಾಮಚಂದ್ರ(28) ನಾಪತ್ತೆ, ಆ ಬಳಿಕ ತನ್ನ ಹಿರಿಯ ಮಗ ಮಾಲತೇಶ್ (35) ಹತ್ಯೆ ಮಾಡಿರೋದಾಗಿ ತಾಯಿ ಗೌರಮ್ಮ ಸೊರಬ ಠಾಣೆಗೆ ತೆರಳಿ ದಿನಾಂಕ 11-12-2025ರಂದು ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ
ಶಿವಮೊಗ್ಗ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದಂತ ತಮ್ಮನನ್ನೇ ಅಣ್ಣನೊಬ್ಬ ಹತ್ಯೆ ಮಾಡಿದ್ದಲ್ಲದೇ, ತೋಟದಲ್ಲಿ ಹೂತು ಹಾಕಿ ಪರಾರಿಯಾಗಿದ್ದನು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಂತ ಸೊರಬ ಠಾಣೆಯ ಸಿಪಿಐ ಮಹಾಂತೇಶ್ ಲಂಬಿ, ಪಿಎಸ್ಐ ನವೀನ್ ಅಂಡ್ ಟೀಂ ತನಿಖೆಗೆ ಇಳಿಯುತ್ತದೆ. ಮಾಲತೇಶ್ ಬಂಧಿಸಿ, ವಿಚಾರಿಸಿದಾಗ ತಮ್ಮ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಕೊಲೆ ಮಾಡಿ ಹೂತು ಹಾಕಿರುವಂತ ವಿಷಯವನ್ನು ಬಾಯಿ ಬಿಡುತ್ತಾನೆ.
ಈ ಮಾಹಿತಿ ಆಧರಿಸಿ ಆರೋಪಿ ಮಾಲತೇಶ್ ನಾಯ್ಯಾಲಯಕ್ಕೆ ಹಾಜರುಪಡಿಸಿ, ಕೋರ್ಟ್ ನಿಂದ ತಮ್ಮ ವಶಕ್ಕೆ ಪಡೆದು, ರಾಮಚಂದ್ರನನ್ನು ಹೂತು ಹಾಕಿದ್ದಂತ ಸ್ಥಳಕ್ಕೆ ಕರೆದೊಯ್ದು, ಸಾಗರ ಎಸಿ ವೀರೇಶ್ ಕುಮಾರ್, ಶಿವಮೊಗ್ಗ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡದೊಂದಿಗೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆ ಬಳಿಕ ಮತ್ತೆ ತಮ್ಮನನ್ನೇ ಹತ್ಯೆಗೈದ ಅಣ್ಣ ಮಾಲತೇಶ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಸೊರಬ ಠಾಣೆಯ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ್ ಲಂಬಿ, ಪಿಎಸ್ಐ ನವೀನ್, ಸಿಬ್ಬಂದಿಗಳಾದಂತ ರಾಘು, ವಿನಯ, ಲೋಕೇಶ್, ಅಭಿಷೇಕ್, ಹನುಮಂತ, ಸಂದೀಪ್, ತೋಟಪ್ಪ, ಉಷಾ, ಇರ್ಷಾದ್ ಜೊತೆಗೂಡಿ ಇಡೀ ರಾಮಚಂದ್ರ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೊರಬ ಠಾಣೆಯ ಪೊಲೀಸರ ಈ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ, ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…








