ಬೆಂಗಳೂರು: ಗಂಡ ಎಂಬ ಪದವು ಐಪಿಸಿ ಸೆಕ್ಷನ್ 498ಎ( ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ) ಅಲ್ಲಿ ಬಳಸಿರುವುದು ಕೇವಲ ಕಾನೂನು ಬದ್ಧವಾಗಿ ವಿವಾಹವಾದ ಸಂಬಂಧಕ್ಕೆ ಮಾತ್ರ ಸೀಮಿತವಾಗೋದಿಲ್ಲ. ಅದು ಲಿವ್-ಇನ್-ರಿಲೇಷನ್ ಶಿಪ್ ಗಳಿಗೂ ಅನ್ವಯಿಸಲಿದೆ ಎಂಬುದಾಗಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ.
ಈ ಕುರಿತಂತೆ ಅರ್ಜಿಯೊಂದರ ವಿಚಾರಣೆಯ ವೇಳೆಯಲ್ಲಿ ಈ ಅಂಶವನ್ನು ಹೈಕೋರ್ಟ್ ಉಲ್ಲೇಖಿಸಿದೆ. ಅದರಲ್ಲಿ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಬಳಸಿರುವಂತ ಗಂಡ ಎಂಬ ಪದವು ಕೇವಲ ಕಾನೂನು ಬದ್ಧವಾಗಿ ಮಾನ್ಯವಾದಂತ ವಿವಾಹ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಲಿವ್-ಇನ್ ರಿಲೇಷನ್ ಶಿಪ್ ಗಳಿಗೂ ಅನ್ವಯಿಸುತ್ತದೆ ಎಂಬುದಾಗಿ ತಿಳಿಸಿದೆ.
ಇದಷ್ಟೇ ಅಲ್ಲದೇ ವಿವಾಹದ ಸ್ವರೂಪದ ಸಂಬಂಧಗಳಿಗೂ ಕ್ರೌರ್ಯದ ವಿಚಾರದಲ್ಲಿ ಐಪಿಸಿ ಸೆಕ್ಷನ್ 498ಎ ಅನ್ವಯವಾಗಲಿದೆ ಎಂಬುದಾಗಿ ಅಭಿಪ್ರಾಯ ಪಟ್ಟಂತ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರಿದ್ದಂತ ನ್ಯಾಯಪೀಠವು, ಅರ್ಜಿಯನ್ನು ವಜಾಗೊಳಿಸಿತು.
ಹೈಕೋರ್ಟ್ ಗೆ ದೂರುದಾರೆಯೊಂದಿಗೆ ಅರ್ಜಿದಾರನ ವಿವಾಹ ಕಾನೂನಾತ್ಮಕವಾಗಿ ಅಮಾನ್ಯವಾಗಿದೆ. ಹೀಗಾಗಿ 498ಎ ಅನ್ವಯಿಸೋದಿಲ್ಲ ಎಂಬುದಾಗಿ ಶಿವಮೊಗ್ಗ ಮೂಲದ ಅರ್ಜಿದಾರರ ಪರವಾಗಿ ವಕೀಲರು ವಾದಿಸಿದ್ದರು. ಅಲ್ಲದೇ ಅರ್ಜಿದಾರನು ಈಗಾಗಲೇ ವಿವಾಹಿತನಾಗಿದ್ದಾನೆ. ಆತ ದೂರುದಾರೆಯ ಗಂಡ ಎಂದು ಪರಿಗಣಿಸಲಾಗೋದಿಲ್ಲ. ಈ ಹಿನ್ನಲೆಯಲ್ಲಿ 498ಎ ಅಡಿಯಲ್ಲಿ ಪ್ರಕರಣ ದಾಖಲಿಸದಂತೆ ಮನವಿ ಮಾಡಲಾಗಿತ್ತು.
ಅರ್ಜಿದಾರರ ಪರ ವಕೀಲರ ಈ ವಾದವನ್ನು ಒಪ್ಪದಂತ ಹೈಕೋರ್ಟ್, ತನ್ನ ಮೊದಲ ವಿವಾಹವನ್ನು ಮರೆಮಾಚಿ ದೂರುದಾರೆ ಜೊತೆಗೆ ಮದುವೆ ಸ್ವರೂಪದ ಸಂಬಂಧ ಇಟ್ಟುಕೊಂಡಿದ್ದಾರೆ. ಜೊತೆಗೆ ಮೊದಲೇ ಬೇರೊಬ್ಬಳ ಜೊತೆಗೆ ಮದುವೆಯಾಗಿ, ಒಂದು ಮಗುವನ್ನೂ ಹೊಂದಿದ್ದಾರೆ. ಹೀಗಾಗಿ ಆ ವಿಷಯ ಮರೆಮಾಚಿ ದೂರುದಾರೆ ಜೊತೆಗೆ ಮದುವೆಯಾಗಿ ವಾಸ ಮಾಡಿದ್ದಾರೆ. ಆಕೆಯ ಕುಟುಂಬದಿಂದ ಚಿನ್ನ, ಬೆಳ್ಳಿ, ನಗದು ಪಡೆದಿದ್ದಾನೆ ಎಂಬುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿದೆ ಎಂದಿತು.
ಇದಷ್ಟೇ ಅಲ್ಲದೇ ಹೆಚ್ಚಿನ ಬೇಡಿಕೆಯನ್ನು ಮಾಡಿ, ಹಿಂಸೆ, ಕ್ರೌರ್ಯವನ್ನು ನಡೆಸಲಾಗಿದೆ. ಆಕೆ ಪ್ರಾಣ ತೆಗೆಯಲೂ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಅರ್ಜಿದಾರರ ವಾದವನ್ನು ಒಪ್ಪಲು ಆಗದು. ಕಾನೂನಾತ್ಮಕವಾಗಿಲ್ಲ ಎಂಬ ನೆಪದಲ್ಲಿ 498ಎಯಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠವು ಸ್ಪಷ್ಟ ಪಡಿಸಿತು.
ರಾಜ್ಯದಲ್ಲಿ ‘ಸಿಎಂ ಬದಲಾವಣೆ’ ವಿಚಾರ: ಈ ಗುಟ್ಟು ರಿವೀಲ್ ಮಾಡಿದ ‘ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ’
ರೈಲುಗಳಲ್ಲಿ ‘ಹಲಾಲ್ ಮಾಂಸ’ ಮಾತ್ರ ಪೂರೈಕೆ ನಿಷೇಧ ; ವರದಿ ಕೋರಿ ರೈಲ್ವೆಗೆ NHRC ನೋಟಿಸ್
BREAKING : ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡದಿದ್ದರೆ ಸರ್ಕಾರ ಪತನ : ವೀರೇಶ್ವರ ಸ್ವಾಮೀಜಿ ಭವಿಷ್ಯ








