ಬೆಂಗಳೂರು : ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಪರಿಶಿಷ್ಟ ಜಾತಿಯ ಉಪ ಜಾತಿಗಳ ಯುವತಿ/ಯುವಕರನ್ನು ವಿವಾಹವಾದಲ್ಲಿ ಒಳ ಪಂಗಡಗಳ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಡಿ 2.00 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಅರ್ಹತೆಗಳು
ದಂಪತಿಗಳು ಪರಿಶಿಷ್ಟ ಜಾತಿ(SC)ಯ ಬೇರೆ ಬೇರೆ ಉಪಜಾತಿಯವರಾಗಿರಬೇಕು.
ವಯೋಮಿತಿ – ಯುವಕ 21 ರಿಂದ 45 ವರ್ಷ ಹಾಗೂ ಯುವತಿ 18 ರಿಂದ 42 ವರ್ಷ.
ಅಂತರ್ಜಾತಿ ವಿವಾಹ/ವಿಧವಾ ಮರು ವಿವಾಹ ಪ್ರೋತ್ಸಾಹಧನ ಪಡೆದವರು ಇದಕ್ಕೆ ಅರ್ಹರಲ್ಲ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ https://swdservices.karnataka.gov.in/swincentive/Intracaste/IntracasteHaHome.aspx