ಚನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಖಾಸಗಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಪರಿಶಿಷ್ಟ ಜಾತಿ (ಅರುಂಧತಿಯಾರ್) ಸಮುದಾಯದ 8 ನೇ ತರಗತಿ ವಿದ್ಯಾರ್ಥಿನಿಯನ್ನು ತರಗತಿಯ ಹೊರಗೆ ಪರೀಕ್ಷೆ ಬರೆಯುವಂತೆ ಮಾಡಲಾಗಿದೆ ಎನ್ನವ ಆರೋಪ ಕೇಳಿ ಬಂದಿದೆ.
ಬಾಲಕಿ ಏಪ್ರಿಲ್ 5 ರಂದು ಪ್ರೌಢಾವಸ್ಥೆಗೆ ಪ್ರವೇಶಿಸಿದಳು ಎನ್ನಲಾಗಿದೆ. ಬಳಿಕ ಏಪ್ರಿಲ್ 7 ರಂದು ವಿಜ್ಞಾನ ಪರೀಕ್ಷೆಗೆ ಮತ್ತು ಏಪ್ರಿಲ್ 9 ರಂದು ಸಮಾಜ ವಿಜ್ಞಾನ ಪರೀಕ್ಷೆಗೆ ತರಗತಿಯ ಹೊರಗೆ ಕುಳಿತುಕೊಳ್ಳುವಂತೆ ಶಾಲೆಯು ಅವಳನ್ನು ಒತ್ತಾಯಿಸಿದೆ ಎಂದು ಆರೋಪಿಸಲಾಗಿದೆ, ಇದು ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯ ತಾಯಿ ಏಪ್ರಿಲ್ 7 ರ ಸಂಜೆ ತನ್ನ ಮಗಳಿಂದ ಘಟನೆಯ ಬಗ್ಗೆ ಕೇಳಿದ ನಂತರ ಮರುದಿನ ಅವಳು ಶಾಲೆಗೆ ಭೇಟಿ ನೀಡಿದಾಗ, ತನ್ನ ಮಗಳು ಇನ್ನೂ ಪರೀಕ್ಷಾ ಕೊಠಡಿಯ ಹೊರಗೆ ಪ್ರತ್ಯೇಕವಾಗಿರುವುದನ್ನು ನೋಡಿದ್ದಾಳೆ ಎನ್ನಲಾಗಿದೆ. ಮಹಿಳೆ ಈ ದೃಶ್ಯದ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಏಪ್ರಿಲ್ 7 ರಂದು ಸಂಜೆ ಬಾಲಕಿ ತನ್ನ ತಾಯಿಗೆ ಈ ಘಟನೆಯನ್ನು ತಿಳಿಸಿದ್ದಾಳೆ. ತಾಯಿ ಬುಧವಾರ ಶಾಲೆಗೆ ಭೇಟಿ ನೀಡಿದಾಗ ತನ್ನ ಮಗಳನ್ನು ಪರೀಕ್ಷೆಗೆ ಹಾಜರಾಗಲು ತರಗತಿಯ ಹೊರಗೆ ಕುಳಿತುಕೊಳ್ಳುವಂತೆ ಮಾಡಿರುವುದನ್ನು ಗಮನಿಸಿದ್ದಾರೆ. ಆಕೆ ತನ್ನ ಮೊಬೈಲ್ ಕ್ಯಾಮೆರಾ ಬಳಸಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾಳೆ. ಈ ವಿಡಿಯೋ ಬುಧವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಲೆಯ ಕ್ರಮವನ್ನು ದಲಿತ ಕಾರ್ಯಕರ್ತರೊಬ್ಬರು ಖಂಡಿಸಿದ್ದಾರೆ.