ಕಲಬುರ್ಗಿ: ವಸತಿ ಶಾಲೆಗೆ ಸೇರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು 7ನೇ ತರಗತಿಯ ನಾರಾಯಣ ರಾಠೋಡ್(13) ಎಂಬುದಾಗಿ ತಿಳಿದು ಬಂದಿದೆ. ಕಲಬುರ್ಗಿಯ ಮುಧೋಳದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ನಾರಾಯಣ ನೇಣಿಗೆ ಶರಣಾಗಿದ್ದಾನೆ.
ಕಲಬುರ್ಗಿ ತಾಲೂಕಿನ ಪಾಣೆಗಾಂವ್ ನ ನಾರಾಯಣ ನೇಣಿಗೆ ಶರಣಾಗಿದ್ದಾನೆ. 15 ದಿನಗಳ ಹಿಂದೆಯೂ ಬಾಲಕ ನಾರಾಯಣ ಆತ್ಮಹತ್ಯೆಗೆ ಯತ್ನಿಸಿದ್ದನು. ವಸತಿ ಶಾಲೆಗೆ ಸೇರಿಸಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬುದಾಗಿಯೂ ಪೋಷಕರಿಗೆ ಹೇಳಿದ್ದನಂತೆ. ಆದರೇ ಪೋಷಕರು ಬಾಲಕನನ್ನು ಮನವೊಲಿಸಿ ವಸತಿ ಶಾಲೆಗೆ ಬಿಟ್ಟು ಬಂದಿದ್ದರು. ತಾಯಿಯನ್ನು ಬಿಟ್ಟಿರಲಾರದೇ ಇಂದು ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
BIG NEWS: ಹಾಸನದಲ್ಲಿ 20 ಜನರು ಮಾತ್ರ ಹೃದಯಾಘಾತದಿಂದ ಸಾವು: ರಾಜ್ಯ ಸರ್ಕಾರಕ್ಕೆ ತಜ್ಞರು ವರದಿ ಸಲ್ಲಿಕೆ