ಬೆಂಗಳೂರು: ಕರ್ನಾಟಕ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡರು ರಾಜ್ಯದಲ್ಲಿ ಖಾಲಿ ಇರುವ 1500 ಗ್ರಾಮ ಆಡಳಿತ ಅಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದೆ.
ರಾಜ್ಯದಲ್ಲಿ 1 ಸಾವಿರ ಗ್ರಾಮ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ತಿಂಗಳೊಳಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
BREAKING: ‘KCET’ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ, ಇಲ್ಲಿದೆ ನೂತನ ‘ದಿನಾಂಕ’ |KCET 2024
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ!
ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. : ಸಿ.ಎಂ ಸಿದ್ದರಾಮಯ್ಯ
ಮೊಬೈಲ್ ಬಳಕೆದಾರರೇ ಗಮನಿಸಿ: ಈ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡುವಂತೆ Google ಸೂಚನೆ!
ವಿಧಾನಸಭೆಯ ಕಲಾಪದ ವೇಳೆ ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಖಾಲಿ ಹುದ್ದೆಗಳ ಭರ್ತಿ ಮಾಡುವುದರ ಜೊತೆಗೆ ನಿಯೋಜನೆ ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ ಸಚಿವರು, ಕುಂದಾಪುರ ತಾಲೂಕು ತಹಸೀಲ್ದಾರರ ಕಚೇರಿಯ 19 ಜನ ಸಿಬ್ಬಂದಿ ಬೇರೆಡೆ ನಿಯೋಜನೆ ಮೇಲೆ ಹೋಗಿರುವ ವಿಷಯ ತಿಳಿದುಬಂದಿದ್ದು, ಅವಶ್ಯವಿರುವ 5 ಜನರನ್ನು ಹೊರತುಪಡಿಸಿ ಉಳಿದ 14 ಜನರನ್ನು ಕೂಡಲೇ ಮೂಲಸ್ಥಳವಾದ ಕುಂದಾಪುರ ತಹಸೀಲ್ದಾರ್ ಕಚೇರಿಗೆ ಹಿಂದುರಿಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಹಿನ್ನೆಲೆಯಲ್ಲಿ ಇನ್ನು ಕೆಲವು ಪ್ರಕ್ರಿಯೆಗಳು ಬಾಕಿ ಇದ್ದು, ಅವುಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಇನ್ನೊಂದು ತಿಂಗಳುಗಳ ಒಳಗಾಗಿ ಸದರಿ ಹುದ್ದೆಗಳಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ ಅಂತ ಸಚಿವರು ಹೇಳಿದ್ದಾರೆ.
ಕಂದಾಯ ಇಲಾಖೆಯ 2 ಸಾವಿರ ನಿಯೋಜನೆ ಅರ್ಜಿಗಳು ನನ್ನಲ್ಲಿ ಬಾಕಿ ಇವೆ. ನಮ್ಮ ಸರಕಾರ ಬಂದ ಮೇಲೆ ಒಂದೇ ಒಂದು ನಿಯೋಜನೆ ಸಹ ಮಾಡಿಲ್ಲ; ಅಧಿಕಾರಿಗಳಿಗೂ ನಿಯೋಜನೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
2014ರ ನಂತರ ನೇಮಕವಾದ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಕಂದಾಯ ಇಲಾಖೆಯ ಸಂಬಂಧಿಸಿದ ವಿಷಯಗಳ ಕುರಿತು ತರಬೇತಿ ನೀಡಲು ಯೋಜನೆ ಸಿದ್ದಪಡಿಸಲಾಗುವುದು ಎಂದರು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಶಿಕ್ಷಣವನ್ನು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಪಡೆದಿರಬೇಕು.
– ಪಿಯುಸಿ ಹೊರತುಪಡಿಸಿ ಜೆಒಸಿ, ಡಿಪ್ಲೊಮ ಮತ್ತು ಇನ್ನಿತರ ಯಾವುದೇ ವಿದ್ಯಾರ್ಹತೆಗಳನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ.
– ಕಂಪ್ಯೂಟರ್ ಜ್ಞಾನ ಹೊಂದಿರಬೇಕು.