Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಂಕಷ್ಟದ ಸಮಯದಲ್ಲಿ ಶ್ರೀಲಂಕಾಕ್ಕೆ ಭಾರತದ ನೆರವು: 38,000 ಮೆಟ್ರಿಕ್ ಟನ್ ಇಂಧನ ಪೂರೈಕೆ!

29/03/2026 9:54 PM
nitish kumar

ಬಿಹಾರ ರಾಜಕೀಯದಲ್ಲಿ ಸಂಚಲನ: ನಾಳೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಿತೀಶ್ ಕುಮಾರ್ ರಾಜೀನಾಮೆ?

29/03/2026 9:12 PM

ಎಚ್ಚರ! ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 1.28 ಕೋಟಿ ಕಳೆದುಕೊಂಡ ವ್ಯಕ್ತಿ | Cyber Crime Alert

29/03/2026 8:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿ.27, 28, 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ವಿಶ್ವ ಹವ್ಯಕ ಮಹಾ ಸಮ್ಮೇಳನ’ ಆಯೋಜನೆ
KARNATAKA

ಡಿ.27, 28, 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ವಿಶ್ವ ಹವ್ಯಕ ಮಹಾ ಸಮ್ಮೇಳನ’ ಆಯೋಜನೆ

By kannadanewsnow0925/12/2024 9:59 PM

ಶಿವಮೊಗ್ಗ: ಇದೇ ಡಿಸೆಂಬರ್ 27, 28 ಹಾಗೂ 29ರಂದು ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮುದಾಯದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಸಾಗರ ತಾಲ್ಲೂಕು ಹವ್ಯಕ ಸಮಾಜದ ಮುಖಂಡ ಹೂ.ಬಾ ಅಶೋಕ್ ಮನವಿ ಮಾಡಿದ್ದಾರೆ.

ಇಂದು ಸಾಗರ ನಗರದ ಅಣಲೆಕೊಪ್ಪದಲ್ಲಿರುವಂತ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದಂತ ಅವರು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.27ರಿಂದ ಮೂರು ದಿನಗಳ ಕಾಲ ತೃತೀಯ ವಿಶ್ವ ಹವ್ಯಕ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಬಾರಿ ವಿಶಿಷ್ಟ, ಅಷ್ಟೇ ವಿಶೇಷ ರೀತಿಯಲ್ಲಿ ಆಯೋಜಿಸಲಾಗಿದೆ ಎಂದರು.

ಈಗಾಗಲೇ ಸಮುದಾಯದ ಹಲವು ಮುಖಂಡರು ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಸಮ್ಮೇಳನದಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ. ಸಿದ್ದಾಪುರ, ಶಿರಸಿ, ಹೊನ್ನಾವರ, ಯಲ್ಲಾಪುರ, ಹಾಸನ, ಚಿಕ್ಕಮಗಳೂರು ಸೇರಿದಂತೆ ಹವ್ಯಕ ಸಮುದಾಯದವರು ಹೆಚ್ಚಿರುವೆಡೆ ಸಭೆ ನಡೆಸಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಈ ಬಾರಿ 3000ಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆಯಿದೆ. ಸಾಗರದಿಂದಲೇ 300ಕ್ಕೂ ಹೆಚ್ಚು ಸಮುದಾಯದ ಜನರು ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಅನೇಕರು ಸ್ವಯಂ ಸೇವಕರಾಗಿ ತೆರಳಿ, ಸಮ್ಮೇಳನ ಪೂರ್ವಭಾವಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಾಗರದ 50 ಸ್ವಯಂ ಸೇವಕರು ಬೆಂಗಳೂರಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ತೃತೀಯ ವಿಶ್ವ ಹವ್ಯಕ ಮಹಾ ಸಮ್ಮೇಳನದಲ್ಲಿ ವಿಶೇಷವಾಗಿ ಎಲ್ಲಾ ಸಮುದಾಯದ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ. 8 ಪೀಠಾಧಿಪತಿಗಳು, ಕಂಚಿ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ವಿವಿಧ ಸ್ವಾಮೀಗಳು ಭಾಗಿಯಾಗಿ, ಅನುಘ್ರಹ ಮಾಡಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವರು, ಶಾಸಕರು ಸೇರಿದಂತೆ ಇತರೆ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಈಗಾಗಲೇ ತೃತೀಯ ವಿಶ್ವ ಹವ್ಯಕ ಮಹಾ ಸಮ್ಮೇಳನದ ಸಂಚಾಲಕರಾದಂತ ಸಾಗರ ಹೆಚ್.ಎನ್ ಉಮೇಶ್ ಬೆಂಗಳೂರಿಗೆ ತೆರಳಿದ್ದು, ಸಮ್ಮೇಳನ ಪೂರ್ವಭಾಗಿ ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದಾವೆ. ಈ ಸಮ್ಮೇಳನದಲ್ಲಿ ಎಲ್ಲರೂ ತಪ್ಪದೇ ಭಾಗಿಯಾಗುವಂತೆ ಮನವಿ ಮಾಡಿದರು.

