Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ಯಶವಂತಪುರ–ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ

23/02/2026 4:57 PM

ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ: ಅರಣ್ಯ ಸಚಿವ ಈಶ್ವರ ಖಂಡ್ರೆ

23/02/2026 4:55 PM

ರಾಜ್ಯದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನ: ಡಿಸಿಎಂ ಡಿ.ಕೆ ಶಿವಕುಮಾರ್

23/02/2026 4:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಇರೋದು ತೆರಿಗೆ ಭಯೋತ್ಪಾದಕ ಸರ್ಕಾರ: ಜೆಡಿಎಸ್ ಮಾಜಿ MLC ಹೆಚ್.ಎಂ ರಮೇಶ್ ಗೌಡ ಕಿಡಿ
KARNATAKA

ರಾಜ್ಯದಲ್ಲಿ ಇರೋದು ತೆರಿಗೆ ಭಯೋತ್ಪಾದಕ ಸರ್ಕಾರ: ಜೆಡಿಎಸ್ ಮಾಜಿ MLC ಹೆಚ್.ಎಂ ರಮೇಶ್ ಗೌಡ ಕಿಡಿ

By kannadanewsnow0907/11/2025 3:37 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದ ನೆಪ ಇಟ್ಟುಕೊಂಡು ರಾಜ್ಯದಲ್ಲಿ ತೆರಿಗೆ ಭಯೋತ್ಪಾದನೆ ಸೃಷ್ಟಿ ಮಾಡುತ್ತಿದೆ ಎಂದು ಜೆಡಿಎಸ್ ಗಂಬೀರವಾಗಿ ಆರೋಪ ಮಾಡಿದೆ.

ಈ ನಿಟ್ಟಿನಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ನಗರದ ಪ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ಸಾವಿರಾರು ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರವನ್ನು ತೆರಿಗೆ ಭಯೋತ್ಪಾದಕ ಸರ್ಕಾರ (Tax Terrorism Government) ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ ಅವರು; ರಾಜ್ಯದಲ್ಲಿ ಸುಳ್ಳು ಮತ್ತು ಅಭಿವೃದ್ಧಿ ಮಾರಕ ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಜನ ವಿರೋಧಿ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿದೆ. ಗ್ಯಾರಂಟಿಗಳಿಗೆ ವಾರ್ಷಿಕ ಕೇವಲ ₹52,000 ಕೋಟಿಯಷ್ಟೇ ಅನುದಾನ ನೀಡುತ್ತಿದ್ದರೂ,₹4,09,549 ಕೋಟಿಯಷ್ಟು ಆಯವ್ಯಯದ ಹಣವೆಲ್ಲವೂ ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದೆ. ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿಗೆ ತಿಲಾಂಜಲಿ ಇಟ್ಟು ದರ ಏರಿಕೆ, ಬೆಲೆ ಹೆಚ್ಚಳದ ಮೂಲಕ ಲಕ್ಷ್ಯಾಂತರ ಕೋಟಿ ರುಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.

ನಿರಂತರ ದರ, ಶುಲ್ಕ ಏರಿಕೆ:

ಹೊಸದಾಗಿ ಬಿ ಖಾತಾದಿಂದ ಎ ಖಾತಾ ಎನ್ನುವ ಜನರನ್ನು ಸುಲಿಗೆ ಮಾಡುವ ಬೋಗಸ್ ಕಾರ್ಯಕ್ರಮವೂ ಸೇರಿ ಅಬಕಾರಿ ಶುಲ್ಕ, ಮುದ್ರಾಂಕ ಮತ್ತು ಮಾರ್ಗಸೂಚಿ ಮೌಲ್ಯದ ಶುಲ್ಕ, ವಿದ್ಯುತ್ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ಹಾಲು ಮತ್ತು ಮೊಸರು ದರ ಹೆಚ್ಚಳ, ಇದರ ಜೊತೆಗೆ, ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕ ಕೂಡ ಹೆಚ್ಚಿಸಲಾಗಿದೆ.

ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ತಾನು ಜನರ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಕಪಟ ನಾಟಕವಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಜನರಿಂದ ಹಣ ಸುಲಿಗೆ ಮಾಡುವುದು, ಆ ಹಣವನ್ನು ಗುತ್ತಿಗೆದಾರರ ಪೋಷಿತ ಅನಗತ್ಯ, ಅನಪೇಕ್ಷಿತ ಯೋಜನೆಗಳನ್ನು ರೂಪಿಸಿ ಅವುಗಳ ಮೇಲೆ ಸುರಿದಂತೆ ಮಾಡಿ ಮತ್ತೆ ಅದೇ ಹಣವನ್ನು ತನ್ನ ಜೀಬಿಗೆ ಇಳಿಸಿಕೊಳ್ಳುವ ಮೋಸದ ಜಾಲವನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ. ಅಲ್ಲದೆ, ಈ ಸರ್ಕಾರದ ಮೇಲೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಎಂದೂ, ಯಾವ ಸರ್ಕಾರದ ಮೇಲೆಯೂ ಬಾರದಷ್ಟು ಭ್ರಷ್ಟಾಚಾರ ಆರೋಪಗಳು ಬಂದಿವೆ. ಆಂತರಿಕ ಕಚ್ಚಾಟ, ಅಧಿಕಾರ ಲಾಲಸೆಯಿಂದ ಹಣ ಕೊಳ್ಳೆ ಹೊಡೆಯುವುದರಲ್ಲಿ ಸಚಿವರುಗಳು ಪೈಪೋಟಿಗೆ ಇಳಿದಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್ ಸರ್ಕಾರಕ್ಕೆ ಜಿಬಿಎ ಎಟಿಎಂ ಆಗಿದೆ:

