ಶಿವಮೊಗ್ಗ: ನವೆಂಬರ್.30ರಂದು ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೇ ಕೊರಚ ಕೊರಮರಿಗೆ ಸೂಕ್ತ ಸ್ಥಾನ ಮಾನವನ್ನು ಬೈಲಾದಲ್ಲಿ ನೀಡಿಲ್ಲ ಎಂಬುದಾಗಿ ಆರೋಪಿಸಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲಾಗಿದೆ. ಇದರ ಹಿಂದೆ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಕೈವಾಡವಿದೆ ಎಂಬುದಾಗಿ ಆರೋಪ ಕೇಳಿ ಬಂದಿತ್ತು. ಈ ಎಲ್ಲಾ ವಿಚಾರಗಳಿಂದ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಹಿತರಕ್ಷಣಾ ಸಮಿತಿ ಸಿಡಿದೆದ್ದಿದೆ. ಇದನ್ನು ಖಂಡಿಸಿ ನಾಳೆ ಭಿಕ್ಷಾಟನೆ, ಪ್ರತಿಕೃತಿ ದಹನದಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿಯನ್ನು ಶ್ರೀ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಸಂಚಾಲಕರಾದಂತ ಎಂ.ಡಿ ಆನಂದ್ ಹಂಚಿಕೊಂಡಿದ್ದು, ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಭ್ರಷ್ಟಾಚಾರ ಮತ್ತು ಪಟ್ಟ ಭದ್ರ ಹಿತಾಸಕ್ತಿ ಯ ವಿರುದ್ಧ ದಿನಾಂಕ 27-11-2025 ರಂದು ಬೆಳಿಗ್ಗೆ 10-30 ರಿಂದ 1-00 ಗಂಟೆಯವರೆಗೆ ಸಾಗರ ಹೊಟೆಲ್ ವೃತ್ತದಲ್ಲಿ ಭಿಕ್ಷಾಟನೆ ಮತ್ತು ಪ್ಲೇ ಕಾರ್ಡ್ ಹಾಗೂ ಪ್ರತಿಕೃತಿ ದಹನ ನಡೆಸಲಾಗುತ್ತದೆ ಎಂದಿದ್ದಾರೆ.
ನಾಳೆ ಸಾಗರ ಹೋಟೆಲ್ ವೃತ್ತದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಶ್ರೀ ಮಾರಿಕಾಂಬ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆ ಪಾಲ್ಗೊಂಡು, ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟದಲ್ಲಿ ರೈತರನ್ನೇ ಸರ್ಕಾರ ಮರೆತಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿ
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