ಈ ಬಾರಿ 7 ವಿಭಾಗದಲ್ಲಿ 81 ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಗುತ್ತಿದೆ. ಸಾಗರದ 60ಕ್ಕೂ ಹೆಚ್ಚು ಸಾಧಕರನ್ನು ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸನ್ಮಾನಿಸಲಾಗುತ್ತಿದೆ. ಒಟ್ಟು 567 ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ತೃತೀಯ ವಿಶ್ವ ಹವ್ಯಕ ಮಹಾ ಸಮ್ಮೇಳನದಲ್ಲಿ ಹವ್ಯಕ ಸಂಸ್ಕೃತಿ, ಊಟ, ಖಾದ್ಯಗಳ ಪ್ರದರ್ಶನವಿರಲಿದೆ. ಆಹಾರ ಮೇಳದಲ್ಲಿ ಹವ್ಯಕ ಆಹಾರ ಪದ್ಧತಿ ಸೇರಿದಂತೆ ವಿವಿಧ ಭೋಜನದ ಸವಿ ಭಾಗಿಯಾದವರಿಗೆ ಸಿಗಲಿದೆ. ಆಹಾರ ಮೇಳಕ್ಕಾಗೇ ಪ್ರತ್ಯೇಕ ವ್ಯವಸ್ಥೆ ಕೂಡ ಈ ಬಾರಿ ಅಧ್ಯಕ್ಷರಾದಂತ ಗಿರಿಧರ ಕಜೆ ಅವರು ಮಾಡಿದ್ದಾರೆ ಎಂದರು.

ಈ ಬಳಿಕ ಮಾತನಾಡಿದಂತ ಶ್ರೀಧರ್ ಭಟ್ ಅವರು, ಹವ್ಯಕ ಮಹಾ ಸಭಾ 1943ರಲ್ಲಿ ರಚನೆಯಾಗಿದೆ. 81 ವರ್ಷ ಆಗಿರುವ ಕಾರಣ 81 ಸಾಧಕರಿಗೆ ಹವ್ಯಕ ಸಮುದಾಯದಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸಂಘದಲ್ಲಿ 35,000ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಸಮ್ಮೇಳನ ಮುಗಿಯುವುದರ ಒಳಗಾಗಿ 1 ಲಕ್ಷ ಸದಸ್ಯರ ಗುರಿಯನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದರು.

ಈ ಸುದ್ದಿಗೋಷ್ಠಿಯ ವೇಳೆಯಲ್ಲಿ  ರಾಜಲಕ್ಷ್ಮಿ, ಮಂಜುನಾಥ್ ಮತ್ತಿಕೊಪ್ಪ, ರಮೇಶ್ ಹಾರೆಕೊಪ್ಪ, ಐ.ವಿ.ಹೆಗಡೆ, ರವಿ ಕೈತೋಟ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BIG NEWS: ಶಾಸಕ ಮುನಿರತ್ನ ರಾಜೀನಾಮೆಗೆ ಒತ್ತಡ, ಮರು ಚುನಾವಣೆಗೆ ಷಡ್ಯಂತ್ರ: ಬಿ.ವೈ ವಿಜಯೇಂದ್ರ ಸ್ಟೋಟಕ ಹೇಳಿಕೆ | BY Vijayendra

