ಕಲಬುರ್ಗಿ: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತ್ರ, ರಾಜ್ಯಪಾಲರ ನಡೆದೆ ಸಚಿವ ಸಂಪುಟ ಅಸಮಾಧಾನಗೊಂಡಿದೆ. ಈ ಬೆನ್ನಲ್ಲೇ ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕುಲಪತಿ ನೇಮಕ ನಿರ್ಧಾರವನ್ನು ತನ್ನ ಸುಪರ್ಧಿಗೆ ರಾಜ್ಯ ಸರ್ಕಾರ ಪಡೆದಿದೆ.
ಮಂಗಳವಾರದಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸಿಎಂ ಆದಿಯಾಗಿ ಸಂಪುಟದ ಸಹೋದ್ಯೋಗಿಗಳು ರಾಜ್ಯಪಾಲರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ರಾಜ್ಯಪಾಲರ ಇತ್ತೀಚಿನ ನಡೆ ಸರಿಯಾದುದಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವಂತ ಸಚಿವ ಸಂಪುಟದ ಸದಸ್ಯರು, ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲಾಗಿದೆ.
ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ವಿಶ್ವವಿದ್ಯಾಲಯದ ಅನುದಾನ ಆಯೋಗವು ರಾಷ್ಟ್ರದಲ್ಲಿ ವಿವಿಗಳ ಸ್ಥಾನ ಆಡಳಿತ ನಿರ್ವಹಣೆ ಹಾಗೂ ಬೋಧನಾ ವರ್ಗದವರನ್ನು ನೇಮಿಸಿಕೊಳ್ಳಲು ಏಕರೂಪ ವ್ಯವಸ್ಥೆಯನ್ನು ರೂಪಿಸಲು ಅನುವುವಾಗುವಂತೆ ನಿಬಂಧನೆಗಳನ್ನು ಅನಸೂಚಿಸಿದೆ.
ಇನ್ನೂ ಕುಲಪತಿಗಳ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗಳು ಪ್ರಾಧ್ಯಾಪಕರ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕೆಂದು ನಿಯಮಿಸಲಾಗಿದೆ. ಈ ಮೂಲಕ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಟಕ್ಕರ್ ನೀಡುವಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಉದ್ಯೋಗ ವಾರ್ತೆ: ‘247 PDO ಹುದ್ದೆ’ಗಳ ನೇಮಕಕ್ಕೆ ಮತ್ತೆ ಅರ್ಜಿ ಆಹ್ವಾನ | PDO Recruitment
ಭೂಮಿ ಸಮೀಪಕ್ಕೆ ‘ಅಟ್ಲಾಸ್ ಧೂಮಕೇತು’: ಅ.27ರಂದು ಬರಿಗಣ್ಣಿಗೆ ಗೋಚರ | Atlas Comet