ಬೆಂಗಳೂರು: ಮೂಡಾ ಪ್ರಕರಣದಲ್ಲಿ ಇಡಿ ನೋಟಿಸ್ ವಜಾ ಮಾಡಿದಂತ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮೂಡಾ ಪ್ರಕರಣದಲ್ಲಿ ಇ.ಡಿ ನೋಟಿಸ್ ವಜಾಮಾಡಿ ಘನ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು, ಘನ ಸುಪ್ರೀಂ ಕೋರ್ಟ್ ಎತ್ತಿ ತಿಹಿಡಿದಿರುವುದನ್ನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕುಟುಂಬವನ್ನು ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸಲು ಪ್ರತಿಪಕ್ಷಗಳು, ಸ್ವಾಯತ್ತ ಸಂಸ್ಥೆ ಇ.ಡಿ.ಮೂಲಕ ನಡೆಸಿದ ಸಂಚು ಇಡೀ ಜಗತ್ತಿನ ಮುಂದೆ ಬಯಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೂಡಾ ಪ್ರಕರಣದಲ್ಲಿ ಇ.ಡಿ ನೋಟಿಸ್ ವಜಾಮಾಡಿ ಘನ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು, ಘನ ಸುಪ್ರೀಂ ಕೋರ್ಟ್ ಎತ್ತಿ ತಿಹಿಡಿದಿರುವುದನ್ನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಶ್ರೀ @siddaramaiah ಅವರ ಕುಟುಂಬವನ್ನು ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸಲು ಪ್ರತಿಪಕ್ಷಗಳು, ಸ್ವಾಯತ್ತ ಸಂಸ್ಥೆ ಇ.ಡಿ.ಮೂಲಕ ನಡೆಸಿದ ಸಂಚು ಇಡೀ ಜಗತ್ತಿನ…
— Eshwar Khandre (@eshwar_khandre) July 21, 2025