ಬೆಂಗಳೂರು ಮತ್ತು ತಿರುವನಂತಪುರಂ ನಾರ್ತ್ ನಡುವೆ ವಿಶೇಷ ರೈಲುಗಳ ಸಂಚಾರ

‘ನಟ ಶಿವರಾಜ್ ಕುಮಾರ್’ ಆರೋಗ್ಯದ ಬಗ್ಗೆ ಈ ಬಿಗ್ ಅಪ್ ಡೇಟ್ ಕೊಟ್ಟ ‘ಪುತ್ರಿ ನಿವೇದಿತಾ’ | Actor Shivarajkumar Health Update

Share. Facebook Twitter LinkedIn WhatsApp Email

Related Posts

ಎಚ್ಚರ! ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 1.28 ಕೋಟಿ ಕಳೆದುಕೊಂಡ ವ್ಯಕ್ತಿ | Cyber Crime Alert

29/03/2026 8:35 PM2 Mins Read

Rain Alert: ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

29/03/2026 8:31 PM1 Min Read

ಬೆಂಗಳೂರಲ್ಲಿ ಬಳಿ ಸರಣಿ ಅಪಘಾತ: ಆಕ್ರೋಶಗೊಂಡ ಸಾರ್ವಜನಿಕರಿಂದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಧರ್ಮದೇಟು

29/03/2026 8:05 PM1 Min Read
Recent News

ಸಂಕಷ್ಟದ ಸಮಯದಲ್ಲಿ ಶ್ರೀಲಂಕಾಕ್ಕೆ ಭಾರತದ ನೆರವು: 38,000 ಮೆಟ್ರಿಕ್ ಟನ್ ಇಂಧನ ಪೂರೈಕೆ!

29/03/2026 9:54 PM
nitish kumar

ಬಿಹಾರ ರಾಜಕೀಯದಲ್ಲಿ ಸಂಚಲನ: ನಾಳೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಿತೀಶ್ ಕುಮಾರ್ ರಾಜೀನಾಮೆ?

29/03/2026 9:12 PM

ಎಚ್ಚರ! ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 1.28 ಕೋಟಿ ಕಳೆದುಕೊಂಡ ವ್ಯಕ್ತಿ | Cyber Crime Alert

29/03/2026 8:35 PM

Rain Alert: ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

29/03/2026 8:31 PM
State News
KARNATAKA

ಎಚ್ಚರ! ಆನ್‌ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 1.28 ಕೋಟಿ ಕಳೆದುಕೊಂಡ ವ್ಯಕ್ತಿ | Cyber Crime Alert

By kannadanewsnow0929/03/2026 8:35 PM KARNATAKA 2 Mins Read

ಚಿಕ್ಕಮಗಳೂರು: “ಕಡಿಮೆ ಹೂಡಿಕೆ, ಅಲ್ಪ ಅವಧಿಯಲ್ಲಿ ಕೋಟಿ ಕೋಟಿ ಲಾಭ” – ಇಂತಹ ಆಕರ್ಷಕ ಜಾಹೀರಾತುಗಳು ಅಥವಾ ವಾಟ್ಸಾಪ್ ಸಂದೇಶಗಳು…

Rain Alert: ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

29/03/2026 8:31 PM

ಬೆಂಗಳೂರಲ್ಲಿ ಬಳಿ ಸರಣಿ ಅಪಘಾತ: ಆಕ್ರೋಶಗೊಂಡ ಸಾರ್ವಜನಿಕರಿಂದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಧರ್ಮದೇಟು

29/03/2026 8:05 PM

ಸಾಗರದಲ್ಲಿ ಕೌಟುಂಬಿಕ ಕಲಹಕ್ಕೆ ಮನನೊಂದು ಸ್ಟಾಫ್ ನರ್ಸ್ ಆತ್ಮಹತ್ಯೆ ಯತ್ನ, ಸ್ಥಿತಿ ಗಂಭೀರ

29/03/2026 8:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.