ದುಡ್ಡು ಕೊಳ್ಳೆ ಹೊಡೆಯಲು ಗ್ರೇಟರ್ ಬೆಂಗಳೂರು ನಗರವನ್ನು ಎಟಿಎಂ ಮಾಡಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರವು, ನಾಗರಿಕರ ಆಸ್ತಿಗಳ ಮೇಲೆ ಅಧಿಕವಾಗಿ ತೆರಿಗೆಯನ್ನು ವಿಧಿಸಿ ನಾಗರೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮೂಲಕ ‘ತೆರಿಗೆ ಭಯೋತ್ಪಾದನೆ’ ಸೃಷ್ಟಿಸುವ ಮೂಲಕ ‘ತೆರಿಗೆ ಭಯೋತ್ಪಾದಕ ಸರ್ಕಾರ’ (Tax Terrorism Government) ಎಂದು ಕುಖ್ಯಾತಿ ಆಗಿದೆ. ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲದ ರೀತಿಯಲ್ಲಿ ಜನರನ್ನು ತೆರಿಗೆ ರೂಪದಲ್ಲಿ ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರ ‘ತೆರಿಗೆ ಪಿಪಾಸು ಸರ್ಕಾರ’ವಾಗಿ ಜನರನ್ನು ತೆರಿಗೆ ಬೆಂಕಿಯಲ್ಲಿ ಬೇಯಿಸುತ್ತಿದೆ ಎಂದು ಮಾಜಿ ಶಾಸಕರು ಕಿಡಿಕಾರಿದರು.

ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದ ಕಾಂಗ್ರೆಸ್ ಸರಕಾರವು, ಜಿಎಸ್’ಟಿ ಸರಳೀಕರಣದ ಬಳಿಕ ರಾಜ್ಯದಲ್ಲಿ ಬೆಲೆಗಳ ಇಳಿಕೆ ಮಾಡಬೇಕಿತ್ತು. ಆದರೆ ಏಕಾಏಕಿ ನಂದಿನಿ ತುಪ್ಪದ ಬೆಲೆಯನ್ನು ಪ್ರತೀ ಕೆಜಿಗೆ ₹90 ಏರಿಸುವ ಮೂಲಕ ಗ್ರಾಹಕರ ದರೋಡೆಗೆ ಇಳಿದಿದೆ. ಜನ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ನಾಡಿನ ಬಡವರು, ಜನಸಾಮಾನ್ಯರ ಉದ್ಧಾರ ಅಸಾಧ್ಯವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ರಮೇಶ್ ಗೌಡ ಆರೋಪ ಮಾಡಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಪಕ್ಷದ ಮುಖಂಡರಾದ ತಿಮ್ಮೇಗೌಡ, ಶೈಲಜಾ ರಾವ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ರಾಜ್ಯ ಸರ್ಕಾರದ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಇಂದಿನಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಬಂದ್: ಸಚಿವ ಈಶ್ವರ್ ಖಂಡ್ರೆ

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದ ಸಿಎಂ ಸಿದ್ಧರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ: HDK

Share. Facebook Twitter LinkedIn WhatsApp Email

Related Posts

GOOD NEWS: ಯಶವಂತಪುರ–ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ

23/02/2026 4:57 PM1 Min Read

ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ: ಅರಣ್ಯ ಸಚಿವ ಈಶ್ವರ ಖಂಡ್ರೆ

23/02/2026 4:55 PM2 Mins Read

ರಾಜ್ಯದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನ: ಡಿಸಿಎಂ ಡಿ.ಕೆ ಶಿವಕುಮಾರ್

23/02/2026 4:53 PM3 Mins Read
Recent News

GOOD NEWS: ಯಶವಂತಪುರ–ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ

23/02/2026 4:57 PM

ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ: ಅರಣ್ಯ ಸಚಿವ ಈಶ್ವರ ಖಂಡ್ರೆ

23/02/2026 4:55 PM

ರಾಜ್ಯದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನ: ಡಿಸಿಎಂ ಡಿ.ಕೆ ಶಿವಕುಮಾರ್

23/02/2026 4:53 PM

BREAKING : ನೆದರ್ಲ್ಯಾಂಡ್ಸ್’ನ ಪ್ರಧಾನ ಮಂತ್ರಿಯಾಗಿ ಅತ್ಯಂತ ಕಿರಿಯ, ಸಲಿಂಗಕಾಮಿ ‘ರಾಬ್ ಜೆಟ್ಟನ್’ ಪ್ರಮಾಣವಚನ ಸ್ವೀಕಾರ

23/02/2026 4:44 PM
State News
KARNATAKA

GOOD NEWS: ಯಶವಂತಪುರ–ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ

By kannadanewsnow0923/02/2026 4:57 PM KARNATAKA 1 Min Read

ಮೈಸೂರು: ಮಾರಿಕಾಂಬಾ ದೇವಿ ಜಾತ್ರೆ ಮಹೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಯಶವಂತಪುರ–ಶಿವಮೊಗ್ಗ ಟೌನ್ ನಡುವೆ ಸಂಚರಿಸುವ…

ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ: ಅರಣ್ಯ ಸಚಿವ ಈಶ್ವರ ಖಂಡ್ರೆ

23/02/2026 4:55 PM

ರಾಜ್ಯದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನ: ಡಿಸಿಎಂ ಡಿ.ಕೆ ಶಿವಕುಮಾರ್

23/02/2026 4:53 PM

BIG NEWS : ರಾಜ್ಯದಲ್ಲಿ ಸಾಲಬಾಧೆಗೆ ರೈತ ಬಲಿ : ರಾಯಚೂರಲ್ಲಿ ಕೆರೆಗೆ ಹಾರಿ ರೈತ ಆತ್ಮಹತ್ಯೆಗೆ ಶರಣು!

23/02/2026 4:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.